ದಾವಣಗೆರೆ: ಕಳೆದ ನ.12 ರಿಂದ 14 ರವರೆಗೆ ತೆಲಂಗಾಣದ ಹನುಮಕೊಂಡದಲ್ಲಿ ನಡೆದ 30ನೇ ದಕ್ಷಿಣ ಭಾರತ ಹಿರಿಯರ ಖೋ-ಖೋ ಪಂದ್ಯಾವಳಿಯಲ್ಲಿ ಭಾಗವಹಿಸಿದ ರಾಜ್ಯ ಪುರುಷರ ತಂಡವು ತೆಲಂಗಾಣ, ತಮಿಳುನಾಡು, ಆಂಧ್ರಪ್ರದೇಶ ವಿರುದ್ದ ವಿಜಯ ಸಾಧಿಸಿ, ಅಂತಿಮ ಪಂದ್ಯದಲ್ಲಿ ಕೇರಳ ರಾಜ್ಯ ತಂಡದ ವಿರುದ್ಧ1 ಅಂಕದಿಂದ ಪರಾಜಿತಗೊಂಡು ಬೆಳ್ಳಿ ಪದಕ ಸಾಧನೆ ಮಾಡಿರುತ್ತದೆ.
ಕರ್ನಾಟಕ ರಾಜ್ಯದ ತಂಡದಲ್ಲಿ ದಾವಣಗೆರೆ ಕ್ರೀಡಾ ವಸತಿ ನಿಲಯದ ಕ್ರೀಡಾಪಟುಗಳಾದ ಅರ್ಜುನ್ ಮತ್ತು ಮಹಮ್ಮದ್ ತಾಸೀನ್ ಭಾಗವಹಿಸಿ ಉತ್ತಮ ಪ್ರದರ್ಶನ ನೀಡಿರುತ್ತಾರೆ. ಈ ಕ್ರೀಡಾಪಟುಗಳಿಗೆ ಇಲಾಖೆಯ ಖೋ-ಖೋ ತರಬೇತುದಾರ ಜೆ.ರಾಮಲಿಂಗಪ್ಪ ತರಬೇತಿ ನೀಡಿರುತ್ತಾರೆ. ಈ ಪಂದ್ಯಾವಳಿಯಲ್ಲಿ ಬೆಳ್ಳಿ ಪದಕ ಪಡೆದು, ಸಾಧನೆ ಮಾಡಿದ ರಾಜ್ಯ ತಂಡಕ್ಕೆ ಹಾಗೂ ದಾವಣಗೆರೆ ಕ್ರೀಡಾ ವಸತಿ ನಿಲಯದ ಖೋ-ಖೋ ಕ್ರೀಡಾಪಟುಗಳಿಗೆ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಎಂ.ಟಿ. ಮಂಜುನಾಥಸ್ವಾಮಿ ಅಭಿನಂದಿಸಿದ್ದಾರೆ.



