ಬಾಗಲಕೋಟೆ ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾನಿಲಯವು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ವಿವಿಧ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನಿಸಿದೆ.
ಕಾರ್ಯಕ್ರಮ ಸಹಾಯಕ, ಸಹಾಯಕ ವೈದ್ಯಕೀಯ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಕೋಲಾರ, ಬಾಗಲಕೋಟೆ ಕೆಲಸ ಮಾಡುವ ಸ್ಥಳಗಳಾಗಿವೆ. ಆಸಕ್ತ ಅಭ್ಯರ್ಥಿಗಳು ಪೆಬ್ರವರಿ 04ರೊಳಗೆ ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ (UHS) ಒಟ್ಟು 9 ಹುದ್ದೆಗಳು ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಸಹಾಯಕ ವೈದ್ಯಾಧಿಕಾರಿ : 5 ಹುದ್ದೆಗಳು, ಕಾರ್ಯಕ್ರಮ ಸಹಾಯಕ : 1 ಹುದ್ದೆ, ಚಾಲಕ : 2 ಹುದ್ದೆಗಳು, ಪೋಷಕ ಸಿಬ್ಬಂದಿ ತೋಟಗಾರ : 1 ಹುದ್ದೆ. ಸಹಾಯಕ ವೈದ್ಯಾಧಿಕಾರಿ : ಬಿಎಎಂಎಸ್, ಎಂಬಿಬಿಎಸ್
ತೋಟಗಾರಿಕೆ/ಕೃಷಿಯಲ್ಲಿ, ಕಾರ್ಯಕ್ರಮ ಸಹಾಯಕ : ಯಾವುದೇ ಪದವಿ, ಚಾಲಕ : ಎಸ್‌ಎಸ್‌ಎಲ್‌ಸಿ ಮತ್ತು ಡ್ರೈವಿಂಗ್ ಲೈಸೆನ್ಸ್
ಪೋಷಕ ಸಿಬ್ಬಂದಿ ತೋಟಗಾರ : ಎಸ್‌ಎಸ್‌ಎಲ್‌ಸಿ,
ಸಹಾಯಕ ವೈದ್ಯಕೀಯ ಅಧಿಕಾರಿ : 18 ರಿಂದ 48 ವರ್ಷ ವಯಸ್ಸನ್ನು ಒಳಗೊಂಡಿರಬೇಕು. ಕಾರ್ಯಕ್ರಮ ಸಹಾಯಕ : 18 ರಿಂದ 35 ವರ್ಷ ವಯಸ್ಸನ್ನು ಮೀರಿರಬಾರದು. ಚಾಲಕ : 18 ರಿಂದ 35 ವರ್ಷ ವಯಸ್ಸನ್ನು ಮೀರಿರಬಾರದು.ಪೋಷಕ ಸಿಬ್ಬಂದಿ ತೋಟಗಾರ : 18 ರಿಂದ 35 ವರ್ಷ ವಯಸ್ಸನ್ನು ಮೀರಿರಬಾರದು. 2ಎ/2ಬಿ/3ಎ/3ಬಿ ಅಭ್ಯರ್ಥಿಗಳು : 03 ವರ್ಷಗಳು
SC/ST/Cat-I ಅಭ್ಯರ್ಥಿಗಳು : 05 ವರ್ಷಗಳು ಹೆಚ್ಚುವರಿ ಅವಕಾಶ.
SC/ST/Cat-I/ಮಾಜಿ ಸೈನಿಕ ಅಭ್ಯರ್ಥಿಗಳು/ದೈಹಿಕವಾಗಿ ಅಂಗವಿಕಲರಿಗೆ ಯಾವುದೇ ಶುಲ್ಕವಿರುವುದಿಲ್ಲ.
ಕ್ಯಾಟ್-2ಎ/2ಬಿ/3ಎ/3ಬಿ ಅಭ್ಯರ್ಥಿಗಳು : ರೂ.300/-, ಸಾಮಾನ್ಯ ಅಭ್ಯರ್ಥಿಗಳು : ರೂ.600/- ನೇಮಕಾತಿಯಲ್ಲಿ ಆಯ್ಕೆ ಪ್ರಕ್ರಿಯೆ ವಿವರ : ಲಿಖಿತ ಪರೀಕ್ಷೆ, ಕೌಶಲ್ಯ ಪರೀಕ್ಷೆ, ಪ್ರಾಯೋಗಿಕ ಪರೀಕ್ಷೆ ಮತ್ತು ಸಂದರ್ಶನ ಮೂಲಕ ಆಯ್ಕೆ ಮಾಡಲಾಗುತ್ತದೆ.
ಸಹಾಯಕ ವೈದ್ಯಾಧಿಕಾರಿ : ರೂ.52650-97100/-, ಕಾರ್ಯಕ್ರಮ ಸಹಾಯಕ : ರೂ.35400-112400/-, ಚಾಲಕ : ರೂ.21400-42000/-, ಪೋಷಕ ಸಿಬ್ಬಂದಿ ತೋಟಗಾರ : ರೂ.17000-28950/- ವೇತನ ನಿಗದಿ ಮಾಡಲಾಗಿದೆ.
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯ ಮೂಲಕ ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿದಾರರು ಅರ್ಜಿ ನಮೂನೆಯನ್ನು ಸಂಬಂಧಿತ ಸ್ವಯಂ-ದೃಢೀಕರಿಸಿದ ದಾಖಲೆಗಳೊಂದಿಗೆ ರಿಜಿಸ್ಟ್ರಾರ್, ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ, ಉದ್ಯಾನಗಿರಿ, ಬಾಗಲಕೋಟ-587104, ಕರ್ನಾಟಕಕ್ಕೆ 04-ಫೆಬ್ರವರಿ-2023ರೊಳಗೆ ಅರ್ಜಿ ಸಲ್ಲಿಸಬಹುದು.ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 06-01-2023, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 04-02-2023, ಹುದ್ದೆಗಳಿಗೆ ಸಂಬಂಧಪಟ್ಟಂತೆ ಹೆಚ್ಚಿನ ಮಾಹಿತಿಗಾಗಿ ವಿಶ್ವವಿದ್ಯಾಲಯದ uhsbagalkot.edu.in ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.



