ದಾವಣಗೆರೆ: ನಗರದ ದೃಶ್ಯ ಕಲಾ ಕಾಲೇಜು ಆವರಣದಲ್ಲಿ ಸ್ಮಾರ್ಟ್ ಸಿಟಿ (smart city) ಯೋಜನೆಯಡಿ ಥೀಮ್ ಪಾರ್ಕ್ (davangere theme park) ಹಾಗೂ ಗ್ರೀಕ್ ಶೈಲಿಯ ಬಯಲು ರಂಗಮಂದಿರ ನಿರ್ಮಿಸಲಾಗಿದ್ದು, ಡಿ.1ರಿಂದ ಸಾರ್ವಜನಿಕರ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗುವುದು ಎಂದು ದಾವಣಗೆರೆ ವಿಶ್ವವಿದ್ಯಾಲಯ ಕುಲಪತಿ ಪ್ರೊ.ಬಿ.ಡಿ.ಕುಂಬಾರ ತಿಳಿಸಿದರು.
- ಒಂದೂವರೆ ಎಕರೆಯಲ್ಲಿ ಥೀಮ್ ಪಾರ್ಕ್ ಅಭಿವೃದ್ಧಿ
- 5 ಕೋಟಿ ವೆಚ್ಚದಲ್ಲಿ ಪಾರ್ಕ್ ಅಭಿವೃದ್ಧಿ
- ಕಲೆ, ಸಂಸ್ಕೃತಿ, ಗ್ರಾಮೀಣ ಜನರ ಬದುಕಿನ ಕಲಾಕೃತಿ ನಿರ್ಮಾಣ
- ಸಾಂಸ್ಕೃತಿಕ ಆಕರ್ಷಣೆಯ ಕೇಂದ್ರ
- ಶಾಲಾ ಮಕ್ಕಳಿಗೆ ನೆಚ್ಚಿನ ತಾಣ
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ದಾವಣಗೆರೆಯಲ್ಲಿ ಸಾಂಸ್ಕೃತಿಕ ಆಕರ್ಷಣೆಯ ಕೇಂದ್ರ ನಿರ್ಮಿಸುವ ಉದ್ದೇಶದಿಂದ ಥೀಮ್ ಪಾರ್ಕ್ ಅಭಿವೃದ್ಧಿಪಡಿಸಸಲಾಗಿದೆ. ಒಂದೂವರೆ ಎಕರೆಯಲ್ಲಿ 5 ಕೋಟಿ ವೆಚ್ಚದಲ್ಲಿ ಪಾರ್ಕ್ ಅಭಿವೃದ್ಧಿಪಡಿಸಲಾಗಿದೆ. ಕಲೆ, ಸಂಸ್ಕೃತಿ, ಗ್ರಾಮೀಣ ಜನರ ಬದುಕಿನ ಕಲಾಕೃತಿ ನೋಡುಗರನ್ನು ಆಜರ್ಷಿಸುತ್ತಿವೆ. ಶಾಲಾ ಮಕ್ಕಳಿಗೆ ನೆಚ್ಚಿನ ತಾಣವಾಗಿದೆ ಎಂದರು.
ಬೆಳಿಗ್ಗೆ 10ರಿಂದ ಸಂಜೆ 6 ಗಂಟೆಯವರೆಗೆ ವೀಕ್ಷಣೆಗೆ ಅವಕಾಶವಿದೆ. ಮಕ್ಕಳಿಗೆ 10 ಹಾಗೂ ವಯಸ್ಕರಿಗೆ 20 ರೂ. ಪ್ರವೇಶ ಶುಲ್ಕ ನಿಗದಿಪಡಿಸಲಾಗಿದೆ. ಈ ಸಂದರ್ಭದಲ್ಲಿ ದೃಶ್ಯಕಲಾ ಕಾಲೇಜು ಪ್ರಾಂಶುಪಾಲ ಜೈರಾಜ್ ಚಿಕ್ಕಪಾಟೀಲ, ಪ್ರಾಧ್ಯಾಪಕ ಸತೀಶ್ ಕುಮಾರ್ ವಲ್ಲಾಪುರೆ, ಸಾಹಿತಿ ಬಾ.ಮ.ಬಸವರಾಜ, ರಂಗಕರ್ಮಿ ಸಿದ್ದರಾಜು, ಮಹಾಲಿಂಗಪ್ಪ ಇದ್ದರು.