ನವದೆಹಲಿ: ರಮೇಶ್ ಜಾರಕಿಹೊಳಿಗೆ ಯೋಗೇಶ್ವರ್ ಮೇಲೆ ಪ್ರೀತಿಯಿದ್ದರೆ ಮಾತನಾಡಲಿ. ಅದು ಬಿಟ್ಟು ಸಚಿವ ಸ್ಥಾನ ನೀಡಲು ಅವರು ಮುಖ್ಯಮಂತ್ರಿಯಾ, ವಕ್ತಾರ ಎಂದು ಖಾರವಾಗಿ ಪ್ರಶ್ನಿಸಿದರು.
ರಾಜ್ಯದ ಸಚಿವ ಸಂಪುಟ ವಿಸ್ತರಣೆಯಾದ ಬಳಿಕ ಅಸಮಾಧಾನಗೊಂಡಿದ್ದ ಶಾಸಕ ಎಂ.ಪಿ.ರೇಣುಕಾಚಾರ್ಯ ಇಂದು ದೆಹಲಿಯಲ್ಲಿ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರನ್ನು ಭೇಟಿ ಮಾಡಿ ಯೋಗೇಶ್ವರ್ ವಿರುದ್ಧ ದೂರು ನೀಡಿದ್ದಾರೆ .
ಹಲವು ಶಾಸಕರು ನನಗೆ ಕರೆ ಮಾಡಿ ಮಾತನಾಡಿದ್ದಾರೆ. ಮುಂದಿನ ವಾರ ನಾವೆಲ್ಲಾ ಸಭೆ ಸೇರಿ ಚರ್ಚೆ ನಡೆಸುತ್ತೇವೆ ಎಂದು ರೇಣುಕಾಚಾರ್ಯ ಹೇಳಿದರು. ಕ್ಷೇತ್ರದ ಕೆಲಸಕ್ಕೆ ಸಂಬಂಧಿಸಿದಂತೆ ದೆಹಲಿಗೆ ಬಂದಿದ್ದೆ. ನಂತರ ಅರುಣ್ ಸಿಂಗ್ ಅವರಿಗೆ ಕರೆ ಮಾಡಿ ಸಮಯ ಕೇಳಿದ್ದೆ. ಹೀಗಾಗಿ ಇಂದು ಬೆಳಗ್ಗೆ 10 ಗಂಟೆಗೆ ಭೇಟಿಯಾಗಿದ್ದೆ ಎಂದರು.
ಯೋಗೇಶ್ವರ್ ರಿಂದ ರಾಜ್ಯ ಬಿಜೆಪಿ ಬೆಳೆದಿಲ್ಲ. ಚುನಾವಣೆಯಲ್ಲಿ ಅವರೇ ತಿರಸ್ಕಾರವಾದರು. ಅಂಥವರು ಬಿಜೆಪಿಯನ್ನು ಏನು ಬೆಳಿಸುತ್ತಾರೆ. ಅವರು ಎಷ್ಟು ಐಷಾರಾಮಿ ಕಾರು, ಬಂಗಲೆ ಖರೀದಿ ಮಾಡಿದ್ದಾರೆ ಎನ್ನವುದರ ಲೆಕ್ಕ ನನ್ನ ಬಳಿಯಿದೆ ಎಂದು ಆರೋಪಿಸಿದರು.



