ದಾವಣಗೆರೆ: ದಾವಣಗೆರೆ ವಿಶ್ವವಿದ್ಯಾನಿಲಯ ವ್ಯಾಪ್ತಿಯ ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ 2022-23ನೇ ಶೈಕ್ಷಣಿಕ ಸಾಲಿನಿಂದ ಹೊಸದಾಗಿ ಕಲಾ, ವಿಜ್ಞಾನ, ವಾಣಿಜ್ಯ, ಆಡಳಿತ ನಿರ್ವಹಣೆ, ಶಿಕ್ಷಣ ಮತ್ತು ದೈಹಿಕ ಶಿಕ್ಷಣ ಹಾಗೂ ಇನ್ನಾವುದೇ ಸಾಂಪ್ರದಾಯಿಕ ವಿಷಯಗಳಲ್ಲಿ ಪದವಿ ಕಾಲೇಜುಗಳನ್ನು ರಾಜ್ಯ ಸರ್ಕಾರದ/ ವಿಶ್ವವಿದ್ಯಾನಿಲಯದ ಅನುದಾನದ ಅಪೇಕ್ಷೆ ಇಲ್ಲದೆ ಪ್ರಾರಂಭಿಸಲು ಆರ್ಥಿಕ ಸಾಮಥ್ರ್ಯವುಳ್ಳ ನೋಂದಾಯಿತ ಸೊಸೈಟಿ/ ಸಾರ್ವಜನಿಕ ಟ್ರಸ್ಟ್/ಸಂಸ್ಥೆಗಳಿಂದ ನವೀನ ಸಂಯೋಜನೆಗಾಗಿ ಆನ್‍ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಪ್ರಸ್ತುತ ವಿಶ್ವವಿದ್ಯಾನಿಲಯದ ಸಂಯೋಜನೆ ಹೊಂದಿರುವ ಕಾಲೇಜುಗಳು ತಮ್ಮ ಕಾಲೇಜುಗಳ ಮುಂದುವರಿಕೆ ಸಂಯೋಜನೆ; ನವೀನ ಶಾಶ್ವತ ಸಂಯೋಜನೆ; ಶಾಶ್ವತ ಸಂಯೋಜನೆ ಪರಿಶೀಲನೆ; ಶಾಶ್ವತ ಸಂಯೋಜನೆ ನವೀಕರಣ; ಹೊಸ ಪದವಿ; ಸ್ನಾತಕೋತ್ತರ ಪದವಿ ಕೋರ್ಸ್‍ಗಳಿಗೆ ನವೀನ ಸಂಯೋಜನೆ; ಹೊಸ ಐಚ್ಛಿಕ ವಿಷಯ ಸಮೂಹ; ಹೊಸ ಭಾಷ ವಿಷಯಗಳ ನವೀನ ಸಂಯೋಜನೆ; ವಿದ್ಯಾರ್ಥಿ ಪ್ರಮಾಣದ ವಿಸ್ತರಣೆ: ಕಾಲೇಜಿನ ಹೆಸರು ಬದಲಾವಣೆ; ಸ್ಥಳ ಬದಲಾವಣೆ; ಸಹ ಶಿಕ್ಷಣ ಕಾಲೇಜಾಗಿ ಪರಿವರ್ತಿಸಲು ಮುಂತಾದವುಗಳಿಗೆ ಸಂಬಂಧಿಸಿದಂತೆ 2022-23ನೇ ಶೈಕ್ಷಣಿಕ ವರ್ಷಕ್ಕಾಗಿ ಸಂಯೋಜನಾ ಅರ್ಜಿಗಳನ್ನು ಸಲ್ಲಿಸಬಹುದು.ಹೆಚ್ಚಿನ ವಿವರಗಳಿಗಾಗಿ ಸರ್ಕಾರದ ಅಧಿಕೃತ ಅಂತರ್ಜಾಲ ವೆಬ್‍ಸೈಟ್ http://onlineaffiliation.karnataka.gov.in/Affiliation22_23/ನ್ನು ಸಂಪರ್ಕಿಸಬಹುದು ಎಂದು ದಾವಣಗೆರೆ ವಿಶ್ವವಿದ್ಯಾಲಯದ ಕುಲಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



