ಬೆಂಗಳೂರು: ಪ್ರಶ್ನೆ ಪತ್ರಿಕೆ ಉತ್ತರ ಸೋರಿಕೆಯಾದ ಹಿನ್ನೆಲೆ ಮುಂದೂಡಲಾಗಿದ್ದ ಎಫ್.ಡಿ.ಎ ಪರೀಕ್ಷೆಗೆ ದಿನಾಂಕ ಮರು ನಿಗದಿಯಾಗಿದೆ. ಫೆಬ್ರವರಿ 28ರಂದು ಪರೀಕ್ಷೆ ನಡೆಯಲಿದೆ ಎಂದು ಕೆಪಿಎಸ್‌ಸಿ ಕಾರ್ಯದರ್ಶಿ ಸತ್ಯವತಿ ತಿಳಿಸಿದ್ದಾರೆ.
ಜ. 24ರಂದು ನಿಗಧಿಯಾದ ಎಫ್ ಡಿಎ ಪರೀಕ್ಷೆಯ ಉತ್ತರಗಳು ಸೋರಿಕೆಯಾಗಿತ್ತು. ಹೀಗಾಗಿ ಪರೀಕ್ಷೆಯನ್ನು ಮುಂದೂಡಲಾಗಿತ್ತು. ಸದ್ಯ ಪರೀಕ್ಷಾ ದಿನಾಂಕ ಮರು ನಿಗಧಿ ಮಾಡಲಾಗಿದ್ದು, ಫೆಬ್ರವರಿ 28ರಂದು ಪರೀಕ್ಷೆ ನಡೆಯಲಿದೆ.



