ಕೊಪ್ಪಳ : ಕೃಷಿ ಕಾಯ್ದೆಯನ್ನು ವಿರೋಧಿಸುವವರ ಪ್ರಚೋದನೆಯಿಂದ ರಾಜ್ಯದಲ್ಲಿ ರೈತರು ಪರೇಡ್ ನಡೆಸುತ್ತಿದ್ದಾರೆ ಎಂದು ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ. ಟ್ರ್ಯಾಕ್ಟರ್ ರ್ಯಾಲಿ ವೇಳೆ ಗಲಾಟೆ : ರೈತರ ಮೇಲೆ ಲಾಠಿ, ಆಶ್ರುವಾಯು ಪ್ರಯೋಗಿಸಿದ ಪೊಲೀಸರು
ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಕೃಷಿ ಕಾಯ್ದೆಯನ್ನು ವಿರೋಧಿಗಳ ಪ್ರಚೋದನೆಯಿಂದಾಗಿ ರೈತರ ಪರೇಡ್ ನಡೆಸುತ್ತಿದ್ದಾರೆ. ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಪೊಲೀಸರು ರೈತರ ಟ್ರ್ಯಾಕ್ಟರ್ ಪರೇಡ್ ತಡೆದಿದ್ದಾರೆ ಎಂದು ಹೇಳಿದರು.
ಕೃಷಿ ಕಾಯ್ದೆಗಳು ರೈತರ ಪರವಾಗಿವೆ. ಅವರಿಗಾಗಿಯೇ ಕಾಯ್ದೆ ತರಲಾಗಿದೆ. ಆದರೆ 2008, 2013 ಹಾಗೂ 2019 ರಲ್ಲಿ ಕೃಷಿ ಕಾಯ್ದೆ ತಿದ್ದುಪಡಿ ವಿರೋಧಿಸಿ, ನಮ್ಮ ಸರ್ಕಾರ ಬಂದರೆ ಕಾಯ್ದೆ ತೆಗೆದು ಹಾಕುತ್ತೇವೆ ಎಂದು ರೈತರಿಗೆ ಪ್ರಚೋದನೆ ಮಾಡಿದ್ದರಿಂದ ಇಂದು ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ ಎಂದರು.



