ದಾವಣಗೆರೆ: ಎಲ್ಲರೂ ಪ್ರೀತಿಯಿಂದ ಚೆನ್ನಾಗಿರೋಣ. ನಮ್ಮ ನಡುವೆ ಫ್ಯಾನ್ಸ್ ವಾರ್ ಬೇಡ ಎಂದು ಸಾಮಾಜಿಕ ಜಾಲತಾಣದಲ್ಲಿ ಆಗುತ್ತಿರುವ ಫ್ಯಾನ್ಸ್ ವಾರ್ ಕುರಿತು ನಟ ಶಿವ ರಾಜ್ಕುಮಾರ್ ಬೇಸರ ವ್ಯಕ್ತಪಡಿಸಿದರು.
ಕಳೆದ ಶುಕ್ರವಾರ ತೆರೆ ಕಂಡ ಹ್ಯಾಟ್ರಿಕ್ ಹಿರೋ ಶಿವ ರಾಜ್ಕುಮಾರ್ ನಟನೆಯ
ವೇದ ಸಿನಿಮಾ ಉತ್ತಮ ಪ್ರದರ್ಶನ ಕಾಣುತ್ತಿದೆ. ತಮ್ಮ 125ನೇ ಚಿತ್ರ ಥಿಯೇಟರ್ಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಹಿನ್ನಲೆ ದಾವಣಗೆರೆಯಲ್ಲಿ ಆಗಮಿಸಿದ್ದರು. ಈ ವೇಳೆ ಫ್ಯಾನ್ಸ್ ವಾರ್ ಕುರಿತು ಈ ರೀತಿ ಪ್ರತಿಕ್ರಿಯೆ ನೀಡಿದರು.
ಅಭಿಮಾನಿಗಳು ಫ್ಯಾನ್ಸ್ ವಾರ್ ಬೇಡ ಅಂತ ಸಾಕಷ್ಟು ಬಾರಿ ಮನವಿ ಮಾಡಿಕೊಂಡಿದ್ದೇನೆ. ಎಲ್ಲರೂ ಚೆನ್ನಾಗಿರೋಣ, ಯಾರ ವಿರುದ್ಧವೂ ಮಾತನಾಡಿಲ್ಲ, ಎಲ್ಲರ ಬಗ್ಗೆಯೂ ಪ್ರೀತಿ ಇದೆ. ನನ್ನ ಹೃದಯ ತೆರದು ನೋಡಿದ್ರೆ ಕೇವಲ ಪ್ರೀತಿಯೇ ಸಿಗುತ್ತೆ ಎಂದರು.
ವೇದ ಸಿನಿಮಾ ಪ್ರಮೋಷನ್ ಗೆ ಪತ್ನಿ ಗೀತಾ ಶಿವ ರಾಜ್ಕುಮಾರ್ ಅವರ ಜೊತೆ ಆಗಮಿಸಿದ ನಟ ಶಿವ ರಾಜ್ಕುಮಾರ್ ಬೆಣ್ಣೆ ನಗರಿ ದಾವಣಗೆರೆ ನಗರದ ನಿಟ್ಟುವಳ್ಳಿ ಬಳಿ ಇರುವ ದುರ್ಗಾಂಭಿಕ ದೇವಿ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ, ಮೆರವಣಿಗೆ ನಡೆಸಿದರು.ವೇದ ಚಿತ್ರ ಮಹಿಳಾ ಪ್ರಧಾನ ಚಿತ್ರವಾಗಿದ್ದು, ಕುಟುಂಬ ಸಮೇತ ನೋಡುವ ಸಿನಿಮಾ ಎಂದರು.
ಗೀತಾ ಪ್ರೋಡಕ್ಷನ್ ಅಡಿಯ ಮೊದಲ ಚಿತ್ರವಾಗಿ ‘ವೇದ’ವನ್ನು ನಿರ್ಮಾಣ ಮಾಡಿದ್ದು ಬಹಳ ಸಂತೋಷ ಕೊಟ್ಟಿದೆ ಎಂದರು. ಇನ್ನೂ ಎರಡು ಚಿತ್ರಗಳ ಶೂಟಿಂಗ್ ನಡೆಯುತ್ತಿದೆ. ನಾನು ಅಪ್ಪು ಒಂದು ಸಿನಿಮಾ ಮಾಡಬೇಕು ಅಂದುಕೊಂಡಿದ್ದೆವು. ಅದ್ರೆ ಅದು ಸಾಧ್ಯವಾಗಲಿಲ್ಲ ಎಂದರು.



