ಚಂದನ ವನದ ನಟ, ನಿರ್ಮಾಪಕ ಡಾಲಿ ಖ್ಯಾತಿಯ ಧನಂಜಯ ಹಸೆಮಣೆ ಏರಲು ಸಿದ್ಧರಾಗಿದ್ದಾರೆ. ಮದುವೆ ಯಾವಾಗ ಅಂತ ಕೇಳಿದಾಗೆಲ್ಲಾ ಅಯ್ಯೋ.. ಹುಡುಗಿನೇ ಸಿಕ್ಕಿಲ್ಲ ಅಂತಿದ್ದ ಡಾಲಿ ಧನಂಜಯಗೆ ಕೊನೆಗೂ ಸಂಗಾತಿ ಸಿಕ್ಕಿದ್ದಾರೆ.
ಡಾಲಿ ಧನಂಜಯ ಚಿತ್ರದುರ್ಗ ಅಳಿಯ ಆಗಲಿದ್ದಾರೆ. ಚಿತ್ರದುರ್ಗ ಮೂಲದ ಡಾ.ಧನ್ಯತಾ ಅವರನ್ನು ಧನಂಜಯ ಕೈಹಿಡಿಯಲಿದ್ದಾರೆ. ಹಲವು ವರ್ಷಗಳಿಂದ ಸ್ನೇಹಿತರಾಗಿದ್ದ ಧನ್ಯತಾ ಮತ್ತು ಧನಂಜಯ ಅವರ ಪ್ರೀತಿಗೆ ಮನೆಯವರ ಒಪ್ಪಿಗೆ ಸಿಕ್ಕಿದೆ.ಧನಂಜಯ ಮತ್ತು ಧನ್ಯತಾ ಅವರ ಮದುವೆ ಮುಂದಿನ ಫೆಬ್ರವರಿಯಲ್ಲಿ ನಡೆಯಲಿದೆ. ಇಬ್ಬರು ಒಟ್ಟಿಗೆ ಫೋಟೋಶೂಟ್ ಮಾಡಿರುವ ಜೋಡಿ ದೀಪಾವಳಿ ಹಬ್ಬಕ್ಕೆ ಶುಭ ಸುದ್ದಿ ನೀಡಿದ್ದಾರೆ.
ಫೆಬ್ರವರಿ 16ರಂದು ಮದುವೆ ನಡೆಯಲಿದೆ. ಚಿತ್ರದುರ್ಗದ ವೈದ್ಯೆ ಡಾ.ಧನ್ಯತಾ ಅವರನ್ನು ಡಾಲಿ ಧನಂಜಯ ವಿವಾಹವಾಗುತ್ತಿದ್ದು, ಈ ಮೂಲಕ ಚಿತ್ರದುರ್ಗದ ಅಳಿಯ ಆಗುತ್ತಿದ್ದಾರೆ. ಭಾವಿ ಪತ್ನಿ ಜೊತೆಗಿನ ಸುಂದರವಾದ ಫೋಟೋ, ವಿಡಿಯೋ ಹಂಚಿಕೊಂಡಿದ್ದಾರೆ.ಸ್ತ್ರೀರೋಗ ತಜ್ಞೆ ಆಗಿರುವ ಧನ್ಯತಾ, ಧನಂಜಯ ಮಧ್ಯೆ ಅನೇಕ ವರ್ಷಗಳ ಸ್ನೇಹವಿದೆ.
ಧನ್ಯತಾ ಓದಿದ್ದು ಮೈಸೂರಿನಲ್ಲಿ. ಅಂದಿನಿಂದಲೂ ಪರಿಚಯವಿದ್ದ ಧನಂಜಯ-ಧನ್ಯತಾ ಮಧ್ಯೆ ಪ್ರೀತಿ ಹುಟ್ಟಿದೆ. ಎರಡು ಫ್ಯಾಮಿಲಿ ಒಪ್ಪಿಗೆ ಮೆರೆಗೆ ಹಸೆಮಣೆ ಏರಲು ಸಿದ್ಧತೆ ನಡೆಸಿದ್ದಾರೆ. ಫೆಬ್ರವರಿ 16ರಂದು ಮೈಸೂರಿನ ಎಕ್ಸಿಬಿಷನ್ ಗ್ರೌಂಡ್‌ನಲ್ಲಿ ಡಾಲಿ ಮತ್ತು ಧನ್ಯತಾ ವಿವಾಹ ನೆರವೇರಲಿದೆ.