Connect with us

Dvgsuddi Kannada | online news portal | Kannada news online

ಪಶುಸಂಗೋಪನೆಯ 2 ವರ್ಷದ ಡಿಪ್ಲೋಮಾ ಕೋರ್ಸ್ ಗೆ ಅರ್ಜಿ ಆಹ್ವಾನ; ಆಯ್ಕೆಯಾದ ವಿದ್ಯಾರ್ಥಿ ಗಳಿಗೆ 1000 ಮಾಸಿಕ ವಿದ್ಯಾರ್ಥಿ ವೇತನ

ಪ್ರಮುಖ ಸುದ್ದಿ

ಪಶುಸಂಗೋಪನೆಯ 2 ವರ್ಷದ ಡಿಪ್ಲೋಮಾ ಕೋರ್ಸ್ ಗೆ ಅರ್ಜಿ ಆಹ್ವಾನ; ಆಯ್ಕೆಯಾದ ವಿದ್ಯಾರ್ಥಿ ಗಳಿಗೆ 1000 ಮಾಸಿಕ ವಿದ್ಯಾರ್ಥಿ ವೇತನ

ಬೆಂಗಳೂರು: ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ 2023-24ನೇ ಶೈಕ್ಷಣಿಕ ಸಾಲಿನ ಪಶುಸಂಗೋಪನೆಯಲ್ಲಿ 2 ವರ್ಷದ ಡಿಪ್ಲೋಮಾ ಕೋರ್ಸ್ ಪ್ರವೇಶಕ್ಕೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಪ್ರವೇಶ ಪಡೆದ ಎಲ್ಲಾ ಅಭ್ಯರ್ಥಿಗಳಿಗೆ ರೂ.1000/-ಗಳ ಮಾಸಿಕ ವೇತನವನ್ನು ವ್ಯಾಸಂಗದ ಅವಧಿಯಲ್ಲಿ
ನೀಡಲಾಗುತ್ತದೆ. ಅರ್ಜಿ ಸಲ್ಲಿಕೆಯು ಜೂನ್ 21ರಿಂದ ಆರಂಭವಾಗಲಿದ್ದು, ಆಸಕ್ತರು 20:07:2023 ರೊಳಗಾಗಿ ಅರ್ಜಿಯನ್ನು ಒರಿಜಿನಲ್ ಡಿಡಿಯೊಂದಿಗೆ ಭರ್ತಿ ಮಾಡಿದ ಅರ್ಜಿಯ ಲಕೋಟೆ ಮೇಲೆ ಪಶುಸಂಗೋಪನಾ ಇಪ್ಲೋಮಾ ಪ್ರವೇಶದ ಅರ್ಜಿ” ಎಂದು ನಮೂದಿಸಿ ದಿನಾಂಕ: 20.07,2023ರ ಸಂಜೆ 5.00 ಗಂಟೆಯೊಳಗೆ “ಕುಲಸಚಿವರು, ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾಲಿಕ ವಿಜ್ಞಾನಗಳ ವಿಶ್ವವಿದ್ಯಾಲಯ ಸಂದಿನಗರ, ಅಂಚೆ ಪೆಟ್ಟಗೆ ಸಂ. 6, ದರ – 585 226” ಇವರಿಗೆ ತಲುಪುವಂತೆ ಸಲ್ಲಿಸಬೇಕು. ನಿಗದಿತ ಸಮಯದೊಳಗೆ ತಲುಪದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.

ಅಭ್ಯರ್ಥಿಗಳು ಮೊಬೈಲ್ ನಂಬರ್ / ದೂರವಾಣಿ / ಇ-ಮೇಲ್ ಐಡಿಯನ್ನು ಅರ್ಜಿಯಲ್ಲಿ ಭರ್ತಿ ಮಾಡತಕ್ಕದ್ದು. ಅಭ್ಯರ್ಥಿಗಳು ಒಂದು ಬಾರಿ ಮಾತ್ರ ಅರ್ಜಿಯನ್ನು ಸಲ್ಲಿಸಬೇಕು ಹಾಗೂ ಸಲ್ಲಸಿದ ನಂತರ ಯಾವುದೇ ಕಾರಣಕ್ಕೂ ಅರ್ಜಿಯನ್ನು ತಿದ್ದುಪಡಿ ಮಾಡಲು ಅವಕಾಶವಿರುವುದಿಲ್ಲ.ಸರ್ಕಾರದ ಆದೇಶಗಳ ಅನ್ವಯ ಸೀಟುಗಳನ್ನು ಭರ್ತಿ ಮಾಡಲಾಗುವುದು ಎಂದು ಪ್ರಕಟಣೆ ಹೊರಡಿಸಲಾಗಿದೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top