ಹರಪನಹಳ್ಳಿ: ಕುರುಬ ಸಮಾಜಕ್ಕೆ ಪರಿಶಿಷ್ಟ ಪಂಗಡದ ಮೀಸಲಾತಿಗೆ ಆಗ್ರಹಿಸಿ ಕಾಗಿನೆಲೆಯ ಶ್ರೀ ನಿರಂಜನಾಂದ ಸ್ವಾಮೀಜಿ ನೇತೃತ್ವದಲ್ಲಿ ನಾಳೆ(ಫೆ.7) ಬೆಂಗಳೂರಿನಲ್ಲಿ ಹಮ್ಮಿಕೊಂಡಿರುವ ಬೃಹತ್ ಸಮಾವೇಶಕ್ಕೆ ತಾಲ್ಲೂಕಿನ ಕುರುಬ ಸಮಾಜದ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮುಖಂಡರಾದ ಕಲ್ಲೇರ ಬಸವರಾಜ ಮನವಿ ಮಾಡಿದ್ದಾರೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಗುರುವಾರ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಶ್ರೀಗಳು ಕಾಗಿನೆಲೆಯಿಂದ ಬೆಂಗಳೂರಿಗೆ ಪಾದಯಾತ್ರೆ ಮೂಲಕ ಈಗಾಗಲೇ ತಲುಪಿದ್ದಾರೆ. ಕುರುಬ ಸಮಾಜದ ಎಲ್ಲಾ ಶಾಖಾಮಠದ ಶ್ರೀಗಳು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಸಮಾಜದ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ತಿಳಿಸಿದರು.
ಜಿಲ್ಲಾ ಪಂಚಾಯ್ತಿ ಸದಸ್ಯ ಹೆಚ್.ಬಿ.ಪರಶುರಾಮಪ್ಪ ಮಾತನಾಡಿ, ತಾಲ್ಲೂಕಿನಿಂದ 10ರಿಂದ 15 ಸಾವಿರ ಸಮಾಜದ ಬಂಧುಗಳು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ತಾಲ್ಲೂಕಿನ 30 ಗ್ರಾಮ ಪಂಚಾಯ್ತಿ ಕೇಂದ್ರಗಳಿಂದ ಸಮಾಜದ ಬಂಧುಗಳು ತೆರಳು ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ. ಅಲ್ಲದೇ ಟ್ರ್ಯಾಕ್ಟರ್, ಕಾರ್ ಹಮೂಲಕವೂ ತೆರಳಲಿದ್ದಾರೆ. ಬೆಂಗಳೂರಿನ ಸಮಾವೇಶದಲ್ಲಿ10 ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಸಮಾಜದವರು ಸೇರಲಿದ್ದಾರೆ ಎಂದರು.
ತಾಲ್ಲೂಕು ಕುರುಬ ಸಮಾಜದ ಅಧ್ಯಕ್ಷ ವೈ.ಕೆ.ಬಿ.ದುರುಗಪ್ಪ ಮಾತನಾಡಿ, ಫೆ.೬ ರಾತ್ರಿ ೯ಗಂಟೆಯಿಂದ ಪಟ್ಟಣದ ಸಂಡೂರು ಕೇರಿ, ಕಂಚಿಕೇರಿ ಹಾಗೂ ಕೋಣನಕೇರಿಯಿಂದ ಮೂರು ಬಸ್‌ಗಳು ತೆರಳಲಿವೆ. ಗ್ರಾಮಗಳಿಂದಲೂ ಇದೇ ಸಮಯಕ್ಕೆ ತೆರಳಲಿವೆ. ಪ್ರತಿ ಬಸ್‌ಗಳಲ್ಲಿ ಪ್ರಯಾಣಿಸುವ ಸಮಾಜದ ಬಂಧುಗಳಿಗೆ ಊಟ ತಿಂಡಿಯ ವ್ಯವಸ್ಥೆ ಮಾಡಲಾಗಿದೆ. ಸಮಾವೇಶಕ್ಕೆ ಕಳೆಕಟ್ಟಲು ಸಮಾಜದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದ್ದಾರೆ.
ಕುರಬ ಸಮಾಜದ ಎಸ್‌ಟಿ ಮೀಸಲಾತಿ ಹೋರಾಟ ಸಮಿತಿ ಅಧ್ಯಕ್ಷ ಹೆಚ್.ವಸಂತ, ಬಿಎಲ್‌ಡಿ ಬ್ಯಾಂಕ ಅಧ್ಯಕ್ಷ ಸಾಬಳ್ಳಿ ಜಂಬಣ್ಣ, ಪುರಸಭೆ ಸದಸ್ಯರಾದ ಗಣೇಶ್ ಪೈಲ್ವನ್, ಭರತೇಶ್ ಮುಖಂಡರಾದ ಅಲಮರಿಸಿಕೇರಿ ಶೇಖರಪ್ಪ, ಗೋಣಿಬಸಪ್ಪ, ಮಾಲಾ. ಶ್ರೀನಿವಾಸ ಹಾಗೂ ಇತರರು ಉಪಸ್ಥಿತರಿದ್ದರು.



