ದಾವಣಗೆರೆ: ದಾವಣಗೆರೆ ವಿಶ್ವವಿದ್ಯಾನಿಲಯದ( davangere university) ಶಿವಗಂಗೋತ್ರಿ ಆವರಣ ಹಾಗೂ ಚಿತ್ರದುರ್ಗ ಜಿ.ಆರ್. ಹಳ್ಳಿ ಜ್ಞಾನ ಗಂಗೋತ್ರಿ ಸ್ನಾತಕೋತ್ತರ ಅಧ್ಯಯನ ವಿಭಾಗಗಳಿಗೆ ಪ್ರಸಕ್ತ ಸಾಲಿನ ಶೈಕ್ಷಣಿಕ ಕಾರ್ಯಭಾರಕ್ಕನುಗುಣವಾಗಿ ಅತಿಥಿ ಉಪನ್ಯಾಸಕರು, ಭೋಧನಾ ಸಹಾಯಕ ತಾತ್ಕಾಲಿಕ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.
ಯಾವ ವಿಷಯದಲ್ಲಿ ಭರ್ತಿ..?
- ಇಂಗ್ಲೀಷ್
- ಅರ್ಥಶಾಸ್ತ್ರ
- ಉರ್ದು
- ಇತಿಹಾಸ
- ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ
- ಸಮಾಜ ಶಾಸ್ತ್ರ ವಿಭಾಗ
- ಎಂ.ಬಿ.ಎ ವಿಭಾಗ
- ಜೀವರಸಾಯನಶಾಸ್ತ್ರ
- ಅಪರಾಧ ಶಾಸ್ತ್ರ ಮತ್ತು ನ್ಯಾಯ ವಿಜ್ಞಾನ
- ಗಣಕ ವಿಜ್ಞಾನ
- ಎಂ.ಸಿ.ಎ ಸೂಕ್ಷ್ಮಾಣು ಜೀವಶಾಸ್ತ್ರ
- ಯೋಗ ವಿಜ್ಞಾನ
- ಪ್ರಾಣಿ ಶಾಸ್ತ್ರ ವಿಭಾಗ
- ಶಿಕ್ಷಣ, ದೈಹಿಕ ಶಿಕ್ಷಣ ವಿಭಾಗ
ಇದನ್ನೂ ಓದಿ-ದಾವಣಗೆರೆ: ಹಿಂದೂ ಮಹಾಗಣಪತಿ ಮೂರ್ತಿ ವಿಸರ್ಜನೆ; ಈ ಮಾರ್ಗದಲ್ಲಿ ಬದಲಾವಣೆ
ಅರ್ಜಿ ನಮೂನೆ, ನಿರ್ವಹಣಾ ಶುಲ್ಕ ಹಾಗೂ ಇನ್ನಿತರೆ ವಿವರಗಳನ್ನು ವಿಶ್ವವಿದ್ಯಾನಿಲಯದ ವೆಬ್‌ಸೈಟ್ ನಲ್ಲಿ ಮಾಹಿತಿಯನ್ನು ಪಡೆಯಬಹುದೆಂದು ವಿಶ್ವವಿದ್ಯಾನಿಲಯದ ಕುಲಸಚಿವರು ತಿಳಿಸಿದ್ದಾರೆ.



