ದಾವಣಗೆರೆ: ವಲಸೆ ಬಂದ ಎಲ್ಲರಿಗೂ ಸಚಿವ ಸ್ಥಾನ ಕೊಡಲೇ ಬೇಕಲ್ವ ಎಂದು ಸಚಿವ ಭೈರತಿ ಬಸವರಾಜ್ ಅಭಿಪ್ರಾಯಪಟ್ಟರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಜೊತೆಯಲ್ಲಿ ಬಂದವರಿಗೆ ಬೇಗ ಸಚಿವ ಸ್ಥಾನ ಕೊಡಿ ಎಂದು ಸಿಎಂ ಗೆ ಮನವಿ ಮಾಡಿದ್ದೇವೆ. ಸಿಎಂ ಕೂಡ ವಲಸೆ ಬಂದವರಿಗ ಸಚಿವ ಸ್ಥಾನ ನೀಡುವುದಾಗಿ ಹೇಳಿದ್ದಾರೆ. ಎಂಟಿಬಿ, ಆರ್. ಶಂಕರ್, ಮುನಿರತ್ನಾಗೆ ಸಚಿವ ಸ್ಥಾನ ಕೊಡಬೇಕು ಎಂದರು.
ಜಿಲ್ಲಾ ಉಸ್ತವಾರಿ ಪ್ರತಿಕ್ರಿಯೆ: ದಾವಣಗೆರೆ ಜಿಲ್ಲಾ ಉಸ್ತುವಾರಿ ಸ್ಥಾನ ಇದ್ದರು ಸಂತೋಷ. ಇಲ್ಲದಿದ್ದರೂ ಸಂತೋಷ. ನಾನು ಇರುವಷ್ಟು ದಿನ ಒಳ್ಳೆ ಕೆಲಸ ಮಾಡುತ್ತೇನೆ ತಿಳಿಸಿದರು.



