ಬೆಂಗಳೂರು: ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಮತ್ತೊಂದು ಬಿಗ್ ಟ್ವಿಸ್ಟ್ ಸಿಕ್ಕಂತಾಗಿದೆ. ಎಸ್‌ಐಟಿಗೆ ಪತ್ರ ಬರೆದಿರುವ ಸಿಡಿ ಲೇಡಿ ತಮ್ಮ ಹೇಳಿಕೆಯಿಂದ ಉಲ್ಟಾಹೊಡೆದಿದ್ದಾರೆ. ಇದೀಗ ನ್ಯಾಯಾಧೀಶರ ಮುಂದೆ ಮತ್ತೆ ಹೇಳಿಕೆ ನೀಡುತ್ತೇನೆ ಎಂದು ಕೇಳಿಕೊಂಡಿದ್ದಾಳೆ.
ನಾನು ಮೊದಲು ನ್ಯಾಯಧೀಶರ ಮುಂದೆ ಹೇಳಿಕೆ ನೀಡುವಾಗ ಒತ್ತಡದಲ್ಲಿದ್ದೆ. ಹೀಗಾಗಿ ಇದೀಗ ಮತ್ತೊಮ್ಮೆ ಹೇಳಿಕೆ ನೀಡುವುದಾಗಿ ಯುವತಿ ಹೇಳಿದ್ದಾಳೆ. ಸಿಡಿ ಪ್ರಕರಣದ ಕಿಂಗ್ ಪಿನ್ ಗಳಾ ನರೇಶ್, ಶ್ರವಣ್ ತನ್ನನ್ನು ಹನಿಟ್ರ್ಯಾಪ್ ಗೆ ಬಳಸಿಕೊಂಡಿದ್ದಾರೆ ಎಂದು ಯುವತಿ ಹೇಳಿಕೆ ನೀಡಿದ್ದಾಳೆ ಎನ್ನಲಾಗುತ್ತಿದೆ. ಇದೀಗ ಎಸ್ ಐಟಿ ಅಧಿಕಾರಿಗಳು ನ್ಯಾಯಾಧೀಶರ ಮುಂದೆ ಮತ್ತೊಮ್ಮೆ ಸಿಆರ್ ಪಿಸಿ ಸೆಕ್ಷನ್ 164 ಯುವತಿಯ ಹೇಳಿಕೆ ಪಡೆಯಲು ಮುಂದಾಗಿದ್ದಾರೆ.



