ಬೆಂಗಳೂರು: ಡ್ರಗ್ಸ್ ಮಾಫಿಯಾ ಪ್ರಕರಣದಲ್ಲಿ ಜೈಲಿನಲ್ಲಿದ್ದ ಸ್ಯಾಂಡಲ್ ವುಡ್ ನಟಿ ಸಂಜನಾ ಗಲ್ರಾನಿಗೆ ಜಾಮೀನು ಮಂಜೂರಾಗಿದೆ.
ನಟಿ ಸಂಜನಾ ಅನಾರೋಗ್ಯ ಸಮಸ್ಯೆ ಹಿನ್ನೆಲೆ ಜಾಮೀನು ನೀಡಬೇಕು ಎಂದು ಸಂಜನಾ ಪರ ವಕೀಲರು ವಾದ ಮಂಡಿಸಿದ್ದರು. 2018ರಲ್ಲಿ ಸರ್ಜರಿಗೆ ಒಳಗಾಗಿದ್ದ ಸಂಜನಾ 2019ರಿಂದ ಅಸ್ತಮಾ ಮತ್ತು ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ವಕೀಲರು ಕೋರ್ಟ್ ಗೆ ತಿಳಿಸಿದ್ದರು. ಹೀಗಾಗಿ ಸಂಜನಾ ಆರೋಗ್ಯ ತಪಾಸಣೆ ಮಾಡಿ, ವರದಿ ಸಲ್ಲಿಸಲು ಕೋರ್ಟ್ ಆದೇಶಿಸಿತ್ತು. ಇದೀಗ ಜಾಮೀನು ಮಂಜೂರು ಮಾಡಿದೆ. ಡ್ರಗ್ ಪ್ರಕರಣದಲ್ಲಿ ಸಂಜನಾ ಹೆಸರು ಕೇಳಿಬಂದ ಹಿನ್ನೆಲೆ ಸಿಸಿಬಿ ಪೊಲೀಸರು ಸಂಜನಾರನ್ನು ವಶಕ್ಕೆ ಪಡೆಯಲಾಗಿತ್ತು.



