ಬೆಂಗಳೂರು: ಸಮುದಾಯದ ಮಕ್ಕಳ ಭವಿಷ್ಯಕ್ಕಾಗಿ ಹೋರಾಟ ಮಾಡುತ್ತೇವೆ. ಹರಿಹರಕ್ಕೆ ಬಂದ ಮೇಲೆ ದೊಡ್ಡ ಚಾಲೆಂಜ್ ಇತ್ತು. ಹೋರಾಟ ತಡೆಯಲುನಮ್ಮವರೇ ಪ್ರಯತ್ನ ಮಾಡಿದರು ಎಂದರು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಿಡಿಕಾರಿದರು.
ಫ್ರೀಡಂಪಾರ್ಕ್ ನಲ್ಲಿ ಕೂಡಲ ಸಂಗಮ ಶ್ರೀಗಳ ನೇತೃತ್ವದಲ್ಲಿ ನಡೆಯುತ್ತಿರುವ ಧರಣಿಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಹರಪನಹಳ್ಳಿಯಲ್ಲೂ ಅವಮಾನ ಮಾಡಿದರು. ಆದ್ರೂ ಎದೆಗುಂದದೆ ಹೋರಾಟ ನಡೆಯಿತು. ಹರಿಹರದಲ್ಲಿ ಸಂಗಮ ಆಗಿದ್ದರಿಂದ ಯಾವ ತಡೆಯೂ ಇಲ್ಲದೆ ಇಲ್ಲಿಯವರೆಗೆ ನಿರಾತಂಕವಾಗಿ ನಡೆದಿದೆ ಎಂದರು.
ನಮ್ಮ ಹೋರಾಟದ ಬಗ್ಗೆ ಮಾಹಿತಿ ಕೊಡಲು ನಾಲ್ಕು ಮಂದಿ ಬಂದಿದ್ದರು. ಆದರೆ, ನಾನೇ ಖುದ್ದಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರಿಗೆ ಮಾಹಿತಿ ನೀಡಿ ಬಂದಿದ್ದೇನೆ. ಅವರು ಸಹ ನಮ್ಮ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ. ಈ ಬಗ್ಗೆ ಮುಂಬರುವ ಅಧಿವೇಶನದಲ್ಲಿ ಬಸದನ ಬಾವಿಗೆ ಇಳಿದು ಹೋರಾಟ ಮಾಡುತ್ತೇನೆ ಎಂದರು.
ಮಾಧ್ಯಮಗಳಲ್ಲಿ ಯತ್ನಾಳರ ಬಾಯಿಗೆ ಬೀಗ ಹಾಕಿದ್ದಾರೆ. ಕೇಂದ್ರ ನಾಯಕರೇ ಹಾಕಿದ್ದಾರೆ ಅಂತ ಹೇಳುತ್ತಾರೆ. ನಾನು ಬೇರೆಯವರ ತಲೆ, ಕಾಲು ಹಿಡಿಯುವವನಲ್ಲ. ನನ್ನ ಮೇಲೆ ಮಾಧ್ಯಮಗಳಿಗೆ ಬಹಳ ಪ್ರೀತಿ. ಮುಂಜಾನೆ ನನ್ನನ್ನ ಹೊಗಳಿ ಅಟ್ಟಕ್ಕೇರಿಸ್ತಾರೆ. ಮಧ್ಯಾಹ್ನ ಅವರ ಮೇಲೆ ಬೇರೆ ಪ್ರೆಶರ್ ಬರುತ್ತೆ. ಆಮೇಲೆ ನನ್ನನ್ನ ಕೆಳಗೆ ಹಾಕ್ತಾರೆ. ವಿಜಯೇಂದ್ರನ ಪ್ರಭಾವ ಅವರ ಮೇಲಿದೆ ಎಂದು ಹೇಳಿದರು.
ಸದ್ಯ ಸ್ವಲ್ಪ ಯಾಮಾರಿದ್ರೂ ಯತ್ನಾಳ್ಗೆ ಮಣ್ಣು ಹಾಕಿಬಿಡ್ತಾರೆ. ರಾಜಕಾರಣ ಜೀವನದಲ್ಲಿ ನಾನು ಸ್ಥಾನ ನಿರ್ವಹಿಸಿದ್ದೇನೆ. ಎಲ್ಲೂ ನಾನು ಹಾದಿ ತಪ್ಪಿದವನಲ್ಲ, ಇವತ್ತು ವ್ಯವಸ್ಥೆಯೇ ನಾಚಿಕೆಗೇಡಾಗಿದೆ. 10 ಲಕ್ಷ ನಾವು ಸೇರಿದ್ದು, ದೆಹಲಿಯಲ್ಲಿ ಸದ್ದುಮಾಡಿದೆ. ನಾನು ದೆಹಲಿಗೆ ಹೋಗಿದ್ದಾಗ ಎಲ್ಲರೂ ಅದನ್ನೇ ಕೇಳಿದರು ಎಂದು ಬಸನಗೌಡ ಯತ್ನಾಳ್ ನುಡಿದರು.
ಹಾಲುಮತದವರು ಹಿಂದೂಗಳು ಅಲ್ವೇ(?) ವಾಲ್ಮೀಕಿ ಸಮುದಾಯದವರು ಹಿಂದೂಗಳಲ್ವೇ(?) ಎಲ್ಲರೂ ಹಿಂದುಗಳೇ, ಅಲ್ಲಿ ಬಡವರಿಲ್ವೇ(?) ಎಂದು ಯತ್ನಾಳ್ ಪ್ರಶ್ನಿಸಿದರು.