Connect with us

Dvgsuddi Kannada | online news portal | Kannada news online

ಹವಾಮಾನ ವೈಪರೀತ್ಯ ಕುರಿತು ರೋಮ್ ನಲ್ಲಿ ಅ. 4 ರಂದು ನಡೆಯುವ ಶೃಂಗ ಸಭೆ; ತರಳಬಾಳು ಶ್ರೀಗಳಿಗೆ ಆಹ್ವಾನ

ದಾವಣಗೆರೆ

ಹವಾಮಾನ ವೈಪರೀತ್ಯ ಕುರಿತು ರೋಮ್ ನಲ್ಲಿ ಅ. 4 ರಂದು ನಡೆಯುವ ಶೃಂಗ ಸಭೆ; ತರಳಬಾಳು ಶ್ರೀಗಳಿಗೆ ಆಹ್ವಾನ

ಸಿರಿಗೆರೆ:  ಹವಾಮಾನ ವೈಪರೀತ್ಯ (Climate Change) ಕುರಿತು ಅಕ್ಟೋಬರ್ 4 ರಂದು ಸೋಮವಾರ ರೋಮ್ ನಲ್ಲಿ ಶೃಂಗ ಸಭೆ ನಡೆಯಲಿದೆ.  ಕಳೆದ ಜನವರಿ ತಿಂಗಳಿಂದ ಇದರ ಸಿದ್ಧತೆಗಳು ನಡೆಯುತ್ತಾ ಬಂದಿವೆ.  ಜಗತ್ತಿನಾದ್ಯಂತ ಅನೇಕ ದೇಶಗಳಿಂದ ಪ್ರಮುಖ ಧರ್ಮಗುರುಗಳು ಮತ್ತು ವಿಜ್ಞಾನಿಗಳನ್ನು ಆಹ್ವಾನಿಸಲಾಗಿದೆ.  ಇದೇ ವರ್ಷ ಸ್ಕಾಂಟ್ ಲ್ಯಾಂಡಿನ ಗ್ಲಾಸ್ಗೋದಲ್ಲಿ ಅಕ್ಟೋಬರ್ 31ರಿಂದ ನವಂಬರ್ 12 ರವರೆಗೆ  ನಡೆಯಲಿರುವ ವಿಶ್ವರಾಷ್ಟ್ರಸಂಸ್ಢೆಯ  26 ನೆಯ ಅಂತಾರಾಷ್ಟ್ರೀಯ ಸಮ್ಮೇಳನಕ್ಕೆ ಪೂರಕವಾಗಿ ನಡೆಯಲಿರುವ ಈ ಶೃಂಗ ಸಭೆಯನ್ನು ಆಯೋಜಿಸಲು ಪ್ರಮುಖ ಪಾತ್ರ ವಹಿಸಿರುವವರು ಕ್ರೈಸ್ತ ಧರ್ಮಗುರುಗಳಾದ ಪೋಪ್ ಫ್ರಾನ್ಸಿಸ್ ರವರು. ಅವರು ತಮ್ಮ ರಾಯಭಾರಿಗಳ ಮುಖಾಂತರ ಸಿರಿಗೆರೆಯ ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರನ್ನು ಆಹ್ವಾನಿಸಿರುತ್ತಾರೆ.   ತರಳಬಾಳು ಶ್ರೀಗಳವರು ಇದುವರೆಗೆ ಅಂತರಜಾಲದಲ್ಲಿ ನಡೆದ ಅಂತಾರಾಷ್ಟ್ರೀಯ  ವರ್ಚುಯಲ್ ಮೀಟಿಂಗ್ ಗಳಲ್ಲಿ ಭಾಗವಹಿಸಿ ಸಂವಾದ ನಡೆಸಿರುತ್ತಾರೆ.

ಅಕ್ಟೋಬರ್ 4 ರಂದು ರೋಮ್ ನಲ್ಲಿ ನಡೆಯುವ ಈ ಶೃಂಗ ಸಭೆಗೆ ಬರುವ ಆಹ್ವಾನಿತರು ಕೊರೊನಾ ಕಾರಣದಿಂದ ಕಡ್ಡಾಯವಾಗಿ 10 ದಿನಗಳ ಕಾಲ ಮುಂಚಿತವಾಗಿ ಕ್ವಾರೆಂಟೀನ್   ಆಗಬೇಕೆಂಬ ಬಿಗಿಯಾದ ನಿಯಮ ಇಟಲಿಯಲ್ಲಿದೆ.  ಆದಕಾರಣ ಪೂಜ್ಯ ಗುರುಗಳು ಕಾರ್ಯಗೌರವದ ನಿಮಿತ್ತ  ಅಷ್ಟು ದಿನಗಳ ಕಾಲ ಮುಂಚಿತವಾಗಿ ಬಂದು ವೈಯಕ್ತಿಕವಾಗಿ ಭಾಗವಹಿಸಲು ಸಾಧ್ಯವಾಗದೇ ಇರುವುದಕ್ಕೆ ಸಂಯೋಜಕರಿಗೆ ವಿಷಾದ ವಕ್ತಪಡಿಸಿ ತಮ್ಮ ವಿದೇಶ ಪ್ರವಾಸವನ್ನು ರದ್ದುಪಡಿಸಿರುತ್ತಾರೆ.

 

ಶೃಂಗ ಸಭೆಯ ಸಂಯೋಜಕರ ಕೋರಿಕೆ ಮೇರೆಗೆ ತಮ್ಮ ವಿಚಾರಗಳನ್ನು ಸಂಕ್ಷಿಪ್ತವಾಗಿ ವೀಡಿಯೋದಲ್ಲಿ ದಾಖಲಿಸಿ ಕಳುಹಿಸಿಕೊಟ್ಟಿರುತ್ತಾರೆ.   ಅದನ್ನು ಜಗತ್ತಿನ ಅನೇಕ ಭಾಷೆಗಳಲ್ಲಿ ಭಾಷಾಂತರಿಸಿ ಪ್ರಸಾರ ಮಾಡುವುದಾಗಿ ಸಂಯೋಜಕರು ಪೂಜ್ಯಶ್ರೀಗಳವರಿಗೆ ಮಿಂಚೋಲೆ ಬರೆದಿರುತ್ತಾರೆ ಎಂದು ಶ್ರೀ ತರಳಬಾಳು ಜಗದ್ಗುರು ಬೃಹನ್ಮಠದ ಕಾರ್ಯದರ್ಶಿ ತಿಳಿಸಿದ್ದಾರೆ.

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top