ದಾವಣಗೆರೆ: ಮೀಸಲಾತಿ ಹೆಚ್ಚಳ ವಿಷಯಕ್ಕೆ ಸಂಬಂಧಿಸಿದಂತೆ ಸಿಎಂ ಯಡಿಯೂರಪ್ಪಗೆ ಇಂದು ಮತ್ತೊಂದು ಸಂಕಷ್ಟ ಎದುರಾಗಿತ್ತು. ವೇದಿಕೆ ಮೇಲೆಯೇ ಶ್ರೀ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಅವರ ಸಾವಿನ ಮಾತು ಕೆಲ ಕಾಲ ವೇದಿಯಲ್ಲಿ ಗೊಂದಲ ಉಂಟಾಗಿತ್ತು.
ಸರ್ಕಾರ ಮೀಸಲಾತಿ ಹೆಚ್ಚಳ ಮಾಡದಿದ್ದರೆ, ಈ ವೇದಿಕೆ ಸ್ಥಳದಲ್ಲಿಯೇ ಅಮರಣಾಂತ ಉಪವಾಸ ಕುಳಿತುಕೊಳ್ಳುತ್ತೇನೆ. ಸರ್ಕಾರ ಮೀಸಲಾತಿ ಹೆಚ್ಚಿಸಿದರೆ ಕೃತಜ್ಞತೆ ಸಮಾರಂಭ ಮಾಡುತ್ತೇವೆ. ಒಂದು ವೇಳೆ ಸರ್ಕಾರ ಮೀಸಲಾತಿ ಹೆಚ್ಚಿಸದಿದ್ದರೆ ಅಮರಣಾಂತ ಉಪವಾಸದಿಂದ ನಾನು ಸತ್ರೇ ನೀವೆಲ್ಲ… ಎಂದು ವಾಲ್ಮೀಕಿ ಶ್ರೀಗಳು ಹೇಳುತ್ತಿದ್ದಂತೆ ಇಡೀ ವೇದಿಯಲ್ಲಿ ಸಂಚಲ ಉಂಟಾಯಿತು. ಪಕ್ಕದಲ್ಲಿಯೇ ಕುಳಿತುಕೊಂಡಿದ್ದ ಸಿಎಂ ಯಡಿಯೂರಪ್ಪ ಆಕ್ಷೇಪ ವ್ಯಕ್ತಪಡಿಸಿದರು. ನಾನು ಇನ್ನೂ ಮಾತನಾಡಿಲ್ಲ. ಮೀಸಲಾತಿ ಹೆಚ್ಚಿಸುವ ಭರವಸೆ ನೀಡುತ್ತೇನೆ ಇಂತಹ ಮಾತುಗಳನ್ನು ಯಾಕೆ ಹಾಡುತ್ತಿರೀ ಎಂದು ಸಿಎಂ ಹೇಳಿದರು. ಕೂಡಲೇ ಸಮಾಜದ ಮುಖಂಡರು ಶ್ರೀಗಳ ಬಳಿ ಆಗಮಿಸಿ ಸಮಾಧಾನಪಡಿಸಿದರು.
ಈ ವೇಳೆ ಸ್ವಲ್ಪ ಸಮಯ ವೇದಿಕೆ ಮೇಲೆ ಗೊಂದಲ ಉಂಟಾಗಿತ್ತು. ನಂತರ ಸಮಾಧಾನಗೊಂಡು ಮಾತು ಮುಂದುವರಿಸಿದ ಶ್ರೀಗಳು, ನಾನು ಸಮಾಜಕ್ಕೆ ನನ್ನ ಜೀವನವನ್ನೇ ಮುಡುಪಾಗಿ ಇಟ್ಟಿದ್ದೇನೆ, ಹೀಗಾಗಿ ಇಂತಹ ಮಾತುಗಳು ಬಂದವು. ನನ್ನ ಮಾತಿನಲ್ಲಿ ತಪ್ಪಿದ್ದರೆ, ಕ್ಷಮೆ ಇರಲಿ ಎಂದು ಸಿಎಂ ಯಡಿಯೂರಪ್ಪ ಅವರಲ್ಲಿ ಕೇಳಿಕೊಂಡರು.
ವಾಲ್ಮೀಕಿ ಸಮುದಾಯಕ್ಕೆ ಮೀಸಲಾತಿ ಹೆಚ್ಚಳ ಮಾಡಬೇಕು. ಈ ಬಗ್ಗೆ ಕಳೆದ 30 ವರ್ಷಗಳಿಂದ ಹೋರಾಟ ಮಾಡಿಕೊಂಡು ಬಂದಿದ್ದೇವೆ. ಸರ್ಕಾರ ಸಮುದಾಯದ ಮೀಸಲಾತಿಯನ್ನು 7.5 ಹೆಚ್ಚಳ ಹೆಚ್ಚಳ ಮಾಡುವುದಾಗಿ ಭರವಸೆ ನೀಡುತ್ತಲೇ ಬಂದಿದೆ. ಆದರೆ, ಇನ್ನೂ ಬೇಡಿಕೆ ಪೂರೈಸಿಲ್ಲ. ಈ ಬಾರಿ ವಾಲ್ಮೀಕಿ ಜಾತ್ರೆಯಲ್ಲಿ ಘೋಷಣೆ ಆಗುವ ನಿರೀಕ್ಷೆ ಇತ್ತು. ಆದರೆ, ಸಿಎಂ ಮನಸ್ಸು ಮಾಡಿಲ್ಲ. ಸರ್ಕಾರ ಒಂದು ವೇಳೆ ಸರ್ಕಾರ ಮೀಸಲಾತಿ ಹೆಚ್ಚಳ ಮಾಡದಿದ್ದರೆ, ಈ ವೇದಿಕೆ ಸ್ಥಳದಲ್ಲಿಯೇ ಅಮರಣಾಂತ ಉಪವಾಸ ಕೈಗೊಳ್ಳುತ್ತೇನೆ. ಸರ್ಕಾರಕ್ಕೆ ಸಮಯ ಕೊಡೋಣ. ಹೀಗಾಗಿ ಮಾರ್ಚ್ 09 ರವರೆಗೆ ಗಡುವು ಕೊಡುತ್ತೇವೆ ಎಂದರು.
ಸಿಎಂ ಯಡಿಯೂರಪ್ಪ ಕೊಟ್ಟ ಮಾತು ಎಂದು ತಪ್ಪಲ್ಲ. ಅದೇ ರೀತಿ ವಾಲ್ಮೀಕಿ ಸಮುದಾಯದ ಮೀಸಲಾತಿ ಹೆಚ್ಚುಸುತ್ತಾರೆ ಎಂಬುವ ಭರವಸೆ ಇದೆ ಎಂದು ತಿಳಿಸಿದರು.