ಬೆಂಗಳೂರು: ನಟ ಪುನೀತ್ ರಾಜ್ ಕುಮಾರ್ ನಿಧನ ಸುದ್ದಿ ಮಾಸುವ ಮುನ್ನವೇ ಸ್ಯಾಂಡಲ್ ವುಡ್ ಮತ್ತೊಂದು ಮತ್ತೊಂದು ಆಘಾತ ಎದುರಾಗಿದೆ. ಅಪಘಾತದಿಂದ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಹಿರಿಯ ನಟ ಶಿವರಾಂ ( 84) ಇಂದು ನಿಧನ ಹೊಂದಿದ್ದಾರೆ.
ಅಪಘಾತದಿಂದಾಗಿ ತಲೆಗೆ ತೀವ್ರ ಪೆಟ್ಟಾಗಿದ್ದರಿಂದ ಶಿವರಾಂ ಅವರಿಗೆ ಬ್ರೇನ್ ಡ್ಯಾಮೇಜ್ ಆಗಿತ್ತು. ಕಳೆದ ಎರಡು ದಿನಗಳಿಂದ ಶಿವರಾಂರನ್ನು ಬದುಕಿಸಿಕೊಳ್ಳಲು ವೈದ್ಯರು ಸಾಕಷ್ಟು ಪ್ರಯತ್ನಗಳನ್ನು ಮಾಡಿದರೂ ಸಹ ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ.
ಹೊಸಕೇರೆ ಹಳ್ಳಿ ಬಳಿ ಸಂಭವಿಸಿದ ಅಪಘಾತದಿಂದ ನಟ ಶಿವರಾಂ ಕೋಮಾಗೆ ತೆರಳಿದ್ದರು. ತೆಲೆಗೆ ಬಲವಾದ ಏಟು ಬಿದ್ದ ಹಿನ್ನೆಲೆಯಲ್ಲಿ ಅವರ ಮೆದುಳು ನಿಷ್ಕ್ರಿಯಗೊಂಡಿತ್ತು. ಹೀಗಾಗಿ ಚಿಕಿತ್ಸೆ ಫಲಿಸದೇ ಶಿವರಾಂ ನಿಧನರಾಗಿದ್ದಾರೆ.
1958ರಲ್ಲಿ ಸಿನಿಮಾ ರಂಗಕ್ಕೆ ಕಾಲಿಟ್ಟ ಶಿವರಾಂ ಸ್ಯಾಂಡಲ್ ವುಡ್ ನಲ್ಲಿ ವಿಭಿನ್ನ ಪಾತ್ರಗಳಲ್ಲಿ ಅಭಿನಯ ಮಾಡಿದ್ದಾರೆ. ಸಹಾಯಕ ನಿರ್ದೇಶಕರಾಗಿ ಸಿನಿರಂಗಕ್ಕೆ ಪಾದಾರ್ಪಣೆ ಮಾಡಿದ್ದ ಶಿವರಾಂ ಬಳಿಕ ಪೋಷಕ ಪಾತ್ರದಲ್ಲಿ ಮಿಂಚಿದ್ದರು. ಚಲಿಸುವ ಮೋಡಗಳು, ಶ್ರಾವಣ ಬಂತು. ಹಾಲುಜೇನು, ಹೊಂಬಿಸಲು, ಗುರು ಶಿಷ್ಯರು ಸೇರಿದಂತೆ ಇನ್ನೂ ಹಲವು ಸಿನಿಮಾಗಳಲ್ಲಿ ಶಿವರಾಂ ಬಣ್ಣ ಹಚ್ಚಿದ್ದರು.