ದಾವಣಗೆರೆ: ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದ ವತಿಯಿಂದ ಅಕ್ಕಮಹಾದೇವಿ ರಸ್ತೆಯಲ್ಲಿರುವ ಅಂಗಡಿಯ ಮಾಲೀಕರಿಗೆ, ಸಾರ್ವಜನಿಕರಿಗೆ ಗುಲಾಬಿ ಹೂ ಕೊಡುವ ಮೂಲಕ ಡಿ.5 ರಂದು ನಡೆಯುವ ಕರ್ನಾಟಕ ಬಂದ್ ಗೆ ಬೆಂಬಲ ನೀಡುವಂತೆ ಮನವಿ ಮಾಡಲಾಯಿತು.
ಮರಾಠ ಅಭಿವೃದ್ಧಿ ನಿಗಮ ರಚನೆ ವಿರೋಧಿ ಜಿಲ್ಲೆಯ ಎಲ್ಲಾ ತಾಲೂಕು ಕಚೇರಿಗಳಿಗೆ ಮತ್ತು ದಾವಣಗೆರೆ ಉಪ ವಿಭಾಗ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿ ನಂತರ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷರಾದ ನಾಗರಾಜ ಮೆಹರವಾಡೆ, ಜಿಲ್ಲಾ ಸಂಚಾಲಕ ಲೂಕ್ಕಮನ್ ಉಲ್ಲಾಖಾನ್, ಪಾಮೇನಹಳ್ಳಿ ನಾಗರಾಜ್, ಸಂತೋಷ್, ರವಿಕುಮಾರ್, ಈಶ್ವರ್, ಧರ್ಮರಾಜ್, ಪರಮೇಶ್, ತಿಮ್ಮೇಶ್, ತುಳಸಿರಾಮ್ , ವಿಜಯೇಂದ್ರ ಕೆಜಿ, ಬಸವರಾಜ್, ವೀರೇಂದ್ರ, ಮಂಜುನಾಥ್, ಬಸವರಾಜ್, ಲಿಂಗರಾಜ್, ಗೋಪಾಲ್ ದೇವರಮನೆ ಮಹಿಳಾ ಟಕದ ಅಧ್ಯಕ್ಷೆ ಬಸಮ್ಮ, ಉಪಾಧ್ಯಕ್ಷೆ ಮಂಜುಳಮ್ಮ, ಹೇಮಲತಾ ಮೊದಲಾದವರು ಉಪಸ್ಥಿತರಿದ್ದರು.



