ಡಿವಿಜಿ ಸುದ್ದಿ, ಹರಪನಹಳ್ಳಿ: ತಾಲ್ಲೂಕಿನ ಉಚ್ಚಂಗಿದುರ್ಗದ ಐತಿಹಾಸಿಕ ಶ್ರೀ ಉತ್ಸವಾಂಭ ದೇವಿಯ ಆರಾಧಕರಾಗಿದ್ದ ಪರಶುರಾಮನ ಅವತಾರದ ಶ್ರೀ ಉಚ್ಚoಗೆಮ್ಮನ ದೇವಿಯ ಉತ್ಸವಗಳಲ್ಲಿ ದೇವಿಯ ಪಲ್ಲಕ್ಕಿಯ ಮುಂದೆ ಸಾಗುತ್ತಿದ್ದ ವೈಯಾಳಿ ದುರುಕೆಂಚಪ್ಪ ಅವರು ಇಂದು ಬೆಳಿಗ್ಗೆ ದೈವಾದೀನರಾಗಿದ್ದು, ಇವರ ಅಂತ್ಯಕ್ರಿಯೆಯನ್ನು ಇಂದು ಸಂಜೆ 4 ಗಂಟೆಗೆ ಉಚ್ಚoಗಿದುರ್ಗ ಹರಪನಹಳ್ಳಿ ರಸ್ತೆಯಲ್ಲಿರುವ ಜಮೀನಿನಲ್ಲಿ ನೆರವೇರಲಿದೆ. ದೇವಿಯ ಸದ್ಭಕ್ತರು, ಗ್ರಾಮಸ್ಥರು ಈ ಪುಣ್ಯ ಕಾರ್ಯದಲ್ಲಿ ಪಾಲ್ಗೊಳ್ಳಬೇಕೆಂದು ಊರಿನ ಸಮಸ್ತ ಗ್ರಾಮಸ್ಥರು ತಿಳಿಸಿದ್ದಾರೆ. ಮೃತರು ಮೂರು ಪುತ್ರಿಯರು, ಒಬ್ಬ ಪುತ್ರರ ಹಾಗೂ ಮೊಮ್ಮಕ್ಕಳನ್ನು ಬಿಟ್ಟು ಅಗಲಿದ್ದಾರೆ.