ದಾವಣಗೆರೆ: ಭಾರತೀಯ ರೆಡ್ ಕ್ರಾಸ್ ನ ದಾವಣಗೆರೆ ಶಾಖೆಯಲ್ಲಿ ಮಾ.27ರಂದು ನಗರದ ದೇವರಾಜ ಅರಸ್ ಬಡಾವಣಿ ಎ ಬ್ಲಾಕ್ ನಲ್ಲಿರುವ ಶಾಮನೂರು ಶಿವಶಂಕರಪ್ಪ ರೆಡ್‌ಕ್ರಾಸ್ ಭವನ’ದ ಆವರಣದಲ್ಲಿ ರೆಡ್‌ಕ್ರಾಸ್ ರಕ್ತನಿಧಿ ಕೇಂದ್ರದ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ ಎಂದು ಸಂಸ್ಥೆಯ ಜಿಲ್ಲಾ ಸಭಾಪತಿ ಡಾ.ಎ.ಎಂ. ಶಿವಕುಮಾರ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 27ರ ಮಧ್ಯಾಹ್ನ 1ಕ್ಕೆ ರೆಡ್‌ಕ್ರಾಸ್ ರಕ್ತನಿಧಿ ಕೇಂದ್ರದ ಉದ್ಘಾಟನೆಯನ್ನು ಮಾಜಿ ಸಚಿವರೂ, ಶಾಸಕ ಶಾಮನೂರು ಶಿವಶಂಕರಪ್ಪ ನೆರವೇರಲಿದ್ದು, ರಕ್ತ ವಿಭಜಕ ಘಟಕದ ಉದ್ಘಾಟನೆಯನ್ನು ಸಂಸದ ಜಿ.ಎಂ.ಸಿದ್ದೇಶ್ವರ ನೆರವೇರಿಸುವರು.ಅಂಬುಲೆನ್ಸ್ ವಾಹನಗಳ ಉದ್ಘಾಟನೆಯನ್ನು ಶಾಸಕ ಎಸ್.ಎ.ರವೀಂದ್ರನಾಥ್ ನೆರವೇರಿಸುವರು. ರೆಡ್‌ಕ್ರಾಸ್ ವೆಬ್‌ಸೈಟ್‌ಗೆ ಚನ್ನಗಿರಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಚಾಲನೆ ನೀಡುವರು ಅಧ್ಯಕ್ಷತೆಯನ್ನು ಜಿಲ್ಲಾಧಿಕಾರಿಗಳೂ ದಾವಣಗೆರೆ ರೆಡ್‌ಕ್ರಾಸ್ ಸಂಸ್ಥೆಯ ಅಧ್ಯಕ್ಷರಾದ ಮಹಾಂತೇಶ್ ಬೀಳಗಿಯವರು ವಹಿಸುವರು. ದಾವಣಗೆರೆ ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್, ದಾವಣಗೆರೆ ಸ್ಮಾರ್ಟ್ ಸಿಟಿ ಲಿ.ನ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ.ಬಿ. ಮಲ್ಲಾಪುರ, ಮಹಾನಗರ ಪಾಲಿಕೆಯ ಆಯುಕ್ತ ವಿಶ್ವನಾಥ.ಪಿ.ಮುದ್ದಜ್ಜಿ ಭಾಗವಹಿಸುವರು.
ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ಸಿ.ಎ.ಉಮೇಶ್ ಶೆಟ್ಟಿ, ಉಪ ಸಬಾಪತಿ ಡಿ.ಎಸ್.ಸಿದ್ದಣ್ಣ, ಗೌಡ್ರ ಚನ್ನಬಸಪ್ಪ, ಖಜಾಂಚಿ ಅನಿಲ್ ಬಾರೆಂಗಳ್, ಶ್ರೀಕಾಂತ್ ಬಗಾರೆ, ಡಿ.ಎಸ್.ಶಿವಾನಂದ, ಸಾಗರ್, ಕರಿಬಸಪ್ಪ ಇದ್ದರು.



