ದಾವಣಗೆರೆ: ಅನುದಾನಿತ ಶ್ರೀಮತಿ ಸುಂದರಮ್ಮ ರಾಜನಹಳ್ಳಿ ಲಕ್ಷ್ಮಣಶೆಟ್ಟಿ ಬಾಲಿಕಾ ಪ್ರೌಢಶಾಲೆಯಲ್ಲಿ ಸರ್ಕಾರದಿಂದ ಶಿಕ್ಷಕರ ಭರ್ತಿಗೆ ಅನುಮತಿ ನೀಡಿದ್ದು, ಅರ್ಹ ಶಿಕ್ಷಕರ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.
ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಆದೇಶದ ಪ್ರಕಾರ ದಿನಾಂಕ : 23-02-2023ರ ಪ್ರಕಾರ ದಿ ಸ್ಪೆಷಲ್ ಕೋಚಿಂಗ್ ಸ್ಕೂಲ್ ಪೇರೆಂಟ್ಸ್ ಅಸೋಸಿಯೇಷನ್ (ರಿ) ಸಂಸ್ಥೆಯ ಅಡಿಯಲ್ಲಿ ನಡೆಯುತ್ತಿರುವ
ಶ್ರೀಮತಿ ಸುಂದರಮ್ಮ ರಾಜನಹಳ್ಳಿ ಲಕ್ಷ್ಮಣಶೆಟ್ಟಿ ಬಾಲಿಕಾ ಪ್ರೌಢಶಾಲೆ, ದಾವಣಗೆರೆ ಸಿಟಿ ಅನುದಾನಿತ ಬಾಲಿಕಾ ಪ್ರೌಢಶಾಲೆಯಲ್ಲಿ ಖಾಲಿ ಇರುವ ಕೆಳಗೆ ಕಾಣಿಸಿದ ಬೋಧಕ ಸಹ ಶಿಕ್ಷಕರು ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.
- 1 ಆಂಗ್ಲ ಭಾಷಾ ಸಹ ಶಿಕ್ಷಕರು, ಬಿ.ಎ.ಬಿ.ಇಡಿ., (ಸಾಮಾನ್ಯ)
- 2 ಕಲಾ ಸಹ ಶಿಕ್ಷಕರು, ಬಿ.ಎ.ಬಿ.ಇಡಿ., (ಪರಿಶಿಷ್ಟ ಜಾತಿ)
ನಿಗದಿತ ವಿದ್ಯಾರ್ಹತೆಯ ಪ್ರಮಾಣ ಪತ್ರಗಳನ್ನು ಅರ್ಜಿಯೊಂದಿಗೆ ಲಗತ್ತಿಸಿ, ಕಾರ್ಯದರ್ಶಿ, ದಿ ಸ್ಪೆಷಲ್ ಕೊಚಿಂಗ್ ಸ್ಕೂಲ್ ಪೇರೆಂಟ್ಸ್ ಅಸೋಷಿಯೇಷನ್ (ರಿ), ಪಿ.ಜೆ. ಬಡಾವಣೆ, ಪ್ರವಾಸಿ ಮಂದಿರ ರಸ್ತೆ, ದಾವಣಗೆರೆ-577 002 ವಿಳಾಸಕ್ಕೆ ಸಲ್ಲಿಸುವುದು, ಅರ್ಜಿಯೊಂದಿಗೆ ನಿಗದಿತ
ವಿದ್ಯಾರ್ಹತೆಯ ಪ್ರಮಾಣಪತ್ರಗಳು ಹಾಗೂ ಸಿಂಧುತ್ವ ಪ್ರಮಾಣ ಪತ್ರ, ದೃಢೀಕೃತ ಛಾಯಾ ಪ್ರತಿಗಳನ್ನು ದ್ವಿಪ್ರತಿಗಳಲ್ಲಿ ಸಲ್ಲಿಸತಕ್ಕದ್ದು. ಪರಿಶಿಷ್ಟ ಜಾತಿಯವರು ರೂ.500-00 ಗಳನ್ನು ಮತ್ತು ಸಾಮಾನ್ಯ ಅಭ್ಯರ್ಥಿಯು ರೂ. 1000-00 ಗಳ ಬ್ಯಾಂಕ್ ಡಿ.ಡಿ.ಯನ್ನು THE SECRETARY, S.C.S. PARENTS ASSOCITION (R.), DAVANAGERE ಇವರ ಹೆಸರಿಗೆ ಸಲ್ಲಿಸತಕ್ಕದ್ದು (ಈ ಹಣವು ಮರುಪಾವತಿಸಲಾಗುವುದಿಲ್ಲ).
ಸಂದರ್ಶನಕ್ಕೆ ಆಹ್ವಾನ ಪಡೆದ ಅಭ್ಯರ್ಥಿಗಳು ಮೂಲ ದಾಖಲಾತಿಗಳೊಂದಿಗೆ ತಮ್ಮ ಸ್ವಂತ ಖರ್ಚಿನಲ್ಲಿ ಸಂದರ್ಶನಕ್ಕೆ ಹಾಜರಾಗತಕ್ಕದ್ದು. ಸಂದರ್ಶನದ ದಿನಾಂಕವನ್ನು ನಂತರ ತಿಳಿಸಲಾಗುವುದು. ಅರ್ಜಿಯ ಒಂದು ಪ್ರತಿಯನ್ನು ಉಪನಿರ್ದೇಶಕರು, ಸಾರ್ವಜನಿಕ ಶಿಕ್ಷಣ ಇಲಾಖೆ, ದಾವಣಗೆರೆ ಇವರಿಗೆ ಸಲ್ಲಿಸುವುದು. ಅವಧಿ ಮುಗಿದ ನಂತರ ಬಂದ ಮತ್ತು ಅಪೂರ್ಣ ಅರ್ಜಿಗಳನ್ನು ಪರಿಗಣಿಸುವುದಿಲ್ಲ. ವಿಳಾಸ: ಕಾರ್ಯದರ್ಶಿ, ದಿ ಸ್ಪೆಷಲ್ ಕೋಚಿಂಗ್ ಸ್ಕೂಲ್ ಪೇರೆಂಟ್ಸ್ ಅಸೋಸಿಯೇಷನ್ (ರಿ), ಪಿ.ಜೆ.ಬಡಾವಣೆ, ಪ್ರವಾಸಿ ಮಂದಿರ ರಸ್ತೆ, ದಾವಣಗೆರೆ-577 002.