ಹೊಸಪೇಟೆ: ನರೇಂದ್ರ ಮೋದಿಪ್ರಧಾನಿ ಆಗಿರದಿದ್ರೆ ಪೆಟ್ರೋಲ್ ಬೆಲೆ 250 ಆಗುತ್ತಿತ್ತು ಎಂದು ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಹೇಳಿದ್ದಾರೆ.
ಹೊಸಪೇಟೆ- ಹರಿಹರ ಡೆಮು ರೈಲಿಗೆ ಚಾಲನೆ ನೀಡಿದ ನಂತರ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ಬದಲಾಗಿ ಯಾರೇ ಅಧಿಕಾರದಲ್ಲಿ ಇದ್ದಿದ್ದರೆ ಪೆಟ್ರೋಲ್ ಬೆಲೆ 200ರಿಂದ 250 ರೂ., ಡೀಸೆಲ್ ದರ 150 ಆಗುತ್ತಿತ್ತು ಎಂದರು.
ಮೋದಿ ಅವರು ಹಾರ್ಡ್ ವರ್ಕ್ ಮೂಲಕ ಉತ್ತಮ ಆಡಳಿತ ನಡೆಸುತ್ತಿದ್ದಾರೆ. ಜಾಗತಿಕ ಮಟ್ಟದಲ್ಲಿ ತೈಲ ದರ ಹೆಚ್ಚಿದರೂ ಸಾರ್ವಜನಿಕರ ಅನುಕೂಲಕ್ಕೆ ವಿಶೇಷ ರೈಲು ಬಿಟ್ಟಿದ್ದಾರೆ ಎಂದು ತಿಳಿಸಿದ್ದಾರೆ.



