ದಾವಣಗೆರೆ: ಇಂದಿನಿಂದ (ಅ.1 ಮತ್ತು 2 ರಂದು) ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರ ಹಾಗೂ ತೋಟಗಾರಿಕೆ ಇಲಾಖೆ, ಜಿಲ್ಲಾ ಪಂಚಾಯತ್ ಸಂಯುಕ್ತಾಶ್ರಯದಲ್ಲಿ ಕೃಷಿಕರ ಸಮೃದ್ಧಿಗಾಗಿ ಸಸ್ಯ ಸಂತೆ ಮತ್ತು ಸಾವಯವ ಪರಿಕರಗಳ ಮಾರಾಟ ಕಾರ್ಯಕ್ರಮವನ್ನು ಕೇಂದ್ರದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.
ದಾವಣಗೆರೆ ನಗರದಲ್ಲಿ ಪ್ರಪಥಮ ಬಾರಿಗೆ ಸಸ್ಯ ಸಂತೆ, ವಸ್ತು ಪ್ರದರ್ಶನ ಮತ್ತು ಸಾವಯವ ಪರಿಕರಗಳ ಮಾರಾಟವನ್ನು ಆಯೋಜಿಸುತ್ತಿದ್ದು ಜಿಲ್ಲೆಯ ರೈತರಿಗೆ ಮತ್ತು ನಗರದ ನಾಗರೀಕರಿಗೆ ಹೆಚ್ಚು ಅನುಕೂಲವಾಗಲಿದೆ. ಸಸ್ಯ ಸಂತೆಯ ಪ್ರಮುಖ ಆಕರ್ಷಣೆಗಳೆಂದರೆ ಉತ್ತಮ ಗುಣಮಟ್ಟದ 50ಕ್ಕೂ ಹೆಚ್ಚು ಹಣ್ಣಿನ ಗಿಡಗಳ ಮಾರಾಟ, ದೇಸಿ ಬೀಜಗಳ ಪ್ರದರ್ಶನ ಮತ್ತು ಮಾರಾಟ, ಕೈತೋಟ ಮತ್ತು ತಾರಸಿ ತೋಟಗಳಿಗೆ ಬೇಕಾಗುವ ಸಲಕರಣೆಗಳು, ಸಾವಯವ ಪರಿಕರ ಗೊಬ್ಬರಗಳ ಮಾರಾಟ, ಸಿರಿಧಾನ್ಯಗಳ ಉಪ ಉತ್ಪನ್ನಗಳು, ಸಾವಯವ ಆಹಾರ ಪದಾರ್ಥಗಳ ಮಾರಾಟ ಹೀಗೆ ಹಲವಾರು ವಿಶೇಷತೆಗಳನ್ನು ಒಳಗೊಂಡಿದೆ.
ಕಾರ್ಯಕ್ರಮದ ಅಂಗವಾಗಿ ಅಕ್ಟೋಬರ್ 1 ರಂದು ಮಧ್ಯಾಹ್ನ 2 ಗಂಟೆಗೆ ಅಡಿಕೆ ಬೆಳೆಯಲ್ಲಿ ಅಂತರ ಬೆಳೆಗಳು ಮತ್ತು ತೋಟಗಾರಿಕೆ ಬೆಳೆಗಳಲ್ಲಿ ಸಾವಯವ ಪದ್ಧತಿ ಅಳವಡಿಕೆ” ಕುರಿತು ಕಾರ್ಯಗಾರ ಏರ್ಪಡಿಸಲಾಗಿದೆ.



