ಡಿವಿಜಿ ಸುದ್ದಿ, ದಾವಣಗೆರೆ: ತಾಲೂಕಿನ ಚಿನ್ನಸಮುದ್ರ ಗ್ರಾಮದ ಜಾನಪದ ಕಲಾವಿದ ಉಮೇಶ್ ನಾಯ್ಕ್ ಜಾನಪದ ಕ್ಷೇತ್ರದಲ್ಲಿನ ಸೇವೆ ಪರಿಗಣಿಸಿ ರಾಜ್ಯೋತ್ಸವ ಪ್ರಶಸ್ತಿ ನೀಡುವಂತೆ ಗ್ರಾಮಸ್ಥರ ಪತ್ರ ಚಳವಳಿ ನಡೆಸಿದ್ದಾರೆ.
ಜಾನಪದ ಕಲಾವಿದನಾಗಿ ಕಳೆದ 25 ವರ್ಷಗಳಿಂದ ಕಲಾ ಸೇವೆಯಲ್ಲಿ ತನ್ನನ್ನು ತಾನು ಮೂಡುಪಾಗಿಟ್ಟಿರುವ ಉಮೇಶ್ ನಾಯ್ಕ್, ಬಡತನದಲ್ಲಿಯೂ ಛಲ ಬಿಡದೇ ನನ್ನ ಕಲಾ ಸೇವೆಯನ್ನು ನಿರಂತರವಾಗಿ ನಡೆಸಿಕೊಂಡು ಬಂದಿದ್ದಾರೆ. ಈ ಕಲಾ ಸಾಧನೆಯನ್ನು ಪರಿಗಣಿಸಿ ರಾಜ್ಯ, ಜಿಲ್ಲಾ, ಪ್ರಜಾವಾಣಿ ಯುವ ಸಾಧಕ -2020 ರ ಗೌರವ ಪ್ರಶಸ್ತಿ ಸೇರಿದಂತೆ ಹಲವಾರು ಸಂಘ ಸಂಸ್ಥೆಗಳು,ಮಠಗಳ ಸ್ವಾಮೀಜಿ ಗಳು ಸನ್ಮಾನಿಸಿದ್ದಾರೆ.

ನಾನು ಮುಂದಿನ ಪೀಳಿಗೆ ಜಾನಪದ ಉಳಿಸುವ ನಿಟ್ಟಿನಲ್ಲಿ ನನ್ನ ಕೈಲಾದ ಕೆಲಸವನ್ನು ಮಾಡುತ್ತಿದ್ದೇನೆ. ಇದರ ಮುಂದಿನ ಹೆಜ್ಜೆಯಂತೆ ನನ್ನನು ಈ ವರ್ಷದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡುವಂತೆ ಗ್ರಾಮದ ಎಲ್ಲ ನನ್ನ ಯುವ ಜನತೆ ಹಾಗು ಮುಖಂಡರು ನನ್ನ ಬೆಂಬಲಕ್ಕೆ ನಿಂತು ಪ್ರತಿಯೊಬ್ಬರೂ ಸಚಿವರಿಗೆ ಹಾಗು ಸರ್ಕಾರಕ್ಕೆ ಪತ್ರ ಬರೆಯುತ್ತಿದ್ದಾರೆ.

ಈ ಮೂಲಕ ತಮ್ಮ ಅಭಿಮಾನವನ್ನು ತೋರಿಸಿದ್ದಕ್ಕೆ ನಮ್ಮ ಗ್ರಾಮದ ಜನತೆಗೆ ನಾನು ಅಬಾರಿಯಾಗಿದ್ದೇನೆ ತಮ್ಮ ಪ್ರೀತಿ ವಿಶ್ವಾಸ ಹೀಗೆ ಸದಕಾಲ ಇರಲಿ. ನನ್ನ ಜೀವನವೇ ಜಾನಪದ ಕಲೆಗೆ ಮೀಸಲಾಗಿಡುತ್ತೇನೆ ಎಂದಿದ್ದಾರೆ.



