Connect with us

Dvgsuddi Kannada | online news portal | Kannada news online

ಡ್ರಗ್ಸ್ ಕೇಸ್ ನಲ್ಲಿ ಮಾಜಿ ಸಚಿವ ರುದ್ರಪ್ಪ ಲಮಾಣಿ ಪುತ್ರ ಅರೆಸ್ಟ್ ..!

ಪ್ರಮುಖ ಸುದ್ದಿ

ಡ್ರಗ್ಸ್ ಕೇಸ್ ನಲ್ಲಿ ಮಾಜಿ ಸಚಿವ ರುದ್ರಪ್ಪ ಲಮಾಣಿ ಪುತ್ರ ಅರೆಸ್ಟ್ ..!

ಡಿವಿಜಿ ಸುದ್ದಿ, ಬೆಂಗಳೂರು: ಡ್ರಗ್ಸ್ ಕೇಸ್​ನಲ್ಲಿ ಮಾಜಿ ಸಚಿವ ರುದ್ರಪ್ಪ ಲಮಾಣಿ ಪುತ್ರ ದರ್ಶನ್ ನನ್ನು ಕೆಂಪೇಗೌಡ ನಗರ ಪೊಲೀಸರು ಬಂಧಿಸಿದ್ದಾರೆ. ಡ್ರಗ್ಸ್ ಪೆಡ್ಲರ್​ಗಳಿಗೆ ಗೋವಾದಲ್ಲಿ ಆಶ್ರಯ ನೀಡಿದ್ದ ಆರೋಪದ ಮೇರೆ ಪೊಲೀಸರು ದರ್ಶನ್ ಲಮಾಣಿ ಬಂಧಿತನಾಗಿದ್ದಾನೆ.

ಡಾರ್ಕ್ ವೆಬ್ ಸೈಟ್​ನಲ್ಲಿ ಡ್ರಗ್ಸ್ ತರಿಸಿಕೊಳ್ಳುತ್ತಿದ್ದ  ತನಿಖೆ ಕೈಗೊಂಡ ಸಿಸಿಬಿ ಅಧಿಕಾರಿಗಳು ಬೆಂಗಳೂರಿನ ಚಾಮರಾಜಪೇಟೆಯಲ್ಲಿ ನವೆಂಬರ್ 4ರಂದು ದಾಳಿ ನಡೆಸಿದ್ದರು. ಫಾರಿನ್ ಪೋಸ್ಟ್ ಆಫೀಸ್‌ಗೆ ವಿದೇಶದಿಂದ ಡ್ರಗ್ಸ್​ ಪಾರ್ಸೆಲ್ ಬರುತಿತ್ತು. ಈ ಬಗ್ಗೆ  ತನಿಖೆ ಕೈಗೊಂಡಾಗ  ಆರೋಪಿ ಸುಜಯ್ ಎಂಬಾತ ಗಾಂಜಾ ಸಮೇತ ಸಿಸಿಬಿ ಕೈಗೆ ಸಿಕ್ಕಿಬಿದ್ದಿದ್ದ.ಸುಜಯ್ ವಿಚಾರಣೆ ವೇಳೆ ಇನ್ನಿಬ್ಬರು ಆರೋಪಿಗಳಾದ ಹೇಮಂತ್ ಮತ್ತು ಸುನೀಶ್ ಬಗ್ಗೆ ಮಾಹಿತಿ ಹೊರಬಿದ್ದಿತ್ತು.

ಈ ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದರು. ಈ ಇಬ್ಬರು ಗೋವಾದಲ್ಲಿ ಪತ್ತೆಯಾಗಿದ್ದರು. ಇವರ ಜತೆಗೆ ಮಾಜಿ ಸಚಿವ ರುದ್ರಪ್ಪ ಲಮಾಣಿ ಪುತ್ರ ದರ್ಶನ್ ಲಮಾಣಿ  ಕೂಡ ಅರೆಸ್ಟ್ ಆಗಿದ್ದಾನೆ . ಹೇಮಂತ್ ಮತ್ತು ಸುನೀಶ್‌ಗೆ ಗೋವಾದಲ್ಲಿ ದರ್ಶನ್ ಲಮಾಣಿ ಆಶ್ರಯ ನೀಡಿದ್ದ. ಈ ಇಬ್ಬರ ಜೊತೆ ದರ್ಶನ್ ಗೆ ನಿಕಟ ಸಂಪರ್ಕ ಇತ್ತು ಎನ್ನಲಾಗಿದೆ.

 

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top
(adsbygoogle = window.adsbygoogle || []).push({});