ದಾವಣಗೆರೆ: ಸಂತೇಬೆನ್ನೂರು ಪುಷ್ಕರಣಿ ಆವರಣದಲ್ಲಿ 8ನೇ ಅಂತರಾಷ್ಟ್ರೀಯ ಯೋಗ ದಿನ ಸಂಭ್ರಮ

Dvgsuddi
By
Dvgsuddi
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ....
3 Min Read

ದಾವಣಗೆರೆ: ಜನರು ಬಿಪಿ, ಶುಗರ್ ಕಾಯಿಲೆಗೆ ಔಷಧಿ ಸೇವಿಸುತ್ತಿದ್ದಾರೆ. ಔಷಧಿಗೆ ಹಾಕುವ ಹಣ ನಿಂತರೆ ಸಾಕು. ನಮ್ಮ ಆರ್ಥಿಕ ಸ್ಥಿತಿ ಸುಧಾರಣೆ ಆಗಲಿದೆ. ಈ ನಿಟ್ಟಿನಲ್ಲಿ ನಾವುಗಳು ನಿರೋಗಿಗಳಾಗಲು ಯೋಗಾಭ್ಯಾಸವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಂಸದ ಡಾ.ಜಿ.ಎಂ ಸಿದ್ದೇಶ್ವರ ಕರೆ ನೀಡಿದರು.

ಚನ್ನಗಿರಿ ತಾಲೂಕಿನ ಸಂತೇಬೆನ್ನೂರಿನ ಐತಿಹಾಸಿಕ ಸ್ಥಳವಾದ ಪುಷ್ಕರಣಿಯ ಆವರಣದಲ್ಲಿ ಜಿಲ್ಲಾಡಳಿತ, ಜಿ.ಪಂ,ಆಯುಷ್ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಸಹಯೋಗದಲ್ಲಿ ‘ಮಾನವೀಯತೆಗಾಗಿ ಯೋಗ’ ಘೋಷವಾಕ್ಯದಡಿ ಆಯೋಜಿಸಿದ್ದ 8ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಯೋಗ ಎನ್ನುವುದು ಪುರಾತನ ಕಾಲದಿಂದ ಬಂದಿದ್ದು, ಸ್ವಾತಂತ್ರ ಬಂದ ನಂತರ ಇದನ್ನು ಕಡೆಗಣಿಸಿದ್ದರು ಪ್ರಧಾನಮಂತ್ರಿ ನರೇಂದ್ರ ಮೋದಿಜಿ ಅವರ ನೇತೃತ್ವದಲ್ಲಿ ಜೂನ್ 21 ರಂದು ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ನಡೆಸಿಕೊಂಡುಬರುತ್ತಿದ್ದಾರೆ ಇದನ್ನು ಸುಮಾರು 127 ದೇಶಗಳಲ್ಲಿ ಆಚರಣೆ ಮಾಡಲಾಗುತ್ತಿದೆ. ಸ್ವತಂತ್ರ ಅಮೃತಮಹೋತ್ಸವದ ಅಂಗವಾಗಿ ಭಾರತದಾದ್ಯಂತ 75 ವಿವಿಧ ಪ್ರಸಿದ್ಧ ಸ್ಥಳಗಳಲ್ಲಿ ಯೋಗ ದಿನಾಚರಣೆಯನ್ನು ಆಚರಿಸಲಾಗುತ್ತಿದೆ ಎಂದರು.

ದೇಶದ ಎಲ್ಲಾ ರಾಜ್ಯ ಜಿಲ್ಲೆ ಹೋಬಳಿ ಗ್ರಾಮ ಮಟ್ಟಗಳಲ್ಲಿಯೂ ಯೋಗ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಮನುಷ್ಯನಿಗೆ ದೈಹಿಕ-ಮಾನಸಿಕ ಆರೋಗ್ಯ ಹಾಗೂ ಯೋಗಕ್ಷೇಮಕ್ಕೆ ಯೋಗವು ಅವಶ್ಯವಾಗಿದೆ. ಹಾಗಾಗಿ ಪಾಲಕರು ತಮ್ಮ ಮಕ್ಕಳಿಗೆ ಬಾಲ್ಯದಿಂದಲೇ ಯೋಗವನ್ನು ಕಲಿಸಬೇಕು ಇದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು
ಶಾಸಕ ಮಾಡಾಳು ವಿರೂಪಾಕ್ಷಪ್ಪ ಮಾತನಾಡಿ, ಆರುಸಾವಿರ ವರ್ಷದ ಹಿಂದೆಯೇ ಯೋಗ ಭಾರತದಲ್ಲಿ ಹುಟ್ಟಿತ್ತು ಅಂದಿನವರು ಶತಾಯುಷಿಗಳಾಗಿದ್ದರು, ಖುಷಿಮುನಿಗಳು ಯೋಗದ ಮೂಲಕ ಆರೋಗ್ಯವಂತರಾಗಿದ್ದರು. ಪ್ರಧಾನಿ ಮೋದಿಯವರು ಯೋಗದ ಮಹತ್ವವನ್ನು ಜಗತ್ತಿಗೆ ಸಾರಿದರು. ಯೋಗದ ಮೂಲಕ ನಾವು ಆರೋಗ್ಯ ಪಡೆಯೋಣ. ಪಾರಂಪರಿಕ ಸ್ಥಳವಾದ ಸಂತೇಬೆನ್ನೂರು ಪುಷ್ಕರಣಿಯಲ್ಲಿ ಯೋಗದಿನಾಚರಣೆ ಹಮ್ಮಿಕೊಂಡಿರುವುದು ಹಾಗೂ ಇಂತಹ ಸ್ಥಳಗಳ ಇತಿಹಾಸ ಪರಿಚಯ ಮಾಡಿರುವುದು ಉತ್ತಮಕಾರ್ಯ ಎಂದರು.

ವಿಧಾನ ಪರಿಷತ್ ಸದಸ್ಯೆ ತೇಜಸ್ವಿನಿ ಗೌಡ ಮಾತನಾಡಿ, ಸನಾತನ ಕಾಲದಿಂದಲೂ ದೇಶದಲ್ಲಿ ಯೋಗ ಇತ್ತು ಆ ದಿನಗಳು ಮತ್ತೆ ಮರುಕಳಿಸುತ್ತಿದೆ. ಆರೋಗ್ಯವೇ ದೇವರು ಯೋಗದಿಂದ ಆರೋಗ್ಯ ಸಾಧ್ಯ. ಇಂತಹ ಪುಣ್ಯನೆಲದಲ್ಲಿ ಜನ್ಮತಳೆದ ನಾವು ಇಂದು ತ್ಯಾಗ ಬಲಿದಾನಕ್ಕೆ ಹೆಸರಾಗಿರುವ ಚನ್ನಗಿರಿಯ ಐತಿಹಾಸಿಕ ಸ್ಥಳದಲ್ಲಿ ಯೋಗದಿನ ಆಚರಿಸುತ್ತಿರುವುದು ನಮ್ಮೆಲ್ಲರ ಪುಣ್ಯ. ಇಡೀ ಜಗತ್ತಿನಲ್ಲಿ ಶಾಂತಿ, ನೆಮ್ಮದಿ, ವೈಭವ ಹಣದಿಂದ ಸಿಗುವುದಿಲ್ಲ ಇದು ಯೋಗದಿಂದ ಮಾತ್ರ ಸಾಧ್ಯ ಎಂದರು.
ಇಂದು ನಾವು ಭಾರತೀಯತೆಯನ್ನು ಸಂಭ್ರಮಿಸಬೇಕಾದ ದಿನ ಇದಾಗಿದೆ. ಯೋಗವನ್ನು ಭಾರತೀಯರು ಹೊಸದಾಗಿ ನೀಡುತ್ತಿಲ್ಲ ನಮ್ಮ ಸನಾತನ ಪರಂಪರೆಯಲ್ಲಿ ಯೋಗವಿತ್ತು ಎಂದರು. ವಿಶ್ವದಲ್ಲೇ ಸುಮಾರು 200 ರಾಷ್ಟ್ರಗಳಲ್ಲಿ ಯೋಗದಿನ ಆಚರಿಸಲಾಗುತ್ತಿದೆ. ಜಗತ್ತಿಗೆ ಯೋಗದ ರಾಯಭಾರಿಯಾಗಿ ಪ್ರಧಾನಿ ನರೇಂದ್ರ ಮೋದಿಯವರು ನಮ್ಮ ಸಂಸ್ಕøತಿಯನ್ನು ಜಗತ್ತಿಗೆ ಸಾರಿದ್ದಾರೆ. ನಮ್ಮ ಪರಂಪರೆ, ಇತಿಹಾಸ, ಸಂಸ್ಕೃತಿ ಉಳಿಸಿ ಬೆಳೆಸಿಕೊಂಡರೆ ಅದೇ ನಾವು ನೀಡುವ ದೊಡ್ಡ ಕೊಡುಗೆ ಎಂದು ಹೇಳಿದರು.

ಜಿ.ಪಂ ಸಿಇಒ ಡಾ.ಎ.ಚನ್ನಪ್ಪ ಮಾತನಾಡಿ, ಯೋಗ ಯುಕ್ತ ರೋಗ ಮುಕ್ತ ಕಾರ್ಯಕ್ರಮ ಇದಾಗಿದೆ. ಯೋಗದ ಮೂಲಕ ನಾವು ಬದುಕೋಣ, ಬದುಕಲು ಕಲಿಸೋಣ ಎಂದರು.
ಈ ವೇಳೆ ಯೋಗಗುರು ವೈದ್ಯಶ್ರೀ ಚೆನ್ನಬಸವಣ್ಣ ಸ್ವಾಮಿ ಯೋಗದ ಮಹತ್ವ ಸಾರುವ ಮೂಲಕ ಯೋಗಾಸನದ ವಿವಿಧ ಭಂಗಿಗಳನ್ನು ಹೇಳಿಕೊಟ್ಟರು.
ಯೋಗ ಪ್ರಾತ್ಯಕ್ಷಿಕೆಯ ಪ್ರಾರ್ಥನಾ ನೃತ್ಯದೊಂದಿಗೆ ಅಂತರಾಷ್ಟ್ರೀಯ ಯೋಗಪಟು ಸೃಷ್ಠಿ ಸ್ವಾಗತಕೋರಿದರು. ಯೋಗ ಕಾರ್ಯಕ್ರಮಕ್ಕೆ ನುರಾರು ಯೋಗಾಸಕ್ತರು ದಾವಣಗೆರೆ ಸೇರಿದಂತೆ ಇತರೆ ಭಾಗಗಳಿಂದ ಆಗಮಿಸಿ ಯೋಗ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ ರಿಷ್ಯಂತ್ ಯೋಗ ದಿನಕ್ಕೆ ಶುಭ ಕೋರಿದರು.
ವೇದಿಕೆಯಲ್ಲಿ ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಮಲ್ಲಾಪುರ, ಆಯುಷ್ ಇಲಾಖೆ ಜಿಲ್ಲಾಧಿಕಾರಿ ಡಾ.ಶಂಕರಗೌಡ, ದಾವಣಗೆರೆ ಜಿಲ್ಲಾ ಯೋಗ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ವಾಸುದೇವ ರಾಯ್ಕರ್, ಎನ್.ಪರಶುರಾಮ, ದಾವಣಗೆರೆ ಪ್ರಜಾಪಿತ ಬ್ರಹ್ಮಕುಮಾರೀಸ್‍ನ ಲೀಲಾಕುಮಾರಿ, ಸಂತೇಬೆನ್ನೂರು ಗ್ರಾಮ ಪಂಚಾಯತಿ ಅಧ್ಯಕ್ಷೆ ಶಿಲ್ಪಾ ಮರುಳಸಿದ್ದಪ್ಪ, ಚನ್ನಗಿರಿ ಪುರಸಭಾ ಅಧ್ಯಕ್ಷೆ ಲಕ್ಷ್ಮೀದೇವಿ, ಬಿಜೆಪಿ ಮುಖಂಡ ಮಾಡಾಳು ಮಲ್ಲಿಕಾರ್ಜುನ, ಚನ್ನಗಿರಿ ತಹಶೀಲ್ದಾರ್ ಪಟ್ಟರಾಜು ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು, ಯೋಗಪಟುಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

Share This Article
Follow:
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com
Leave a Comment

Leave a Reply

Your email address will not be published. Required fields are marked *