ಡಿವಿಜಿ ಸುದ್ದಿ, ಕೊಪ್ಪಳ: ಡ್ರಗ್ಸ್ ಪ್ರತಿಯೊಬ್ಬರಿಗೂ ಅವಶ್ಯಕ ಎಂದು ಕಾಂಗ್ರೆಸ್ ಶಾಸಕ ಅಮರೇಗೌಡ ಬಯ್ಯಾಪೂರ್ ಹೇಳಿದ್ದಾರೆ.
ಸುದ್ದಿಗಾರೊಂಗಿಗೆ ಮಾತನಾಡಿದ ಅವರು, ಡ್ರಗ್ಸ್ ರಾಜರ ಕಾಲದಿಂದಲೂ ಇದೆ. ಇದು ಈಗಿನ ಕಾಲಕ್ಕೆ ಬದಲಾಗಿ ವಿವಿಧ ರೂಪದಲ್ಲಿ ಲಭ್ಯವಾಗುತ್ತಿದೆ. ಡ್ರಗ್ಸ್ ಒಂದು ಅಫೀಮ್, ಇದು ಪ್ರತಿಯೊಬ್ಬ ಮನುಷ್ಯರಿಗೆ ಅಗತ್ಯವಾಗಿದೆ ಎಂದು ಡ್ರಗ್ಸ್ ಮಾಫಿಯಾವನ್ನು ಸಮರ್ಥಿಸಿಕೊಂಡಿದ್ದಾರೆ.
ಇನ್ನು ಕೇವಲ ನಟಿಯರು ಮಾತ್ರ ಡ್ರಗ್ಸ್ ಮಾಫಿಯಾದಲ್ಲಿ ಭಾಗಿಯಲ್ಲ. ಆದರೆ, ಮಾಧ್ಯಮದಲ್ಲಿ ಕೇವಲ ನಟಿಯರ ಹೆಸರು ತೋರಿಸುತ್ತಿರುವುದು ಮನಸಿಗೆ ನೋವು ತಂದಿದೆ. ನಟಿಯರನ್ನು ವಿಚಾರಣೆ, ಶಿಕ್ಷೆಯನ್ನು ಗೌಪ್ಯವಾಗಿ ಕೊಡಲಿ. ಬಂಧನಕ್ಕೆ ಒಳಗಾಗಿರುವ ನಟಿಯರು ಸಮಾಜಕ್ಕೆ ಸಂದೇಶ ಸಾರುವ ಒಳ್ಳೆಯ ಸಿನಿಮಾ ಮಾಡಿದ್ಧಾರೆ ಎಂದಿದ್ದಾರೆ.



