Connect with us

Dvgsuddi Kannada | online news portal | Kannada news online

ದಾವಣಗೆರೆ, ಬಳ್ಳಾರಿ, ವಿಜಯನಗರ ಜನರಿಗೆ ಸಿಹಿ ಸುದ್ದಿ; ಹೊಸಪೇಟೆ-ಹರಿಹರ ನೂತನ ಡೆಮು ರೈಲಿಗೆ ಚಾಲನೆ

ಪ್ರಮುಖ ಸುದ್ದಿ

ದಾವಣಗೆರೆ, ಬಳ್ಳಾರಿ, ವಿಜಯನಗರ ಜನರಿಗೆ ಸಿಹಿ ಸುದ್ದಿ; ಹೊಸಪೇಟೆ-ಹರಿಹರ ನೂತನ ಡೆಮು ರೈಲಿಗೆ ಚಾಲನೆ

ವಿಜಯನಗರ: ಜಿಲ್ಲೆಯ ಹೊಸಪೇಟೆ ಮತ್ತು ದಾವಣಗೆರೆ ನಡುವಿನ ನೂತನ ಡೆಮು ರೈಲಿಗೆ ಇಂದು( ಏ.11) ಚಾಲನೆ ನೀಡಲಾಯಿತು.

ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಇಂದು ಹೊಸಪೇಟೆ ರೈಲು ನಿಲ್ದಾಣದಲ್ಲಿ ಹೊಸಪೇಟೆ-ದಾವಣಗೆರೆ-ಹರಿಹರ ಡೆಮು ರೈಲುಗೆ ಚಾಲನೆ ನೀಡಿದರು. ಬಳ್ಳಾರಿ ಸಂಸದ ವೈ. ದೇವೇಂದ್ರಪ್ಪ ಸಹ ಭಾಗಿಯಾಗಿದ್ದರು. ಈ ವೇಳೆ ಪ್ರಯಾಣಿಕರು ಹೊಸ ರೈಲು ಸೇವೆಯನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.

ಡೆಮು ರೈಲು ವೇಳಾಪಟ್ಟಿ: ಏಪ್ರಿಲ್ 4ರಿಂದ ಈ ರೈಲು ಸಂಚಾರ ನಡೆಸಲಿದೆ ಎಂದು ನೈಋತ್ಯ ರೈಲ್ವೆ ಹೇಳಿತ್ತು. ಆದರೆ ತಾಂತ್ರಿಕ ಕಾರಣದಿಂದಾಗಿ ಏಪ್ರಿಲ್ 11ರಿಂದ ರೈಲು ಸಂಚಾರ ಆರಂಭವಾಗಿದೆ. ಇದರಿಂದಾಗಿ ಹಲವು ದಿನಗಳ ವಿಜಯನಗರ ಜಿಲ್ಲೆಯ ಜನರ ಬೇಡಿಕೆ ಈಡೇರಿದಂತಾಗಿದೆ.

ಪ್ರತಿದಿನ ಬೆಳಿಗ್ಗೆ 9.40ಕ್ಕೆ ಹೊಸಪೇಟೆಯಿಂದ ನಿರ್ಗಮಿಸಿ ಹಗರಿಬೊಮ್ಮನಹಳ್ಳಿ, ಕೊಟ್ಟೂರು ಮಾರ್ಗವಾಗಿ ಮಧ್ಯಾಹ್ನ 1.30ಕ್ಕೆ ದಾವಣಗೆರೆ ತಲುಪಲಿದೆ. ಅಲ್ಲಿಂದ ಹರಿಹರಕ್ಕೆ ತೆರಳಿ ಮಧ್ಯಾಹ್ನ 3ಕ್ಕೆ (ಗಾಡಿ ಸಂಖ್ಯೆ 07396) ಬಂದ ಮಾರ್ಗದಲದಲಿಯೇ ರಾತ್ರಿ 8ಕ್ಕೆ ಹೊಸಪೇಟೆಗೆ ತಲುಪಲಿದೆ.

ಇದರ ಜೊತೆಗೆ ಹೊಸಪೇಟೆ-ಬಳ್ಳಾರಿ (ಗಾಡಿ ಸಂಖ್ಯೆ: 07397) ರೈಲು ಸಹ ಪರೀಕ್ಷಾರ್ಥ ಪ್ರತಿದಿನ ಬೆಳಿಗ್ಗೆ 6ಕ್ಕೆ ಹೊಸಪೇಟೆಯಿಂದ ನಿರ್ಮಿಸಿ 7.40ಕ್ಕೆ ಬಳ್ಳಾರಿ ತಲುಪಲಿದೆ. ಬಳ್ಳಾರಿಯಿಂದ (ಗಾಡಿ ಸಂಖ್ಯೆ: 07398) 7.50ಕ್ಕೆ ಬಿಟ್ಟು 9.30ಕ್ಕೆ ಹೊಸಪೇಟೆ ಸೇರಲಿದೆ.

ದರ ಪಟ್ಟಿ:ಹೊಸಪೇಟೆ-ಹೆಚ್. ಬಿ. ಹಳ್ಳಿ 10 ರೂ., ಹೊಸಪೇಟೆ-ಕೊಟ್ಟೂರು 25 ರೂ., ಹೊಸಪೇಟೆ-ದಾವಣಗೆರೆ 35 ರೂ., ಹೊಸಪೇಟೆ-ಹರಿಹರ 35 ರೂ., ಹೊಸಪೇಟೆ-ಬಳ್ಳಾರಿ ಕಂಟೋನ್ಮೆಂಟ್ 15 ರೂ., ಹೊಸಪೇಟೆ-ಬಳ್ಳಾರಿ 20 ರೂ.ಗಳು.

ಈ ಡೆಮು ರೈಲಿನಿಂದ ಹೊಸಪೇಟೆ-ದಾವಣಗೆರೆ ನಡುವೆ ಸಂಚರಿಸುವ ಜನರಿಗೆ ಅನುಕೂಲವಾಗಲಿದೆ. ಕಡಿಮೆ ದರದಲ್ಲಿ ಜನರು ಸಂಚಾರ ನಡೆಸಬಹುದಾಗಿದೆ. ಹಂಪಿ ಹೊಸಪೇಟೆಯಿಂದ 10 ಕಿ. ಮೀ. ದೂರದಲ್ಲಿದೆ. ಇದರಿಂದ ಪ್ರವಾಸಿಗರಿಗೆ ಸಹ ಅನುಕೂಲವಾಗಲಿದೆ. ಇನ್ನು ಬಳ್ಳಾರಿಯಿಂದ ವಾಣಿಜ್ಯ, ಶೈಕ್ಷಣಿಕ ನಗರಿ ದಾವಣಗೆರೆಗೆ ಸಂಚಾರ ಅನುಕೂಲವಾಗಲಿದೆ.

ಉಭಯ ನಗರಗಳ ನಡುವೆ ಪ್ರತಿದಿನ ವಿದ್ಯಾರ್ಥಿಗಳು, ವ್ಯಾಪಾರಿಗಳು, ಪ್ರವಾಸಿಗರು ಸಂಚಾರ ನಡೆಸುತ್ತಾರೆ. ಅವರಿಗೆ ಅನುಕೂಲವಾಗಲಿದೆ. ಡೆಮು ರೈಲಿನಿಂದ ಹೆಚ್ಚಿನ ಆಸನ ಸಿಗಲಿದ್ದು, ಜನರಿಗೆ ಅನುಕೂಲವಾಗಲಿದೆ ಎಂದು ನಿರೀಕ್ಷಿಸಲಾಗಿದೆ. 2014ರ ಮಾರ್ಚ್‌ 3ರಂದು ಕೊಟ್ಟೂರು-ಹರಿಹರ ನಡುವಿನ ರೈಲು ಸಂಚಾರಕ್ಕೆ ಅಂದಿನ ರೈಲ್ವೆ ಖಾತೆ ಸಚಿವ ಮಲ್ಲಿಕಾರ್ಜುನ ಖರ್ಗೆ ಚಾಲನೆ ನೀಡಿದ್ದರು.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

  • ಪ್ರಮುಖ ಸುದ್ದಿ

    ಶನಿವಾರ ರಾಶಿ ಭವಿಷ್ಯ 18 ಜನವರಿ 2025

    By

    ಈ ರಾಶಿಯವರಿಗೆ ಶಶಿ ಮಂಗಳ ಯೋಗದಿಂದ ಗುಡ್ ನ್ಯೂಸ್, ಶನಿವಾರ ರಾಶಿ ಭವಿಷ್ಯ 18 ಜನವರಿ 2025 – ಸೂರ್ಯೋದಯ –...

  • ಪ್ರಮುಖ ಸುದ್ದಿ

    ಕಂಕಣಬಲ ಕೂಡಿ ಬರಲು ಏನು ಮಾಡಬೇಕು..?

    By

    ತಮ್ಮ ಜಾತಕ ನೋಡಿ (ಒಂದು ವೇಳೆ ಜಾತಕ ಇಲ್ಲದೆ ಹೋದರೆ ಹುಟ್ಟಿದ ದಿನಾಂಕ ಹಾಗೂ ಸಮಯ ತಿಳಿಸಿದರೆ ಜಾತಕ ಬರೆದು ಕಳುಹಿಸಲಾಗುವುದು)...

  • ಪ್ರಮುಖ ಸುದ್ದಿ

    ಶುಕ್ರವಾರದ ರಾಶಿ ಭವಿಷ್ಯ 17 ಜನವರಿ 2025

    By

    ಈ ರಾಶಿಯವರು ಭೂ ವ್ಯವಹಾರಗಳಿಗೆ ಹೂಡಿಕೆ ಮಾಡುವರು, ಈ ರಾಶಿಯವರ ಅಧಿಕಾರಿಗಳು ಕಾರ್ಯ ಕ್ಷೇತ್ರದಲ್ಲಿ ಅಡ್ಡಿ ಆತಂಕಗಳೇ ಹೆಚ್ಚು, ಶುಕ್ರವಾರದ ರಾಶಿ...

  • ಪ್ರಮುಖ ಸುದ್ದಿ

    ರಾಶಿ ಭವಿಷ್ಯ ಗುರುವಾರ 16 ಜನವರಿ 2025

    By

    ಈ ರಾಶಿಯ ಗುತ್ತಿಗೆದಾರ ವ್ಯವಹಾರಸ್ತರಿಗೆ ಹಾಗೂ ಮಧ್ಯವರ್ತಿಗಳಿಗೆ ಧನ ಆಗಮನ, ಈ ರಾಶಿಯ ಅವಿವಾಹಿತರಿಗೆ ಮದುವೆ ಯೋಗ, ರಾಶಿ ಭವಿಷ್ಯ ಗುರುವಾರ...

  • ಪ್ರಮುಖ ಸುದ್ದಿ

    ಗಜಕೇಸರಿ ಯೋಗ ಮಾಹಿತಿ

    By

    ಸೋಮಶೇಖರ್B.Sc ವಂಶಪಾರಂಪರಿಕ ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರಪ್ರವೀಣರು. Mob.93534 88403 ವ್ಯಕ್ತಿಯ ಜನ್ಮ ಕುಂಡಲಿಯನ್ನು ನೋಡಿ ಯೋಗಗಳನ್ನು ನೋಡಬಹುದು. ಅದರಲ್ಲಿ ಒಂದು...

To Top