Connect with us

Dvgsuddi Kannada | online news portal | Kannada news online

ಆಸ್ಟ್ರೇಲಿಯಾದಲ್ಲಿ ಭಾರೀ ಮಳೆ; 100 ವರ್ಷದಲ್ಲಿಯೇ ದಾಖಲೆಯ ಮಳೆಗೆ ಪ್ರವಾಹ ..!

ಅಂತರಾಷ್ಟ್ರೀಯ ಸುದ್ದಿ

ಆಸ್ಟ್ರೇಲಿಯಾದಲ್ಲಿ ಭಾರೀ ಮಳೆ; 100 ವರ್ಷದಲ್ಲಿಯೇ ದಾಖಲೆಯ ಮಳೆಗೆ ಪ್ರವಾಹ ..!

ಸಿಡ್ನಿಆಸ್ಟ್ರೇಲಿಯಾದಲ್ಲಿ ಭಾರೀ ಮಳೆ ಬೀಳುತ್ತಿದ್ದು, ಪ್ರವಾಹ ಪರಿಸ್ಥಿತಿ ಉಂಟಾಗಿ ಜನ ಜೀವನ ಅಸ್ತವ್ಯಸ್ತಗೊಂಡಿದೆ.  ಆಗ್ನೇಯ ಪ್ರದೇಶದಲ್ಲಿ ತೀವ್ರ ಮಳೆಯಿಂದಾಗಿ  ಸಿಡ್ನಿಯ ಉತ್ತರ ಭಾಗದಲ್ಲಿ 100 ವರ್ಷಗಳಲ್ಲೇ ದಾಖಲೆ ಮಳೆಯಾಗಿದ್ದು, ಪ್ರವಾಹ ಪರಿಸ್ಥಿತಿ ಉಂಟಾಗಿದೆ.

ಪ್ರವಾಹಕ್ಕೆ ಸಾವಿರಾರು ಜನರನ್ನು ಸ್ಥಳಾಂತರಿಸಲು ಆದೇಶಿಸಲಾಗಿದೆ. 200ಕ್ಕೂ ಹೆಚ್ಚು ಶಾಲೆಗಳನ್ನು ಮುಚ್ಚಲಾಗಿದೆ.‌ ನಿರಂತರವಾಗಿ  ಸುರಿದ ಮಳೆಯಿಂದಾಗಿ ನ್ಯೂ ಸೌತ್ ವೇಲ್ಸ್‌ನ ಕರಾವಳಿ ಪ್ರದೇಶಗಳಲ್ಲಿ ವ್ಯಾಪಕ ಪ್ರವಾಹಕ್ಕೆ ಕಾರಣವಾಗಿದೆ, ಸಿಡ್ನಿಯ ವಾಯುವ್ಯ ಗಡಿಯ ಕೆಲವು ಭಾಗಗಳಲ್ಲಿ  ಅತಿದೊಡ್ಡ ಪ್ರವಾಹ ಪರಿಸ್ಥಿತಿ ಎದುರಾಗಿದೆ.

Australia rain 2

ಕಳೆದ ವರ್ಷ ಅಭೂತಪೂರ್ವ ಹವಾಮಾನ-ಬದಲಾವಣೆಯ ಪರಿಣಾಮ ಕಾಳ್ಗಿಚ್ಚು ಹೊತ್ತಿಕೊಂಡಿದ್ದ ಅದೇ ಪ್ರದೇಶದಲ್ಲಿ ಈಗ ಪ್ರವಾಹ ಉಂಟಾಗಿದೆ. ದೀರ್ಘಕಾಲದ ಬರಗಾಲದ ನಂತರ ಸಿಡ್ನಿಯಲ್ಲಿ ಈಗ ಜಲದಿಗ್ಬಂಧನದ ಅನುಭವವಾಗುತ್ತಿದೆ.ಸಿಡ್ನಿಯ ವಿಶಾಲವಾದ ಹಾಕ್ಸ್‌ಬರಿ-ನೇಪಿಯನ್ ಕಣಿವೆ, ನದಿಗಳು 1961 ರಿಂದ ಕಾಣದ ಮಟ್ಟಕ್ಕೇರಿವೆ. ಸಿಡ್ನಿ ನಗರಕ್ಕೆ ಹೆಚ್ಚಿನ ಪ್ರಮಾಣದ ಕುಡಿಯುವ ನೀರನ್ನು ಒದಗಿಸುವ ವಾರಗಂಬ ಅಣೆಕಟ್ಟು ಶನಿವಾರ ಮಧ್ಯಾಹ್ನ ತುಂಬಿ ಹರಿಯುತ್ತಿದೆ. ರಾಜ್ಯದಾದ್ಯಂತ ಈವರೆಗೆ 18,000 ಜನರನ್ನು ಸ್ಥಳಾಂತರಿಸಲಾಗಿದ್ದು, ಸೋಮವಾರ ಬೆಳಿಗ್ಗೆ 2,000 ಜನರು ಸ್ಥಳಾಂತರಿಸುವ ಆದೇಶ ಮಾಡಲಾಗಿದೆ ಎಂದು ತುರ್ತು ಸೇವಾ ಅಧಿಕಾರಿಗಳು ಸ್ಥಳೀಯ ಮಾಧ್ಯಮಗಳಿಗೆ ತಿಳಿಸಿದ್ದಾರೆ.

 

 

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಅಂತರಾಷ್ಟ್ರೀಯ ಸುದ್ದಿ

ದಾವಣಗೆರೆ

Advertisement
Advertisement Enter ad code here

Title

To Top