ದಾವಣಗೆರೆ: ಕಳಪೆ ಗುಣಮಟ್ಟದ ನಂಬರ್ ಪ್ಲೇಟ್ ಅಳವಡಿಸಿದ್ದ 25 ಬೈಕ್ ಗಳನ್ನು ಸಂಚಾರಿ ಪೊಲೀಸರು ಹಿಡಿದು ದಂಡ ವಿಧಿಸಿ, ಹೊಸ ನಂಬರ್ ಪ್ಲೇಟ್ ಅಳವಡಿಸಿದರು.
ರಸ್ತೆ ಸುರಕ್ಷತಾ ಸಪ್ತಾಹ ಅಂಗವಾಗಿ ಎಸ್ಪಿ ಉಮಾ ಪ್ರಶಾಂತ್ ಸೂಚನೆಯಂತೆ ಎಎಸ್ಪಿ ಹಾಗೂ ನಗರ ಡಿವೈಎಸ್ಪಿ ಮಾರ್ಗದರ್ಶನದಲ್ಲಿ ಟ್ರಾಫಿಕ್ ಸಿಪಿಐ ನಲವಾಗಲು ಮಂಜುನಾಥ್ ನೇತೃತ್ವದಲ್ಲಿ ಟ್ರಾಫಿಕ್ ಸಿಬ್ಬಂದಿಗಳೊಂದಿಗೆ ವಿಶೇಷ ಕಾರ್ಯಾಚರಣೆ ನಡೆಸಲಾಯಿತು.
ಉತ್ತಮ ನಂಬರ್ ಪ್ಲೇಟ್ ಅಳವಡಿಸದೇ ಸಂಚಾರಿಸುವ ಬೈಕ್ ಹಿಡಿದ ದಂಡ ವಿಧಿಸಿ, ಹೊಸ ನಂಬರ್ ಪ್ಲೇಟ್ ಅಳವಡಿಸಲಾಯಿತು. ಈ ವೇಳೆ ನಂಬರ್ ಪ್ಲೇಟ್ ರಹಿತವಾಗಿ ವಾಹನ ಚಾಲಿಸದಂತೆ ವಾಹನ ಚಾಲಕ, ಮಾಲೀಕರಿಗೆ ಅರಿವು ಮೂಡಿಸಿದರು.