Connect with us

Dvgsuddi Kannada | online news portal | Kannada news online

ಧಾರವಾಡ ಅಪಘಾತದಲ್ಲಿ ಮೃತಪಟ್ಟವರಿಗೆ ಶ್ರದ್ಧಾಂಜಲಿ; ದಾವಣಗೆರೆಯಿಂದ ಅಪಘಾತ ಸ್ಥಳದವರೆಗೆ ಜಾಥಾ

ಪ್ರಮುಖ ಸುದ್ದಿ

ಧಾರವಾಡ ಅಪಘಾತದಲ್ಲಿ ಮೃತಪಟ್ಟವರಿಗೆ ಶ್ರದ್ಧಾಂಜಲಿ; ದಾವಣಗೆರೆಯಿಂದ ಅಪಘಾತ ಸ್ಥಳದವರೆಗೆ ಜಾಥಾ

ದಾವಣಗೆರೆ: ಜನವರಿ 15ರಂದು ಬೆಳಗ್ಗೆ ಧಾರವಾಡದ ಹೊರ ವಲಯದ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರವಾಗಿ ಸಂಭವಿಸಿ ಅಫಘಾತದಲ್ಲಿ 12 ಜನ ಮೃತಪಟ್ಟಿದ್ದ ದಾರುಣ ಘಟನೆ ನಡೆದಿತ್ತು. ಈ ಅಪಘಾತದಲ್ಲಿ ಮೃತಪಟ್ಟವರಿಗೆ ಇಂದು ವಿಭಿನ್ನವಾಗಿ ಶ್ರದ್ಧಾಂಜಲಿ ಅರ್ಪಿಸಲಾಯಿತು. ಮೃತಪಟ್ಟವರ ಕುಟುಂಬ ಸದಸ್ಯರು, ಸ್ನೇಹಿತರಿಂದ ದಾವಣಗೆರೆಯಿಂದ ಧಾರವಾಡ ವರೆಗೆ ಜಾಥಾ ಹಮ್ಮಿಕೊಳ್ಳಲಾಗಿತ್ತು. ದಾವಣಗೆರೆ: ದಾಖಲೆ ಇಲ್ಲದೇ ಸಾಗಿಸುತ್ತಿದ್ದ 1.47 ಕೋಟಿ ಹಣ ವಶಕ್ಕೆ ಪಡೆದ ಪೊಲೀಸರು

ಈ ಅಪಘಾತದಲ್ಲಿ ವಿದ್ಯಾರ್ಥಿನಿಯರಿಬ್ಬರು ಸೇರಿದ್ದಾರೆ. ಜಾಥಾದ ಮೂಲಕ ಕುಟುಂಬಸ್ಥರು ಮೃತಪಟ್ಟವರಿಗೆ ಅಪಘಾತ ಸ್ಥಳದಲ್ಲೇ ಶ್ರದ್ಧಾಂಜಲಿ ಸಲ್ಲಿಸಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಿದ್ದಾರೆ.

ದಾವಣಗೆರೆಯ ಐಎಂಎ ಹಾಲ್​ನಿಂದ ಒಂದು ನೂರಕ್ಕೂ ಹೆಚ್ಚು ವಾಹನಗಳು ದಾವಣಗೆರೆಯಿಂದ ಧಾರವಾಡಕ್ಕೆ ಜಾಥಾ ಭಾಗಿಯಾಗಿದ್ದವು. ಜಾಥಾಕ್ಕೆ ಧಾರವಾಡದ ಕೆಲ ಸಂಘಟನೆಗಳಿಂದ ಸಹಕಾರ ಸಿಕ್ಕಿತು.

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top
(adsbygoogle = window.adsbygoogle || []).push({});