ದಾವಣಗೆರೆ: ದಾವಣಗೆರೆ ಜಿಲ್ಲೆಯಿಂದ ಶ್ರೀಕ್ಷೇತ್ರ ಮಂತ್ರಾಲಯದ (Davngere-Mantralayam) ಪ್ರಯಾಣಿಸುವ ಭಕ್ತರ ಅನುಕೂಲಕ್ಕಾಗಿ ಇನ್ಮುಂದೆ ಪ್ರತಿ ದಿನ ಹವಾನಿಯಂತ್ರಿತ (AC) ವೋಲ್ಟ್ ಬಸ್ ಸೌಲಭ್ಯವನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಆರಂಭಿಸಿದೆ. ಈ ನೂತನ ಬಸ್ ಸೇವೆಗೆ ಸಂಸದೆ ಪ್ರಭಾಮಲ್ಲಿಕಾರ್ಜುನ್ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.
ಪ್ರತಿ ನಿತ್ಯ ರಾತ್ರಿ 9ಕ್ಕೆ ದಾವಣಗೆರೆ ನೂತನ ಬಸ್ ನಿಲ್ದಾಣದಿಂದ ಹೊರಡುವ ಬಸ್ ಚಿತ್ರದುರ್ಗ, ಬಳ್ಳಾರಿ ಮೂಲಕ ಬೆಳಗ್ಗೆ 4ಗಂಟೆಗೆ ಮಂತ್ರಾಲಯ ತಲುಪಲಿದೆ. ನಂತರ ಅದೇ ದಿನ ಬೆಳಿಗ್ಗೆ 11 ಗಂಟೆಗೆ ಮಂತ್ರಾಲಯದಿಂದ ಹೊರಡುವ ಬಸ್ ಸಂಜೆ 6ಕ್ಕೆ ದಾವಣಗೆರೆಗೆ ಮರಳಲಿದೆ.
ದಾವಣಗೆರೆ: ಪೊಲೀಸರೇ ಚಿನ್ನದ ದರೋಡೆಗೆ ಸಾಥ್; ಇಬ್ಬರು ಪಿಎಸ್‌ಐ ಸೇರಿದಂತೆ 7 ಆರೋಪಿಗಳ ಬಂಧನ 8 ಲಕ್ಷ ಮೌಲ್ಯದ ಚಿನ್ನ ವಶ
ದರ, ಮಾರ್ಗ ಹಾಗೂ ಸಮಯ
ಈ ಮಾರ್ಗ 325 ಕಿ.ಮೀ. ಪ್ರಯಾಣ ದೂರ ಹೊಂದಿದೆ. ದಾವಣಗೆರೆಯಿಂದ ಮಂತ್ರಾಲಯಕ್ಕೆ 600 ರೂ., ಚಿತ್ರದುರ್ಗದಿಂದ 547 ರೂ., ಚಳ್ಳಕೆರೆಯಿಂದ 515 ರೂ. ಬಳ್ಳಾರಿಯಿಂದ 296 ರೂ. ಪ್ರಯಾಣ ದರ ನಿಗದಿಪಡಿ
ಸಲಾಗಿದೆ. ಈ ಬಸ್ ಸೇವೆಯು ಪ್ರತಿನಿತ್ಯ ದೊರೆಯಲಿದೆ ಎಂದು ಮಾಹಿತಿ ನೀಡಿದರು.
ಮಂತ್ರಾಲಯ ರಾಘವೇಂದ್ರಸ್ವಾಮಿ ದರ್ಶನಕ್ಕೆ (Raghavendra Math) ಪ್ರಯಾಣಿಸುವ ಭಕ್ತರು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಕೌಂಟರ್ ಅಥವಾ ksrtc.karnataka.gov.in ಸಂಪರ್ಕಿಸಿ ಮುಂಗಡ ಟಿಕೆಟ್ ಕಾಯ್ದಿರಿಸಿಕೊಳ್ಳಬಹುದು ಎಂದು ಕೆಎಸ್‌ಆರ್‌ಟಿಸಿ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿ ಬಿ.ಎಸ್. ಶಿವಕುಮಾರಯ್ಯ
ತಿಳಿಸಿದ್ದಾರೆ.
ಈ ವೇಳೆ ನಿಯಂತ್ರಣಾಧಿಕಾರಿ ಫಕ್ರುದ್ದೀನ್, ಜಿಲ್ಲಾ
ಪಂಚಾಯತ್ ಯೋಜನಾ ನಿರ್ದೇಶಕಿ ರೇಷ್ಮಾ ಕೌಸರ್ ಸೇರಿದಂತೆವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.



