ಸಿಂಧ್: ಪಾಕಿಸ್ತಾನದ ಆಗ್ನೇಯ ಸಿಂಧ್ ಪ್ರಾಂತ್ಯದಲ್ಲಿ ಹಿಂದೂ ದೇಗುಲ ಧ್ವಂಸ ಮಾಡಿದ ಘಟನೆ ನಡೆದಿದ್ದು,ಕೃತ್ಯ ಎಸೆಗಿದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
ಬದಿನ್ ಜಿಲ್ಲೆಯಲ್ಲಿ ನಡೆದ ಘಟನೆ ನಡೆದಿದ್ದು, ಪೊಲೀಸರು ಈಗಾಗಲೇ ವ್ಯಕ್ತಿ ಮೇಲೆ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ ಎಂದು ಪಾಕಿಸ್ತಾನ ಮಾಧ್ಯಮದಲ್ಲಿ ವರದಿಯಾಗಿದೆ.
ಬದಿನ್ ಜಿಲ್ಲೆಯ ತಾತ್ಕಾಲಿಕ ದೇವಾಲಯದಲ್ಲಿ ಇರಿಸಲಾಗಿದ್ದ ವಿಗ್ರಹಗಳನ್ನು ಮುಹಮ್ಮದ್ ಇಸ್ಮಾಯಿಲ್ ಎಂಬಾತ ಭಗ್ನಗೊಳಿಸಿ ಪರಾರಿಯಾಗಿದ್ದಾನೆ ಎಂದು ಅಶೋಕ್ ಕುಮಾರ್ ಎಂಬುವವರು ದೂರು ನೀಡಿದ್ದರು.



