ದಾವಣಗೆರೆ: ನಗರದ ವಿವಿಧ ನ್ಯಾಯಾಲಯಗಳಲ್ಲಿ 29 ಪ್ರಕರಣಗಳಲ್ಲಿ ಸುಳ್ಳು ಜಾಮೀನು ಪ್ರಮಾಣ ಪತ್ರ ನೀಡಿ ನ್ಯಾಯಾಲಯಕ್ಕೆ ವಂಚಿಸಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಫೆ.15 ರಂದು ಘನ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನ್ಯಾಯಾಧೀಶ ವಿಜಯಾನಂದ ಜೆ.ವಿ ಬಳಿ ಸೆಷೆನ್ಸ್ ಪ್ರಕರಣ ಸಂಖ್ಯೆ 236/2022 ರಲ್ಲಿ ಆರೋಪಿತನ ಜಾಮೀನು ಅರ್ಜಿ ವಿಚಾರಣೆ ವೇಳೆ ಪ್ರಕರಣದ ಆರೋಪಿಯೊಬ್ಬನ ಪರವಾಗಿ ಬಸವರಾಜ @ ಪೂಜಾರ್ ಬಸವರಾಜಪ್ಪ, @ ಬಸಪ್ಪ ( 55 ) ವ್ಯವಸಾಯ ವೃತ್ತಿ, ಯಡಿಹಳ್ಳಿ ಗ್ರಾಮ, ಹರಪನಹಳ್ಳಿ ತಾಲ್ಲೂಕು ವಿಜಯನಗರ ಜಿಲ್ಲೆ ಎಂಬುವರು ಜಾಮೀನು, ಪ್ರಮಾಣ ಪತ್ರ, ಆಧಾರ್ ಕಾರ್ಡ್, ಹಾಗು ಪಹಣಿ ಸ. ನಂ-637/1 ರಲ್ಲಿ 1 ಎಕೆರೆ 50 ಗುಂಟೆ, ಯಡಿಹಳ್ಳಿ ಗ್ರಾಮ, ತೆಲಗಿ ಹೋಬಳಿ ಹರಪನಹಳ್ಳಿ (ತಾ), ಸಿ.ಆರ್.ಪಿ.ಸಿ ಕಲಂ-441ಎ ಅಡಿಯಲ್ಲಿ ಸಲ್ಲಿಸಿ ಆರೋಪಿಗೆ ಜಾಮೀನು ನೀಡಿದ್ದರು. ಜಾಮೀನುದಾರರಿಗೆ ನ್ಯಾಯಾಧೀಶರು ವಿಚಾರಣೆಗೆ ಒಳಪಡಿಸಿದಾಗ
ಆರೋಪಿ ತಾನು ಆರೋಪಿಗೆ ಜಾಮೀನಿಗಾಗಿ ಜಮೀನು ಪಹಣಿಯನ್ನು ಭದ್ರತೆಗಾಗಿ ನೀಡಿರುತ್ತೇನೆ. ಈ ಪ್ರಕರಣಕ್ಕೆ ಬಿಟ್ಟರೆ ಬೇರೆ ಯಾವುದೇ ಪ್ರಕರಣಗಳ ಆರೋಪಿಗಳಿಗೆ ಈ ನ್ಯಾಯಾಲಯದಲ್ಲಾಗಲೀ ಇಲ್ಲವೇ ದಾವಣಗೆರೆ ನಗರದ ಬೇರೆ ಯಾವುದೇ ನ್ಯಾಯಾಲಯಗಳಲ್ಲಿ ನೀಡಿರುವುದಿಲ್ಲ ಎಂದು ತಿಳಿಸಿದ್ದರು.
ಉಚ್ಛ ನ್ಯಾಯಾಲಯ ಸ್ಥಾಪಿಸಿರುವ “Surety Scrutiny Management Application” ನಲ್ಲಿ ಪರಿಶೀಲಿಸಿದಾಗ ಸದರಿ ಬಸವರಾಜ @ ಪೂಜಾರ್ ಬಸವರಾಜ್ @ ಬಸಪ್ಪ ಈತನು ನ್ಯಾಯಾಲಯದಲ್ಲಿ ಎಸ್.ಸಿ ನಂ-192/19 ಮತ್ತು ಎಸ್.ಸಿ ನಂ-1/19 ಆರೋಪಿಗಳಿಗೆ ಇದೇ ಪಹಣಿಯ ಜಮೀನನ್ನು ಭದ್ರತೆಗಾಗಿ ನೀಡಿದ್ದಲ್ಲದೇ ಜಮೀನು ಭದ್ರತೆಗಾಗಿ ಆರೋಪಿಗಳಿಗೆ ನೀಡಿರುವದು ಮೇಲ್ನೋಟಕ್ಕೆ ಕಂಡುಬಂದಿರುತ್ತದೆ. ಜಾಮೀನುದಾರರನ್ನು ಪೊಲೀಸ್ ವಶಕ್ಕೆ ನೀಡಿ ಕಾನೂನು ಕ್ರಮ ಜರುಗಿಸಲು ಸೂಚಿಸಿ ದೂರು ನೀಡಿದ್ದರ ಮೇರೆಗೆ ಬಡಾವಣೆ ಪೊಲೀಸ್ ಠಾಣೆಯಲ್ಲಿ ನಂ-48/2023 ಕಲಂ 181, 191, 193, 196, 420 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿರುತ್ತದೆ.