ಹಾವೇರಿ: ಕಬ್ಬಿನ ಗದ್ದೆಗೆ ಬಿದ್ದ ಬೆಂಕಿಯನ್ನು ನಂದಿಸಲು ಹೋದ ರೈತ ಸಜೀವ ದಹನವಾದ ಘಟನೆ ನಡೆದಿದೆ.
ಹಾವೇರಿ ತಾಲೂಕಿನ ಮೇವುಂಡಿ ಗ್ರಾಮದಲ್ಲಿ ಈಘಟನೆ ಸಂಭವಿಸಿದೆ. ರೈತ ಬಾಬುಸಾಬ ರಾಜೆಸಾಬ ನದಾಪ್(50) ಮೃತರು. ಇವರು ಒಂದೂವರೆ ಎಕರೆಯಲ್ಲಿ ಕಬ್ಬು ಬೆಳೆದಿದ್ದರು. ಬುಧವಾರ ಸಂಜೆ ಕಬ್ಬಿನ ಗದ್ದಗೆ ಆಕಸ್ಮಿಕವಾಗಿ ಬೆಂಕಿ ಬಿದ್ದಿತ್ತು. ಇದನ್ನು ಕಂಡ ರೈತ, ತಾನು ಕಷ್ಟಪಟ್ಟು ಬೆಳೆದ ಕಬ್ಬನ್ನು ಉಳಿಸಿಕೊಳ್ಳಲು ಬೆಂಕಿ ನಂದಿಸಲು ಹೋಗಿದ್ದರು.ಈ ವೇಳೆ ರೈತನೂ ಕಬ್ಬಿನ ಗದ್ದೆಯಲ್ಲೇ ಸುಟ್ಟುಕರಕಲಾಗಿ, ಅಲ್ಲೇ ಕೊನೆಯುಸಿರೆಳೆದಿದ್ದಾರೆ. ಗುತ್ತಲ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಾಗಿದೆ.