ದಾವಣಗೆರೆ: ಜಿಲ್ಲೆಯಲ್ಲಿನ ಎಲ್ಲಾ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಎಸ್ಪಿ ಉಮಾ ಪ್ರಶಾಂತ್ ನಿರ್ದೇಶನದಂತೆ ಪೊಲೀಸ್ ಠಾಣಾಧಿಕಾರಿಗಳು ಎಸ್ಸಿ-ಎಸ್ಟಿ ವರ್ಗಗಳ ವಿದ್ಯಾರ್ಥಿಗಳ ವಸತಿ ನಿಲಯಗಳಿಗೆ ಭೇಟಿ ನೀಡಿ ಕುಂದುಕೊರತೆಗಳ ಸಭೆ ನಡೆಸಿದ್ದು, ವಿದ್ಯಾರ್ಥಿಗಳ ಕುಂದುಕೊರತೆ ಆಲಿಸಿ ಪೊಲೀಸ್ ಇಲಾಖೆಗೆ ಸಂಬಂಧಿಸಿದಂತೆ ಸಮಸ್ಯೆಗಳ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳುವ ಬಗ್ಗೆ ತಿಳಿಸಿದರು.
ಇತರೆ ಇಲಾಖೆಗಳಿಗೆ ಸಂಬಂಧಿಸಿದಂತ ಬಂದಂತಹ ದೂರುಗಳಿಗೆ ಸಂಬಂಧಪಟ್ಟ ಇಲಾಖೆಗೆ ಪತ್ರ ವ್ಯವಾಹರ ಮಾಡುವ ಮೂಲಕ ಹಾಗೂ ಹಿರಿಯ ಅಧಿಕಾರಿಗಳ ಗಮನಕ್ಕೆ ತರುವ ಮೂಲಕ ವಿದ್ಯಾರ್ಥಿಗಳ ದೂರುಗಳಿಗೆ ಕೂಡಲೇ ಸ್ಪಂದಿಸುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದರು
ವಿದ್ಯಾರ್ಥಿಗಳಿಂದ ಬಂದಂತಹ ದೂರು, ಸಮಸ್ಯೆಗೆ ಕೈಗೊಂಡ ಕ್ರಮಗಳುಗಳೇನು..?
1. ಚನ್ನಗಿರಿ ಟೌನ್ ನಲ್ಲಿನ ಸರ್ಕಾರಿ ಮೆಟ್ರಿಕ್ ಬಾಲಕಿಯರ ವಿದ್ಯಾರ್ಥಿ ನಿಲಯಕ್ಕೆ ಚನ್ನಗಿರಿ ಪೊಲೀಸ್ ಠಾಣೆಯ ಪಿಎಸ್ ಐ ಶ್ರೀಮತಿ ರೂಪ್ಲಿಬಾಯಿ ಬೇಟಿ ನೀಡಿ ವಿದ್ಯಾರ್ಥಿ / ವಿದ್ಯಾರ್ಥಿನಿಯರ ಕುಂದುಕೊರತೆಗಳನ್ನು ಆಲಿಸಿದ್ದು, ವಿದ್ಯಾರ್ಥಿ ನಿಲಯದಲ್ಲಿ ಡ್ರೈನೇಜ್ ನೀರಿನ ಸಮಸ್ಯೆ ಇದ್ದು ಸದರಿ ಡ್ರೈನೇಜ್ ನೀರು ಹಾಸ್ಟೆಲ್ ಟ್ಯಾಂಕ್ ಗೆ ಸೇರುವ ರೀತಿ ಇರುತ್ತದೆ ಎಂದು ಸಮಸ್ಯೆ ಹೇಳಿಕೊಂಡಿದ್ದು ಪುರಸಭೆ ಚೀಪ್ ಆಫೀಸರ್ ಗೆ ವಿಷಯವನ್ನು ತಿಳಿಸಿ ಬಗೆಹರಿಸುವಂತೆ ಪತ್ರ ವ್ಯವಹಾರ ನಡೆಸಿರುತ್ತದೆ.
2. ಬಿಳಿಚೋಡು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಎಸ್ಸಿ – ಎಸ್ಟಿ ಹಾಸ್ಟೆಲ್ ಗೆ ಪೊಲೀಸ್ ಅಧಿಕಾರಿಗಳು ಬೇಟಿ ನೀಡಿ ಕುಂದುಕೊರತೆಗಳ ಆಲಿಸಿದಾಗ ಈ ಬಗ್ಗೆ ಯಾವುದೇ ಸಮಸ್ಯೆಗಳು ಇರುವುದಿಲ್ಲವೆಂದು ಅಲ್ಲಿನ ವಿದ್ಯಾರ್ಥಿಗಳು ತಿಳಿಸಿದ್ದು, ನಂತರ ಅಲ್ಲಿ ಸ್ವಚ್ಚತೆಯನ್ನು ಕಾಪಾಡಿಕೊಳ್ಳಲು ಸೂಚನೆ ನೀಡಿರುತ್ತದೆ. ಮತ್ತು ಏನಾದರೂ ತೊಂದರೆ ಇದ್ದಲ್ಲಿ ಕೂಡಲೆ ಠಾಣೆಗೆ ಮಾಹಿತಿ ನೀಡಲು ಹಾಗೂ 112 ಗೆ ಕರೆಮಾಡಲು ತಿಳಿಸಲಾಗಿರುತ್ತದೆ.
3. ಜಗಳೂರಿನ ಪೊಲೀಸ್ ಠಾಣೆಯ ಪಿಎಸ್ ಐ ಶ್ರೀಮತಿ ಆಶಾ ರವರು ವಿದ್ಯಾರ್ಥಿನಿಲಯಗಳಿಗೆ ಬೇಟಿ ನೀಡಿ ಕುಂದುಕೊರತೆಗಳನ್ನು ಆಲಿಸಿದ್ದು, ಸರ್ಕಾರಿ ಮೆಟ್ರಿಕ್ ನಂತರದ ಬಾಲಕಿಯರ ಎಸ್ಸಿ – ಎಸ್ಟಿ ವಿದ್ಯಾರ್ಥಿನಿಲಯ, ಡಾ. ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ನಂತರದ ಬಾಲಕಿಯರ ಎಸ್ಸಿ – ಎಸ್ಟಿ ವಿದ್ಯಾರ್ಥಿನಿಲಯದಲ್ಲಿ ಬಿಸಿನೀರು ವ್ಯವಸ್ಥೆ ಇರುವುದಿಲ್ಲ ತಿಳಿಸಿರುತ್ತಾರೆ, ಜಗಳೂರು ಪಟ್ಟಣದ ದಿ. ಶ್ರೀ ಡಿ ದೇವರಾಜ್ ಅರ್ ಹಿಂದುಳಿದ ವರ್ಗಗಳ ಸರ್ಕಾರಿ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿನಿಲಯದಲ್ಲಿ ಗ್ರಂಥಾಲಯದಲ್ಲಿ ಹಳೆಯ ಪುಸ್ತಕಗಳು ಇರುತ್ತವೆ ಹೊಸ ಪುಸ್ತಕ ನೀಡಲು ಕೋರಿರುತ್ತಾರೆ ಸಿಂಟೆಕ್ಸ್ ಸರಿಯಾಗಿ ತೊಳಿಯುತಿಲ್ಲ ಫಿಲ್ಟರ್ ನೀರು ಸ್ವಚ್ಛತೆ ಮಾಡುತ್ತಿಲ್ಲ ಬಾತ್ರೂಮ್ ನಲ್ಲಿಗಳು ಹಾಳಾಗಿ ಹೋಗಿರುತ್ತವೆ ಸರಿ ಮಾಡಲು ಕೇಳಿರುತ್ತಾರೆ , ಜಗಳೂರು ಸರ್ಕಾರಿ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿನಿಯ ನಿಲಯದಲ್ಲಿ ಬಿಸಿನೀರು ವ್ಯವಸ್ಥೆ ಇರುವುದಿಲ್ಲ ತಿಳಿಸಿರುತ್ತಾರೆ ಸಂಬಂಧಪಟ್ಟ ಇಲಾಖೆಗೆ ಕೂಡಲೇ ಮಾಹಿತಿ ಪತ್ರ ಬರೆದು ಕ್ರಮ ಕೈಗೊಳ್ಳುವ ಬಗ್ಗೆ ಬಿಸಿ ನೀರಿನ ವ್ಯವಸ್ಥೆ ಮಾಡುವ ಬಗ್ಗೆ ತಿಳಿಸಿರುತ್ತಾರೆ.
4. ನ್ಯಾಮತಿ ಪೊಲೀಸ್ ಠಾಣಾ ವ್ಯಾಪ್ತಿಯ ಸೌವಳಂಗ ಅಂಬೇಡ್ಕರ್ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯ ಹಾಗೂ ನ್ಯಾಮತಿ ಅಂಬೇಡ್ಕರ್ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯಕ್ಕೆ ಪಿ ಎಸ್ ಐ ಶೋಭಾರಾಣಿ ಭೇಟಿ ಮಾಡಿ ಕುಂದು ಕೊರತೆಗಳನ್ನು ಆಲಿಸಿರುತ್ತಾರೆ.
5. ಬಸವಾಪಟ್ಟಣ ಪೊಲೀಸ್ ಠಾಣೆಯ ಪಿ ಎಸ್ ಐ ಶ್ರೀ ಇಮ್ತಿಯಾಜ್ ರವರು ಬಸವಾಪಟ್ಟಣದ ಸರ್ಕಾರಿ ಮೆಟ್ರಿಕ್ ನಂತರದ ಬಾಲಕರ SC ST ವಿದ್ಯಾರ್ಥಿ ನಿಲಯಕ್ಕೆ ನೀಡಿ ಕುಂದುಕೊರತೆಗಳನ್ನು ಆಲಿಸಿದ್ದು, ನಂತರ ಅಲ್ಲಿ ಸ್ವಚ್ಚತೆಯನ್ನು ಕಾಪಾಡಿಕೊಳ್ಳಲು ಸೂಚನೆ ನೀಡಿ ಮತ್ತು ಏನಾದರೂ ತೊಂದರೆ ಇದ್ದಲ್ಲಿ ಕೂಡಲೆ ಠಾಣೆಗೆ ಮಾಹಿತಿ ನೀಡಲು ಹಾಗೂ 112 ಗೆ ಕರೆಮಾಡಲು ತಿಳಿಸಲಾಗಿರುತ್ತದೆ.
6. ಹೊನ್ನಾಳಿ ಪೊಲೀಸ್ ಠಾಣೆಯ ಪಿಎಸ್ ಐ ಶ್ರೀಮತಿ ನಿರ್ಮಲ ರವರು ಹಾಗೂ ಎ ಎಸ್ ಐ ತೀರ್ಥಲಿಂಗಪ್ಪ ರವರು ಹೊನ್ನಾಳಿ ಪಟ್ಟಣದ ಡಾ. ಬಿ.ಆರ್ ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕಿಯರ ಹಾಗೂ ಬಾಲಕರ ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿ ಕುಂದುಕೊರತೆಗಳನ್ನು ಆಲಿಸಿರುತ್ತಾರೆ.
7. ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಆವರಗೊಳ್ಳ ಗ್ರಾಮದಲ್ಲಿನ ದೇವರಾಜ್ ಅರಸ್ ಹಿಂದುಳಿದ ವರ್ಗಗಳ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯಕ್ಕೆ ಪಿ ಎಸ್ ಐ ಜೋವಿತ್ ರಾಜ್ ಬೇಟಿ ನೀಡಿ ಕುಂದುಕೊರತೆಗಳನ್ನು ಆಲಿಸಿದ್ದು, ವಿದ್ಯಾರ್ಥಿಗಳು ಹಾಸ್ಟೆಲ್ ಗೆ ಪೊಲೀಸ್ ಬೀಟ್ ವ್ಯವಸ್ಥೆ ಮಾಡಲು ತಿಳಿಸಿರುತ್ತಾರೆ.
8. ಮಲೇಬೆನ್ನೂರು ಠಾಣೆ ವ್ಯಾಪ್ತಿಯ ಶ್ರೀ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯಕ್ಕೆ ಪಿ ಎಸ್ ಐ ಹಾರೂನ್ ಅಕ್ತರ್ ಬೇಟಿ ನೀಡಿ ಕುಂದುಕೊರತೆಗಳನ್ನು ಆಲಿಸಿರುತ್ತಾರೆ.
9. ಹರಿಹರ ಗ್ರಾಮಾಂತರ ಠಾಣೆ ವ್ಯಾಪ್ತಿಯ ಡಾ|| ಬಿ ಆರ್ ಅಂಬೇಡ್ಕರ್ ಮೇಟ್ರೀಕ್ ನಂತರದ ಬಾಲಕಿಯರ ಎಸ್ಸಿ-ಎಸ್ಟಿ ಹಾಸ್ಟೆಲ್ ಗೆ ಪಿ ಎಸ್ ಐ ಯುವರಾಜ್ ರವರು ಭೇಟಿ ನೀಡಿ ಕುಂದುಕೊರತೆಗಳನ್ನು ಆಲಿಸಿದ್ದು, ಯಾವುದೇ ತೊಂದರ ಇರುವುದಿಲ್ಲವೆಂದು ತಿಳಿಸಿರುತ್ತಾರೆ.
10. ಹದಡಿ ಪೊಲೀಸ್ ಠಾಣೆ ವ್ಯಾಪ್ತಿಯ ಕುಕ್ಕವಾಡ ಗ್ರಾಮದ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯಕ್ಕೆ ಪಿ ಎಸ್ ಐ ಶ್ರೀಶೈಲ ಪಟ್ಟಣಶೆಟ್ಟಿ ರವರು ಬೇಟಿ ನೀಡಿ ಕುಂದುಕೊರತೆಗಳನ್ನು ಆಲಿಸಿದ್ದು, ಯಾವುದೇ ತೊಂದರ ಇರುವುದಿಲ್ಲವೆಂದು ತಿಳಿಸಿರುತ್ತಾರೆ.
11. ಬಡಾವಣೆ ಪೊಲೀಸ್ ಠಾಣಾ ವ್ಯಾಪ್ತಿಯ ಎಮ್.ಸಿ.ಸಿ ಬಿ ಬ್ಲಾಕ್ನಲ್ಲಿ ಬರುವ ಡಾ|| ಬಿ.ಆರ್ ಅಂಬೇಡ್ಕರ್ ಮೆಟ್ರಿಕ್ ಪೂರ್ವ ಬಾಲಕೀಯರ ವಿದ್ಯಾರ್ಥಿ ನಿಲಯಕ್ಕೆ ಪಿ ಎಸ್ ಐಗಳಾದ ಮಾಳವ್ವ ಹೆಚ್, ಪಿ.ಎಸ್.ಐ (ಕಾ&ಸು) ಮತ್ತು ಲತಾ ವಿ ತಾಳೇಕರ್, ಬೇಟಿ ನೀಡಿ ಕುಂದುಕೊರತೆಗಳನ್ನು ಆಲಿಸಿದರು.
• ಈ ಹಿಂದೆ ನಾವು ವಾಸವಿರುವ ವಸತಿ ನಿಲಯದಲ್ಲಿ ಹೆಚ್ಚಾಗಿ ಇಲಿಯ ಕಾಟ ಇದ್ದ ಬಗ್ಗೆ ದೂರನ್ನು ಮಾನ್ಯ ಎಸ್.ಪಿ ಮೇಡಮ್ ರವರು ವಸತಿ ನಿಲಯಕ್ಕೆ ಭೇಟಿ ನೀಡಿದಾಗ ತಿಳಿಸಿದಾಗ ಅವುಗಳು ಒಳಗಡೆ ಬಾರದಂತೆ ಮೆಸ್ ಅನ್ನು ಸಹ ಹಾಕಿರುತ್ತಾರೆ ಇದರಿಂದಾಗಿ ನಮಗೆ ಇಲಿಗಾಳ ಕಾಟ ತಪ್ಪಿದಂತಾಗಿದೆ ಎಂದು ವಿದ್ಯಾರ್ಥಿಗಳು ತಿಳಿಸಿರುತ್ತಾರೆ.
• ಊಟ ತಂಡಿಯ ಬಗ್ಗೆ ವಿಚಾರಿಸಿದ್ದು ಊಟ ತಿಂಡಿಯು ಉತ್ತಮ ಗುಣಮಟ್ಟದಲ್ಲಿ ಮತ್ತು ರುಚಿಕಟ್ಟಾಗಿ ಇರುತ್ತದೆ. ಊಟದ ಬಗ್ಗೆ ಯಾವುದೇ ರೀತಿಯ ದೂರುಗಳು ಇರುವುದಿಲ್ಲ ಎಂದು ತಿಳಿಸಿದ್ದು, ಭೇಟಿ ನೀಡಿದ ಸಮಯದಲ್ಲಿ ಪೊಲೀಸ್ ಅಧಿಕಾರಿಗಳು ವಿದ್ಯಾರ್ಥಿಗಳಿಗೆ ನೀಡಲಾಗಿರುವ ಆಹಾರವನ್ನು ಸೇವಿಸಿ ಪರೀಕ್ಷೆ ಮಾಡಿರುತ್ತಾರೆ.
• ನೀರಿನ ಟ್ಯಾಂಕ್ನಿಂದ ನೀರು ಅತ್ಯಂತ ಕಲ್ಮಶದಿಂದ ಕೂಡಿರುತ್ತದೆ ಇದರಿಂದಾಗಿ ಮೈ ಕೈ ಎಲ್ಲಾ ಕೆರೆತ ಬರುತ್ತಾ ಇರುತ್ತದೆ ನೀರು ಸಹ ಸರಿಯಾದ ರೀತಿಯಲ್ಲಿ ಬರುತ್ತಿಲ್ಲಾ ಎಂದು ತಿಳಿಸಿರುತ್ತಾರೆ.
• ವಸತಿ ನಿಲಯದಲ್ಲಿ ಅತಿಯಾಗಿ ಸೊಳ್ಳೆಗಳ ಕಾಟ ತುಂಬಾನೆ ಹೆಚ್ಚಾಗಿದೆ ಇದರಿಂದಾಗಿ ಆರೋಗ್ಯದಲ್ಲಿ ಮೇಲೆ ಹೆಚ್ಚು ಪರಿಣಾಮ ಬೀರುತ್ತಿದೆ ವಸತಿ ನಿಲಯದ ಎಲ್ಲಾ ಕಿಟಕಿಗಳಿಗೆ ಮೆಸ್ಗಳನ್ನು ಹಾಕಿಸುವಂತೆ ತಿಳಿಸಿರುತ್ತಾರೆ.
• ವಸತಿ ನಿಲಯದಲ್ಲಿ ಇಗಾಗಲೇ ಇರುವ ಎಲ್ಲಾ ಬೆಡ್ಗಳು ತುಂಬಾನೆ ಹಳೆದಾಗಿರುವ ಕಾರಣ ಎಲ್ಲಾ ಬೆಡ್ಗಳು ಹಾಳಾಗಿರುತ್ತವೆ. ಹಾಗೂ ಈಗ್ಗೆ 01 ವರ್ಷ 06 ತಿಂಗಳಿನಿಂದ ಯಾವುದೇ ರೀತಿಯ ಕಾಟ್ಗಳನ್ನು ಸಹ ನೀಡಿರುವುದಿಲ್ಲ ಎಂದು ತಿಳಿಸಿದ್ದು ಸಂಬಂಧಪಟ್ಟ ಅಧಿಕಾರಿಗಳಿಗೆ ಸಂಪರ್ಕಿಸಿ ಸೂಕ್ತ ಕ್ರಮ ಕೈಗೊಳ್ಳುವ ಬಗ್ಗೆ ತಿಳಿಸಿರುತ್ತಾರೆ.
12. ದಾವಣಗೆರೆ ನಗರದ ಎಲ್ಲಾ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಬರುವ ಎಸ್ಸಿ-ಎಸ್ಟಿ ವರ್ಗಗಳ ವಿದ್ಯಾರ್ಥಿ /ವಿದ್ಯಾರ್ಥಿನಿ ವಸತಿ ನಿಲಯಗಳಿಗೆ ಪೊಲೀಸ್ ಅಧಿಕಾರಿಗಳು ಬೇಟಿ ನೀಡಿ ಕುಂದುಕೊರತೆಗಳನ್ನು ಆಲಿಸಿರುತ್ತಾರೆ.
ಅಲ್ಲದೇ ವಿದ್ಯಾರ್ಥಿಗಳಿಗೆ ಕುಂದುಕೊರತೆಗಳನ್ನು ಆಲಿಸಿದ್ದಲ್ಲಲದೇ ಮಾದಕ ದ್ರವ್ಯಗಳ ಬಳಕೆಯ ದುಷ್ಪರಿಣಾಮಗಳು & ಕಾನೂನು ಬಾಹಿರ ಮಾರಾಟ ಹಾಗೂ ಸಾಗಾಟ ಮಾಡುವವರ ವಿರುದ್ಧ ಇರುವ ಕಾನೂನು ಕ್ರಮಗಳ ಬಗ್ಗೆ ಜಾಗೃತಿ ಮೂಡಿಸಲಾಗಿರುತ್ತದೆ. ತಮ್ಮ ಸುತ್ತ ಮುತ್ತ ಮಾದಕ ದ್ರವ್ಯಗಳ ಬಳಕೆ, ಮಾರಾಟ, ಸಾಗಾಟ ಕಂಡು ಬಂದರೆ ಕೂಡಲೇ ಸ್ಥಳೀಯ ಪೊಲೀಸ್ ಗೆ ಹಾಗೂ ತುರ್ತು ಸಹಾಯವಾಣಿ 112 ಗೆ ಕರೆ ಮಾಡಿ ಮಾಹಿತಿ ನೀಡಲು ಹಾಗೂ ಮಾಹಿತಿದಾರರ ಮಾಹಿತಿಯನ್ನು ಗುಪ್ತವಾಗಿ ಇಡುವ ಬಗ್ಗೆ ತಿಳಿಸಲಾಗಿರುತ್ತದೆ.
ಸೈಬರ್ ಅಪರಾಧ: ಸೈಬರ್ ಅಪರಾಧಗಳಿಂದ ಸುರಕ್ಷತೆ ಬಗ್ಗೆ, ಸಾಮಾಜಿಕ ಜಾಲತಾಣಗಳ ಬಳಕೆಯಲ್ಲಿರಬೇಕಾದ ಎಚ್ಚರಿಕೆಗಳು, ವಿದ್ಯಾರ್ಥಿ ದೆಸೆಯಲ್ಲಿ ಅಂತರ್ಜಾಲಗಳ ಸದ್ಬಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಅರಿವು ಮೂಡಿಸಲಾಗಿರುತ್ತದೆ.
ತುರ್ತು ಸಹಾಯವಾಣಿ: 112
ಮಕ್ಕಳ ಸಹಾಯವಾಣಿ : 1901
ಸೈಬರ್ ಸಹಾಯವಾಣಿ: 1930
ದಾವಣಗೆರೆ ಜಿಲ್ಲಾ ಪೊಲೀಸ್ ಕಂಟ್ರೂಲ್ ರೂ ನಂ: 9480803200
ಯಾವುದಾದರೂ ತಮ್ಮ ಸುತ್ತ ಮುತ್ತ ನಡೆಯುವ ಕಾನೂನು ಬಾಹಿರ ಚಟುವಟಿಕೆಗಳು, ವಂಚನೆಗಳು, ಸಾಮಾಜಿಕ ಜಾಲತಾಣಗಳಲ್ಲಿ ಕಂಡು ಬರುವ ಅಹಿತರಕರ ಪೋಸ್ಟ್ ಗಳ ಬಗ್ಗೆ ಮಾಹಿತಿ ನೀಡಲು ಮೊಬೈಲ್ ನಂ: 9480803208 ಹಾಗೂ ಸ್ಥಳೀಯ ಪೊಲೀಸ್ ಠಾಣೆಗಳ ಅಧಿಕಾರಿಗಳ ಮತ್ತು ಬೀಟ್ ಸಿಬ್ಬಂದಿಗಳ ಮೊಬೈಲ್ ನಂಬರ್ ಗಳ ಬಗ್ಗೆ ಮಾಹಿತಿ ನೀಡಲಾಗಿರುತ್ತದೆ.



