Connect with us

Dvgsuddi Kannada | online news portal | Kannada news online

ಪಡಿತರ ಕಾರ್ಡ್ ದಾರರು ಇ-ಕೆವೈಸಿ ಆಧಾರ್ ಬಯೋ ದೃಢೀಕರಣ ಕೂಡಲೇ ಮಾಡಿಸಿಕೊಳ್ಳಿ: ಡಿಸಿ

ದಾವಣಗೆರೆ

ಪಡಿತರ ಕಾರ್ಡ್ ದಾರರು ಇ-ಕೆವೈಸಿ ಆಧಾರ್ ಬಯೋ ದೃಢೀಕರಣ ಕೂಡಲೇ ಮಾಡಿಸಿಕೊಳ್ಳಿ: ಡಿಸಿ

ದಾವಣಗೆರೆ: ಇ-ಕೆವೈಸಿ ಆಧಾರ್ ಬಯೋ ದೃಢೀಕರಣ ಮಾಡಿಸದ ಪಡಿತರ ಚೀಟಿದಾರರು ತಮ್ಮ ವ್ಯಾಪ್ತಿಯ ನ್ಯಾಯಬೆಲೆ ಅಂಗಡಿಗೆ ಕೂಡಲೇ ಭೇಟಿ ನೀಡಿ ಇ-ಕೆವೈಸಿ ಆಧಾರ್ ಬಯೋ ದೃಢೀಕರಣ ಮಾಡಿಸಿಕೊಳ್ಳಬೇಕೆಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದ್ದಾರೆ.

ರಾಜ್ಯಾದ್ಯಂತ ಪಡಿತರ ಚೀಟಿದಾರರ ಸೌಲಭ್ಯಕ್ಕಾಗಿ ಸರ್ಕಾರವು ಇ-ಕೆವೈಸಿ(ಎಲೆಕ್ಟ್ರಾನಿಕ್ ನೋ ಯುವರ್ ಕಸ್ಟಮರ್) ಎಂಬ ಯೋಜನೆಯನ್ನು ಜಾರಿಗೊಳಿಸಿದ್ದು, ಅದರಂತೆ ಈಗಾಗಲೇ ಕೆಲವು ಪಡಿತರ ಚೀಟಿದಾರರರು ತಮ್ಮ ವ್ಯಾಪ್ತಿಗೆ ಸಂಬಂಧಿಸಿದ ನ್ಯಾಯಬೆಲೆ ಅಂಗಡಿಯಲ್ಲಿ ಇ-ಕೆವೈಸಿ ಆಧಾರ್ ಬಯೋ ದೃಢೀಕರಣ ಕಾರ್ಯವನ್ನು ಪೂರ್ಣಗೊಳಿಸಿರುತ್ತಾರೆ.

ಸರ್ಕಾರವು ಪುನಃ ಈ ಯೋಜನೆಗೆ ಚಾಲನೆ ನೀಡಿರುವುದರಿಂದ ಇ-ಕೆವೈಸಿ ಆಧಾರ್ ಬಯೋ ದೃಢೀಕರಣ ಮಾಡಿಸದ ಪಡಿತರ ಚೀಟಿದಾರರು ತಮ್ಮ ವ್ಯಾಪ್ತಿಗೆ ಸಂಬಂಧಿಸಿದ ನ್ಯಾಯಬೆಲೆ ಅಂಗಡಿಗೆ ಕೂಡಲೇ ಭೇಟಿ ನೀಡಿ (ಪ್ರತಿ ತಿಂಗಳ 1ನೇ ತಾರೀಖಿನಿಂದ 10ನೇ ತಾರೀಖಿನೊಳಗೆ ಮತ್ತು 25ನೇ ತಾರೀಖಿನಿಂದ 30ನೇ ತಾರೀಖೀನೊಳಗಾಗಿ) ತಮ್ಮ ಇ-ಕೆವೈಸಿ ಆಧಾರ್ ಬಯೋದೃಢೀಕರಣ ಕಾರ್ಯವನ್ನು ಮಾಡಿಸಿಕೊಳ್ಳಬೇಕೆಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

Advertisement

ದಾವಣಗೆರೆ

Advertisement
To Top