Connect with us

Dvgsuddi Kannada | online news portal | Kannada news online

ಕೇವಲ 6 ಗಂಟೆ ಫೇಸ್ ಬುಕ್, ವಾಟ್ಸಪ್ , ಇನ್ ಸ್ಟಾಗ್ರಾಮ ಸರ್ವರ್ ಡೌನ್ ನಿಂದ 44, 713 ಕೋಟಿ ಲಾಸ್ ..!

whatsapp instagram facebook

ಅಂತರಾಷ್ಟ್ರೀಯ ಸುದ್ದಿ

ಕೇವಲ 6 ಗಂಟೆ ಫೇಸ್ ಬುಕ್, ವಾಟ್ಸಪ್ , ಇನ್ ಸ್ಟಾಗ್ರಾಮ ಸರ್ವರ್ ಡೌನ್ ನಿಂದ 44, 713 ಕೋಟಿ ಲಾಸ್ ..!

ಸೋಮವಾರ ಸುಮಾರು ಆರು ಗಂಟೆಗಳ ಕಾಲ ಫೇಸ್​ಬುಕ್​, ವಾಟ್ಸಾಪ್, ಇನ್​ಸ್ಟಾಗ್ರಾಮ್ ಡೌನ್ ಆಗಿತ್ತು. ಇದರಿಂದ ಬಳಕೆದಾರರು ತೊಂದರೆಗೆ ಸಿಲುಕಿದ್ದರು. ಹೆಚ್ಚಿನವರು ತಮ್ಮ ಫೋನ್ ನಲ್ಲಿಯೇ ಏನು ಆಗಿದೆ ಎಂದು ಫೋನ್ ಸ್ವೀಚ್ ಆಫ್ ಮಾಡದು ಆನ್ ಮಾಡದು, ಆ್ಯಪ್ ಅಪ್ಡೇಟ್ ಮಾಡದು ಮಾಡಿದ್ದು ಸಾಮಾನ್ಯವಾಗಿತ್ತು.  ಆದರೆ ವಾಸ್ತವಾಗಿ  ಸರ್ವರ್ ಡೌನ್ ಆಗಿದ್ದು, ಇದಕ್ಕೆ ಫೇಸ್​ಬುಕ್​ ಸಿಇಒ ಮಾರ್ಕ್​ ಝುಕರ್​ಬರ್ಗ್​ ಕ್ಷಮೆ ಕೇಳಿದ್ಧಾರೆ. ಇದರಿಂದ ಸಂಸ್ಥೆಗೆ ಎಷ್ಟು ನಷ್ಟ ಆಗಿದೆ ಗೊತ್ತೆ?.. ಬರೋಬ್ಬರಿ 44,713 ಕೋಟಿ ನಷ್ಟವಾಗಿದೆ.

ಜಾಗತಿಕ ವ್ಯತ್ಯಯವು ಫೇಸ್​ಬುಕ್​, ಇನ್​ಸ್ಟಾಗ್ರಾಮ್ ಮತ್ತು ವಾಟ್ಸಾಪ್​ ಅನ್ನು ಅಕ್ಟೋಬರ್​ 4ರ ಸಂಜೆಯಿಂದ  ಡೌನ್ ಆಗುವಂತೆ ಮಾಡಿತು. ಇದರಿಂದಾಗಿ ಫೇಸ್​ಬುಕ್​ನ ಸ್ಥಾಪಕ ಮಾರ್ಕ್​ ಝುಕರ್​ಬರ್ಗ್​ಗೆ 600 ಕೋಟಿ ಅಮೆರಿಕನ್ ಡಾಲರ್ ನಷ್ಟವಾಗಿದೆ. ಭಾರತದ ರೂಪಾಯಿ ಲೆಕ್ಕದಲ್ಲಿ 44,713 ಕೋಟಿ ನಷ್ಟ ಸಂಭವಿಸಿದೆ.

ರೂಟರ್ಸ್​ ನಮ್ಮ ಡೇಟಾ ಸೆಂಟರ್​ಗಳು ನೆಟ್​ವರ್ಕ್ ಟ್ರಾಫಿಕ್ ಮಧ್ಯೆ ಕೋ ಆರ್ಡಿನೇಟ್ ಮಾಡುತ್ತದೆ. ಈ ಸಂವಹನಕ್ಕೆ ತಡೆಯಾಗಿದ್ದರಿಂದ ಸಮಸ್ಯೆ ಎದುರಾಯಿತು. ನೆಟ್​ವರ್ಕ್​ನ ದಟ್ಟಣೆಯ ಈ ತಡೆಯು ಡೇಟಾ ಸೆಂಟರ್ ಸಂವಹನದ ಮೇಲೆ ಪರಿಣಾಮ ಬೀರುವಂತೆ ಮಾಡಿ, ನಮ್ಮ ಸೇವೆ ನಿಂತುಹೋಯಿತು ಎಂದು ಫೇಸ್​ಬುಕ್ ಬ್ಲಾಗ್​ಪೋಸ್ಟ್​ನಲ್ಲಿ ಮಾಹಿತಿ ನೀಡಿದೆ.

 

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಅಂತರಾಷ್ಟ್ರೀಯ ಸುದ್ದಿ

ದಾವಣಗೆರೆ

Advertisement
Advertisement Enter ad code here

Title

To Top