ದಾವಣಗೆರೆ: ಜಿಲ್ಲೆಯ ಜಗಳೂರು ತಾಲ್ಲೂಕಿನಾದ್ಯಂತ ತೋಟಗಾರಿಕೆ (horticulture) ಬೆಳೆಗಳ ವಿಸ್ತೀರ್ಣ ಹೆಚ್ಚುತ್ತಿದ್ದು, ರೈತ ಬಾಂಧವರು ಭೂಮಿಯಲ್ಲಿ ಅಂತರ್ಜಲ (Groundwater) ಹೆಚ್ಚಿಸುವತ್ತ ಗಮನಹರಿಸಬೇಕು ಎಂದು ತರಳಬಾಳು ಕೃಷಿ ವಿಜ್ಞಾನ ಕೇಂದ್ರದ (davangere Tkvk) ತೋಟಗಾರಿಕ ತಜ್ಞ ಡಾ. ಬಸವನಗೌಡ ಎಂ.ಜಿ. ಅಭಿಪ್ರಾಯಪಟ್ಟರು.
ಈ ವರ್ಷ ವಾಡಿಕೆಗಿಂತ ಅಧಿಕ ಮುಂಗಾರು ಮಳೆ; ಕಂದಾಯ ಸಚಿವ ಕೃಷ್ಣಬೈರೇಗೌಡ ಮಾಹಿತಿ
ಜಗಳೂರು ತಾಲ್ಲೂಕು ಬಸಪ್ಪನಹಟ್ಟಿ ಗ್ರಾಮದಲ್ಲಿ ಹಮ್ಮಿಕೊಂಡ ಈರುಳ್ಳಿ ಬೆಳೆ (Onion crop) ಕ್ಷೇತ್ರೋತ್ಸವ ಮತ್ತು ತೋಟಗಾರಿಕೆ ಬೆಳೆಗಳ ನಿರ್ವಹಣೆ ಕುರಿತು ತರಬೇತಿ ಕಾರ್ಯಕ್ರಮದಲ್ಲಿ ಪ್ರಸ್ತಾವಿಕವಾಗಿ ಮಾತನಾಡಿದರು. ಪ್ರಸ್ತುತ ಗ್ರಾಮದಲ್ಲಿ ಹಿಂಗಾರು ಮತ್ತು ಬೇಸಿಗೆಗ ಸೂಕ್ತವಾದ ಈರುಳ್ಳಿ ಬೆಳೆಗಳ ಕ್ಷೇತ್ರ ಪ್ರಯೋಗವನ್ನು ಹಮ್ಮಿಕೊಂಡಿದ್ದು, ಭೀಮ ರೆಡ್ ತಳಿ ಉತ್ತಮ ಫಲಿತಾಂಶವನ್ನು ನೀಡಿದೆ ಎಂದರು.
ಕರ್ನಾಟಕ ಬಂದ್ ; ವಿವಿಧ ಸಂಘಟನೆಗಳ ಬೆಂಬಲ- ಕೆಲ ಸಂಘಟನೆಗಳು ನೈತಿಕ ಬೆಂಬಲ-ಏನಿರುತ್ತೆ? ಏನಿರಲ್ಲ?
ಪರಿಶಿಷ್ಟ ಪಂಗಡ ಉಪಯೋಜನೆಯಡಿ ಗ್ರಾಮದಲ್ಲಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ರೈತರ ಅಭಿವೃದ್ಧಿಗೆ
ಸೂಕ್ತ ಕಾರ್ಯಕ್ರಮಗಳನ್ನು ಕೇಂದ್ರದ ವತಿಯಿಂದ ರೂಪಿಸಲಾಗಿದೆ. ಏಕಬೆಳೆ ಪದ್ಧತಿಯನ್ನು ಕೈ ಬಿಟ್ಟು ಬಹು ಬೆಳೆಮತ್ತು ಬಹು ಮಹಡಿ ಪದ್ಧತಿ ತೋಟಗಾರಿಕೆಯನ್ನು ಅನುಸರಿಸಿದರೆ ಪ್ರತಿ ವರ್ಷ ನಿಶ್ಚಿತ ಆದಾಯ ಪಡೆಯಬಹುದೆಂದು ತಿಳಿಸಿದರು.
ದಾವಣಗೆರೆ: ಅಡಿಕೆ ಧಾರಣೆ; ಸತತ ಕುಸಿತ ಬಳಿಕ ಭರ್ಜರಿ ಏರಿಕೆ – ಮಾ.21ರ ದರ ಎಷ್ಟಿದೆ..?
ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಪ್ರಭು ಶಂಕರ್ ಮಾತನಾಡಿ, ಇಲಾಖೆ ವತಿಯಿಂದ ಉಚಿತವಾಗಿ ತರಕಾರಿ ಬೀಜಗಳನ್ನು ನೀಡುತ್ತಿದ್ದು ಹಾಗೂ ಹನಿ ನೀರಾವರಿಗೆ ಶೇಕಡ 90ರಷ್ಟು ಸಹಾಯಧನ ನೀಡುತ್ತಿದ್ದು, ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದರು.
ಕೇಂದ್ರದ ಬೇಸಾಯ ತಜ್ಞರ ಮಲ್ಲಿಕಾರ್ಜುನ ಬಿ. ಓ. ರವರು ಮಾತನಾಡಿ ಜಗಳೂರು ತಾಲೂಕಿನಲ್ಲಿ ಪ್ರಪ್ರಥಮ ಬಾರಿಗೆ ಈ ವರ್ಷ ನೇರ ಕೂರಿಗೆ ಭತ್ತದ ಪ್ರಾತ್ಯಕ್ಷಿಕೆಯಲ್ಲಿ ಯಶಸ್ವಿಯಾಗಿದ್ದು ಬರದ ನಾಡಿನಲ್ಲಿ ಭತ್ತವನ್ನು ಬೆಳೆಯಬಹುದೆಂದು
ಸಾಬೀತುಪಡಿಸಿದ್ದೇವೆ. ಇದನ್ನು ತಮ್ಮ ಗ್ರಾಮದಲ್ಲೂ ಅಳವಡಿಸಿಕೊಳ್ಳಬೇಕೆಂದು ತಿಳಿಸಿದರು.
ಅದೇ ರೀತಿ ಹವಮಾನ ವೈಪರಿತ್ಯಕ್ಕೆ ಸೂಕ್ತ ಕೃಷಿ ತಂತ್ರಜ್ಞಾನಗಳನ್ನು ಬಳಸಿಕೊಂಡಲ್ಲಿ ಉತ್ತಮ ಇಳುವರಿ ಪಡೆಯಬಹುದೆಂದು ತಿಳಿಸಿದರು. ಕೃಷಿ ಇಲಾಖೆಯ ಕೃಷಿ ಅಧಿಕಾರಿ ಜೀವಿತ ಮಾತನಾಡಿ ಕೃಷಿ ಇಲಾಖೆಯ ವತಿಯಿಂದ ಕೃಷಿ ಹೊಂಡ ಮತ್ತು ಇತರೆ ಅಂತರ್ಜಲ ಹೆಚ್ಚಿಸುವ ಕಾರ್ಯಕ್ರಮಗಳಿದ್ದು ರೈತರು ಅದರ ಸದುಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದರು.
ಬಿದರಿಕೆರೆ ತರಳಬಾಳು ರೈತ ಉತ್ಪಾದಕ ಕಂಪನಿಯ ಅಧ್ಯಕ್ಷ ಮಂಜುನಾಥ್ ಎಂ. ಎಚ್. ಹಾಗೂ ಉಪಾಧ್ಯಕ್ಷ ಸೋಮನಗೌಡ, ರೈತ ಉತ್ಪಾದಕ ಕಂಪನಿಯು ಬೆಳೆದು ಬಂದ ಹಾದಿಯನ್ನು ರೈತರಿಗೆ ಸವಿವರವಾಗಿ ತಿಳಿಸಿದರು. ಕಾರ್ಯಕ್ರಮದಲ್ಲಿ ನಿರ್ದೇಶಕ ಕೃಷ್ಣಮೂರ್ತಿ, ರೈತ ಶಶಿಧರ, ಮೇಘರಾಜ, 60ಕ್ಕೂ ಹೆಚ್ಚು ರೈತರು
ಹಾಜರಿದ್ದರು.