ದಾವಣಗೆರೆ: ದೂರದ ರಾಣೆಬೇನ್ನೂರಿನಿಂದ ದಾವಣಗೆರೆಗೆ ಮಗನ ಕಾಲೇಜು ಫೀ ಕಟ್ಟಲು 1.20 ಲಕ್ಷ ಕ್ಯಾಶ್ ನೊಂದಿಗೆ ವ್ಯಕ್ತಿಯೊಬ್ಬರು ಬಂದಿದ್ದರು. ಈ ವೇಳೆ ಜ್ಯೂಸ್ ಕುಡಿಯಲು ಕಾರು ನಿಲ್ಲಿಸಿದ್ದಾರೆ. ಹಣವನ್ನು ಕಾರಲ್ಲೇ ಇಟ್ಟಿದ್ದರೆ ಸೇಫ್ ಆಗಿ ಇರುತ್ತೋ ಏನೋ..!! ಆ ವ್ಯಕ್ತಿ ಜ್ಯೂಸ್ ಶಾಪ್ ಒಳಗಡೆ ಹಣವಿದ್ದ ಬ್ಯಾಗ್ ತೆಗೆದುಕೊಂಡು ಹೋಗಿದ್ದು, ಜ್ಯೂಸ್ ಕುಡಿದ ನಂತರ ಹಣವಿದ್ದ ಬ್ಯಾಗ್ ಅಲ್ಲೇ ಬಿಟ್ಟು ಕಾರು ಹತ್ತಿ ಕಾಲೇಜ್ ಗೆ ಹೋಗಿದ್ದಾರೆ. ಆದರೂ, ಬಿಟ್ಟು ಹೋದ ಹಣ. ಮತ್ತೆ ಸೇಫ್ ಆಗಿ ಅವರ ಕೈ ಸೇರಿದೆ. ಅದು ಹೇಗೆ ಅಂತಿರಾ ಈ ಸ್ಟೋರಿ ಓದಿ….
ಹಾವೇರಿ ಜಿಲ್ಲೆಯ ರಾಣೆಬೇನ್ನೂರು ಮೂಲದ ಕಿರಾಣಿ ಅಂಗಡಿ ಮಾಲೀಕ ವೆಂಕಟೇಶ್ ಎಂಬುವವರು ಮಗನನ್ನು ದಾವಣಗೆರೆಯ ಶಿರಮಗೊಂಡನಹಳ್ಳಿ ಬಳಿ ಇರುವ ಖಾಸಗಿ ಕಾಲೇಜ್ ಗೆ ಸೇರಿಸಿದ್ದು, ಕಾಲೇಜು ಶುಲ್ಕ ಕಟ್ಟಲು ಸೋಮವಾರ ಸಂಜೆ 1.20 ಲಕ್ಷ ರೂ. ತೆಗೆದುಕೊಂಡು ಕಾರಿನಲ್ಲಿ ದಾವಣಗೆರೆಗೆ ಬಂದಿದ್ದಾರೆ. ರಾಂ ಅಂಡ್ ಕೋ ವೃತ್ತದಲ್ಲಿರುವ ರಸವಂತಿ ಜ್ಯೂಸ್ ಸೆಂಟರ್ಗೆ ಜ್ಯೂಸ್ ಕುಡಿಯಲು ಹೋದಾಗ ಕಾರಿನಲ್ಲಿಟ್ಟಿದ್ದ ಹಣ ಇರುವ ಬ್ಯಾಗ್ ಸಹ ತೆಗೆದುಕೊಂಡು ಹೋಗಿದ್ದಾರೆ. ಹಣದ ಬ್ಯಾಗ್ ಟೇಬಲ್ ಮೇಲೆ ಇಟ್ಟು ಜ್ಯೂಸ್ ಕುಡಿದು ಹಣವಿದ್ದ ಬ್ಯಾಗ್ ಟೇಬಲ್ ಮೇಲೆ ಬಿಟ್ಟು ಕಾಲೇಜಿಗೆ ಹೋಗಿದ್ದಾರೆ.
ಕಾಲೇಜ್ ಗೆ ಹೋದ ನಂತರ ಇಳಿಯುವಾಗ ವೆಂಕಟೇಶ್, ಕಾರುನಲ್ಲಿ ಹಣ ಇಲ್ಲದಿರುವುದು ಗಮನಕ್ಕೆ ಬಂದಿದೆ. ಆಗ ತಕ್ಷಣ ಜ್ಯೂಸ್ ಸೆಂಟರ್ಗೆ ಹೋಗಿ ಜ್ಯೂಸ್ ಕುಡಿದು ಹಣ ಬಿಟ್ಟು ಬಂದಿರುವುದು ಅರಿವಾಗಿದೆ.
ವೆಂಕಟೇಶ್ ಅವರ ಹಣದ ಬ್ಯಾಗ್ ಬಿಟ್ಟು ಹೋದ ಸ್ವಲ್ಪ ಹೊತ್ತಿನಲ್ಲಿ ಮಾಯಕೊಂಡ ಶಾಸಕ ಕೆಎಸ್ ಬಸವಂತಪ್ಪ ಜ್ಯೂಸ್ ಕುಡಿಯಲು ಶಾಪ್ ಗೆ ಬಂದಿದ್ದಾರೆ. ಯಾರೋ ಟೇಬಲ್ ಮೇಲೆ ಬ್ಯಾಗ್ ಬಿಟ್ಟು ಹೋಗಿರುವುದು ಅವರ ಗಮನಕ್ಕೆ ಬಂದಿದೆ. ತಕ್ಷಣ ಬ್ಯಾಗ್ ಪರಿಶೀಲಿಸಿದ್ದಾರೆ. ಬ್ಯಾಗ್ನಲ್ಲಿ ಹಣ ಇರುವುದು ಪತ್ತೆಯಾಗಿದೆ. ಯಾರೋ ಹಣ ಬಿಟ್ಟು ಹೋಗಿದ್ದಾರೆ ಎಂದು ಶಾಸಕ ಬಸವಂತಪ್ಪ, ಜ್ಯೂಸ್ ಸೆಂಟರ್ ಮಾಲೀಕ ಮತ್ತು ಜನರ ಎದುರು ಹಣವನ್ನು ಎಣಿಸಿದ್ದಾರೆ. ಆಗ ಬ್ಯಾಗ್ ನಲ್ಲಿ 1.20 ಲಕ್ಷ ರೂ. ಇರುವುದು ಗೊತ್ತಾಗಿದೆ. ಈ ಹಣ ಯಾರದು ಎಂದು ಗೊತ್ತಾಗುವವರೆಗೂ ನನ್ನ ಬಳಿ ಇರುತ್ತದೆ. ಅವರು ಬಂದ ಮೇಲೆ ಫೋನ್ ಮಾಡಿ ಎಂದು ಶಾಸಕರು ಜ್ಯೂಸ್ ಸೆಂಟರ್ ಮಾಲೀಕನಿಗೆ ಹೇಳಿ ತೆರಳಿದ್ದರು.
ಹಣ ಕಳೆದುಕೊಂಡಿದ್ದ ವೆಂಕಟೇಶ್, ಗೂಗಲ್ನಲ್ಲಿ ಜ್ಯೂಸ್ ಸೆಂಟರ್ ಫೋನ್ ನಂಬರ್ ಹುಡುಕಿ ಕೆರೆ ಮಾಡಿ, ಒಂದು ಹಣದ ಬ್ಯಾಗ್ ಜ್ಯೂಸ್ ಸೆಂಟರ್ ಬಿಟ್ಟು ಹೋಗಿದ್ದೇವೆ. ಬ್ಯಾಗದ ಇದೆಯಾ ಎಂದು ವಿಚಾರಿಸಿದ್ದಾರೆ. ಹೌದು, ಇದೆ ಎಂದು ತಿಳಿಸಿದ ತಕ್ಷಣ ಹಣ ಬಿಟ್ಟು ಹೋಗ ವೆಂಕಟೇಶ್ ಬಮದಿದ್ದಾರೆ. ಈ ವೇಳೆ ಶಾಸಕರೂ ಸಹ ಅಲ್ಲಿಗೆ ಬಂದಿದ್ದಾರೆ.
ಬ್ಯಾಗಿನಲ್ಲಿ ಎಷ್ಟು ಹಣ ಇತ್ತು ಎಂದು ಶಾಸಕರು ಕೇಳಿದ್ದಾರೆ. ಆಗ 1.30 ಲಕ್ಷ ರೂ. ಇತ್ತು ಎಂದು ವೆಂಕಟೇಶ್ ಹೇಳಿದ್ದಾರೆ. ಶಾಸಕರು, ಇದು ನಿಮ್ಮ ಹಣವಲ್ಲ, ಈ ಬ್ಯಾಗಿನಲ್ಲಿ 1.20 ಲಕ್ಷ ರೂ. ಮಾತ್ರ ಇದೆ ಎಂದಿದ್ದಾರೆ. ಆಗ , ವೆಂಕಟೇಸ್ ಬ್ಯಾಗ್ ಗಿಳನಲ್ಲಿ 1.20 ಲಕ್ಷ ರೂ. ಇತ್ತು. ನನ್ನ ಮಗ ವಸತಿ ಕಾಲೇಜ್‌ಗೆ ಕಟ್ಟಲು ಬಂದಿದ್ದೇನೆ ಎಂಧು ತಿಳಿಸಿದ್ದಾರೆ. ಆಗ ಹಣವನ್ನು ವೆಂಕಟೇಶ್ ಅವರಿಗೆ ಶಾಸಕರ ಹಿಂತಿರುಗಿಸಿದ್ದಾರೆ.