ದಾವಣಗೆರೆ: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ 2021-22ರ ಜುಲೈ (ನವೆಂಬರ್) ಸಾಲಿನ ಪ್ರಥಮ ವರ್ಷದ ಬಿಎ, ಬಿಕಾಂ, ಬಿಎಲ್ ಐಎಸ್‍ಸಿ, ಬಿಬಿಎ, ಬಿಎಸ್‍ಸಿ, ಬಿಸಿಎ, ಎಂ.ಎ, ಎಂಕಾಂ, ಎಂಬಿಎ, ಎಂಎಲ್.ಐ.ಎಸ್‍ಸಿ, ಡಿಪ್ಲೋಮಾ, ಡಿಪ್ಲೋಮಾ ಸರ್ಟಿಫೀಕೆಟ್ ಕೋರ್ಸ್‍ನ ಅಧ್ಯಯನ ವಿಷಯಗಳ ಪ್ರವೇಶಾತಿಗೆ ನ.18 ಕೊನೆಯ ದಿನಾಂಕವಾಗಿರುತ್ತದೆ.
ಈ ಮೇಲಿನ ಕೋರ್ಸ್‍ಗೆ ಸಂಬಂಧಿಸಿದಂತೆ ಯುಜಿಸಿ ಯು ಅನುಮತಿ ನೀಡಿದ್ದು, ಈಗಾಗಲೇ ಅ.7 ರಿಂದ ಪ್ರವೇಶಾತಿ ಪ್ರಕ್ರಿಯೆ ಪ್ರಾರಂಭವಾಗಿದೆ. ಆಸಕ್ತ ವಿದ್ಯಾರ್ಥಿಗಳು ಯಾವುದೇ ದಂಡ ಶುಲ್ಕವಿಲ್ಲದೆ ಪ್ರವೇಶಾತಿ ಪಡೆಯಬಹುದು. ಹೆಚ್ಚಿನ ಮಾಹಿತಿಗಾಗಿ ವಿಶ್ವವಿದ್ಯಾನಿಲಯ ವೆಬ್‍ಸೈಟ್ ತಿತಿತಿ.ಞsoumಥಿsuಡಿu.ಚಿಛಿ.iಟಿ ಅಥವಾ ದೂರವಾಣಿ ಸಂಖ್ಯೆ 9916009318, 8095939359, 9008905457 ಕ್ಕೆ ಸಂಪರ್ಕಿಸಬಹುದು. ಅಥವಾ ಪ್ರಾದೇಶಿಕ ಕೇಂದ್ರ ಕಚೇರಿಗೆ ಖುದ್ದಾಗಿ ಭೇಟಿ ನೀಡಬಹುದು ಎಂದು ವಿವಿ ಪ್ರಾದೇಶಿಕ ನಿರ್ದೇಶಕರಾದ ಡಾ.ವಿಜಯ್‍ಪ್ರಕಾಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.