Connect with us

Dvgsuddi Kannada | online news portal | Kannada news online

ಭಾರತದಲ್ಲಿ ಪ್ರತಿಯೊಂದು ಮನೆಯಲ್ಲಿ ವರ್ಷಕ್ಕೆ 50 ಕೆಜಿ ಆಹಾರ ನಷ್ಟವಾಗುತ್ತಿದೆ: ವಿಶ್ವ ಸಂಸ್ಥೆ ವರದಿ ಬಹಿರಂಗ

ರಾಷ್ಟ್ರ ಸುದ್ದಿ

ಭಾರತದಲ್ಲಿ ಪ್ರತಿಯೊಂದು ಮನೆಯಲ್ಲಿ ವರ್ಷಕ್ಕೆ 50 ಕೆಜಿ ಆಹಾರ ನಷ್ಟವಾಗುತ್ತಿದೆ: ವಿಶ್ವ ಸಂಸ್ಥೆ ವರದಿ ಬಹಿರಂಗ

ವಿಶ್ವಸಂಸ್ಥೆ: ಭಾರತದಲ್ಲಿ ವರ್ಷಕ್ಕೆ ಪ್ರತಿಯೊಂದು ಮನೆಯಲ್ಲಿ 50 ಕೆ.ಜಿಯಷ್ಟು ಆಹಾರ ಹಾಳಾಗುತ್ತಿದೆ ಎಂದು  ವಿಶ್ವ ಸಂಸ್ಥೆ ವರದಿಯಲ್ಲಿ ತಿಳಿಸಿದೆ.

2019ರಲ್ಲಿ  ವಿಶ್ವದಲ್ಲಿ 93.1 ಕೋಟಿ ಟನ್‌ ಆಹಾರ ವ್ಯರ್ಥವಾಗಿದೆ. ಆ ವರ್ಷ ಭಾರತದಲ್ಲಿ 6.87 ಕೋಟಿ ಟನ್‌ ಮನೆಯ ಆಹಾರ ವ್ಯರ್ಥವಾಗಿದೆ. ಇದರಲ್ಲಿ ಶೇಕಡ 61ರಷ್ಟು ಭಾಗ ಮನೆಯ ಆಹಾರವಾಗಿದ್ದು, ಶೇಕಡ 13 ರಷ್ಟು ಭಾಗ ಚಿಲ್ಲರೆ ವ್ಯಾಪಾರದಿಂದ ಹಾಳಾಗಿದೆ ಎಂದು ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮ  ಮತ್ತು ಡಬ್ಲ್ಯೂಆರ್‌ಪಿಎಫ್‌ನ 2021ರ ಆಹಾರ ತ್ಯಾಜ್ಯ ಸೂಚ್ಯಂಕ ವರದಿಯಲ್ಲಿ ಉಲ್ಲೇಖಿಸಿದೆ.

ಜಾಗತಿಕ ಆಹಾರ ಉತ್ಪಾದನೆಯಲ್ಲಿ ಶೇಕಡ 17ರಷ್ಟು ವ್ಯರ್ಥವಾಗಬಹುದು.  ಭಾರತದಲ್ಲಿ ವರ್ಷಕ್ಕೆ ಅಂದಾಜು ಪ್ರತಿಯೊಂದು ಮನೆಯಲ್ಲಿ 50 ಕೆ.ಜಿಯಷ್ಟು ಆಹಾರ ಹಾಳಾಗುತ್ತಿದೆ  ಅಮೆರಿಕದಲ್ಲಿ 69 ಕೆ.ಜಿ ಮತ್ತು ಚೀನಾದಲ್ಲಿ 64 ಕೆ.ಜಿ ಆಹಾರ ವ್ಯರ್ಥವಾಗುತ್ತಿದೆ’ ಎಂದು ವರದಿ ಹೇಳಿದೆ.

2019ರಲ್ಲಿ 69 ಕೋಟಿ ಜನರು ಹಸುವಿನಿಂದ ಬಳಲುತ್ತಿದ್ದರು. ಇದೀಗ ಕೋವಿಡ್‌ನಿಂದಾಗಿ ಈ ಸಂಖ್ಯೆಯಲ್ಲಿ ಏರಿಕೆಯಾಗುವ ಸಾಧ್ಯತೆಯಿದೆ. 300 ಕೋಟಿ ಜನರಿಗೆ ಪೌಷ್ಟಿಕ ಆಹಾರ ಸಿಗುತ್ತಿಲ್ಲ ಎಂದಿದೆ ವರದಿ.

 

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ರಾಷ್ಟ್ರ ಸುದ್ದಿ

To Top