ದಾವಣಗೆರೆ: ನವೆಂಬರ್ 25 ರಿಂದ 29 ರ ವರೆಗೆ ಉತ್ತರ ಪ್ರದೇಶದ ಅಲಿಘರ್‍ನಲ್ಲಿ ನಡೆಯಲಿರುವ 43ನೇ ರಾಷ್ಟ್ರ ಮಟ್ಟದ ಜ್ಯೂನಿಯರ್ ಖೋ-ಖೋ ಚಾಂಪಿಯನ್‍ಷಿಪ್‍ನಲ್ಲಿ ಭಾಗವಹಿಸಲಿರುವ ಕರ್ನಾಟಕ ರಾಜ್ಯ ಬಾಲಕರ ತಂಡಕ್ಕೆ ದಾವಣಗೆರೆ ಕ್ರೀಡಾ ವಸತಿ ನಿಲಯದ ಖೋ-ಖೋ ಕ್ರೀಡಾಪಟುಗಳಾದ ಹುಲಗಪ್ಪ, ನಿಖಿಲ್, ವಿಜಯ್ ಹಾಗೂ ವಿನಾಯಕ ಇವರುಗಳು ಆಯ್ಕೆಯಾಗಿದ್ದಾರೆ.
ಕ್ರೀಡಾಪಟುಗಳು ಇಲಾಖೆಯ ತರಬೇತುದಾರರಾದ ರಾಮಲಿಂಗಪ್ಪಜೆ, ಖೋ-ಖೋ ತರಬೇತುದಾರರು ಇವರ ಬಳಿ ತರಬೇತಿ ಪಡೆಯುತ್ತಿದ್ದಾರೆ. ಖೋ-ಖೋ ಕ್ರೀಡಾಪಟುಗಳಿಗೆ ಸಹಾಯಕ ನಿರ್ದೇಶಕರಾದ ರೇಣುಕಾದೇವಿ, ಅಧೀಕ್ಷರಾದ ಅರ್ಪಿತಕೆ.ಜೆ, ಹಾಗೂ ಎಲ್ಲಾ ತರಬೇತುದಾರರು, ರಾಷ್ಟ್ರ ಮಟ್ಟದಲ್ಲಿ ಭಾಗವಹಿಸುವ ಕರ್ನಾಟಕ ರಾಜ್ಯ ತಂಡವು ಉತ್ತಮ ಸಾಧನೆ ಮಾಡಲೆಂದು ಶುಭ ಹಾರೈಸಿದ್ದಾರೆ.