Connect with us

Dvgsuddi Kannada | online news portal | Kannada news online

ದಾವಣಗೆರೆ: ನಾಳೆ 101 ಗ್ರಾಮ ಪಂಚಾಯತಿಗಳಿಗೆ ಎರಡನೇ ಹಂತದ ಮತದಾನ

ಪ್ರಮುಖ ಸುದ್ದಿ

ದಾವಣಗೆರೆ: ನಾಳೆ 101 ಗ್ರಾಮ ಪಂಚಾಯತಿಗಳಿಗೆ ಎರಡನೇ ಹಂತದ ಮತದಾನ

ದಾವಣಗೆರೆ: ಜಿಲ್ಲೆಯಲ್ಲಿ ನಾಳೆ (ಡಿ.27) 101 ಗ್ರಾಮ ಪಂಚಾಯತಿಗಳಿಗೆ ಎರಡನೇ ಹಂತದ ಚುನಾವಣೆ ನಡೆಯಲಿದೆ.

ಜಿಲ್ಲೆಯ ಹರಿಹರ 23, ಚನ್ನಗಿರಿ 61, ನ್ಯಾಮತಿ 17 ಗ್ರಾಮ ಪಂಚಾಯತಿಗಳಿಗೆ ಚುನಾವಣೆ ನಡೆಲಿದ್ದು, ಒಟ್ಟು 101 ಗ್ರಾಮ ಪಂಚಾಯತಿಗೆ ಮತದಾನ ನಡೆಯಲಿದೆ. 1282 ಸ್ಥಾನಗಳಲ್ಲಿ  164 ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಹೀಗಾಗಿ 1112 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.

ಚನ್ನಗಿರಿ, ಹರಿಹ, ನ್ಯಾಮತಿ ತಾಲ್ಲೂಕಿನಲ್ಲಿ ಒಟ್ಟು 632 ಮತಗಟ್ಟೆ ಕೇಂದ್ರಗಳಿದ್ದು,  73 ಸೂಕ್ಷ್ಮ, 79 ಅತಿ ಸೂಕ್ಷ್ಮ ಹಾಗೂ 480 ಸಾಮಾನ್ಯ ಮತ ಕೇಂದ್ರಳಿವೆ. ಮಸ್ಟರಿಂಗ್ ಹಾಗೂ ಡಿ ಮಾಸ್ಟರಿಂಗ್ ಗಾಗಿ ನ್ಯಾಮತಿಯ ಕರ್ನಾಟಕ ಪಬ್ಲಿಕ್ ಸ್ಕೂಲ್, ಹರಿಹರದ ಸೇಂಟ್ ಮೇರಿಸ್ ಕಾನ್ವೆಂಟ್, ಚನ್ನಗಿರಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವ್ಯವಸ್ಥೆ ಮಾಡಲಾಗಿದೆ. ಚುನಾವಣೆಗೆ ಅಗತ್ಯವಾದ ಸಾರಿಗೆ, ಭದ್ರತೆ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top
(adsbygoogle = window.adsbygoogle || []).push({});