ದಾವಣಗೆರೆ: ನ್ಯೂಜಿಲೆಂಡ್‌ನ ಟೆಕ್ಕಿಯೊಬ್ಬರು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಮೂಲದ ವೈದ್ಯೆ ಯುವತಿಯನ್ನು ಹಿಂದೂ ಸಂಪ್ರದಾಯದಂತೆ ವಿವಾಹವಾದ ಘಟನೆ ಇಂದು (ಡಿ.24) ದಾವಣಗೆರೆಯ ಅಪೂರ್ವ ರೆಸಾರ್ಟ್ ನಲ್ಲಿ ನಡೆದಿದೆ.
ಶಾಮನೂರು ಶಿವಶಂಕರಪ್ಪ ಶಿವಗಣಾರಾಧನೆ; ದಾವಣಗೆರೆ ಇತಿಹಾಸದಲ್ಲೇ ದೊಡ್ಡ ಮಟ್ಟದ ನುಡಿನಮನ ಸಕಲ ಸಿದ್ಧತೆ
ನ್ಯೂಜಿಲೆಂಡ್‌ನ ಆಕ್ಲೆಂಡ್ ನಿವಾಸಿ ಸಾಫ್ಟ್‌ವೇರ್ ಇಂಜಿನಿಯರ್, ಕ್ಯಾಂಬೆಲ್ ವಿಲ್‌ವರ್ಥ್ ಮತ್ತು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಮೂಲದ ನೇತ್ರ ವೈದ್ಯೆ ಡಾ| ಪೂಜಾ ನಾಗರಾಜ್ ಅವರ ವಿವಾಹ ಹಿಂದೂ ಸಂಪ್ರದಾಯದಂತೆ ನೆರವೇರಿತು.

ನ್ಯೂಜಿಲೆಂಡ್‌ನ ಕ್ಯಾಂಬೆಲ್ ವಿಲ್ ವರ್ಥ್ ಮತ್ತು ಪೂಜಾ ನಾಗರಾಜ್ ಮದುವೆ ಹಿಂದೂ ಸಂಪ್ರದಾಯದ ಪ್ರಕಾರ ಎಲ್ಲ ವಿಧಿ ವಿಧಾನಗಳು, ಶಾಸ್ತ್ರಗಳು ಹಾಗೂ ಆರಿಶಿಣ, ಧಾರೆ ಶಾಸ್ತ್ರ ಪಾಲನೆಯೊಂದಿಗೆ ನೆರವೇರಿತು. ನ್ಯೂಜಿಲೆಂಡ್‌ನಲ್ಲಿ ವಾಸವಿರುವ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯ ಪಿ. ನಾಗರಾಜ್ ಮತ್ತು ರಾಣಿ ನಾಗರಾಜ್ ದಂಪತಿಯು ತಮ್ಮ ಮಗಳ ಮದುವೆಯನ್ನು ದಾವಣಗೆರೆಯ ಅಪೂರ್ವ ರೆಸಾರ್ಟ್‌ನಲ್ಲಿ ನೆರವೇರಿಸಿದ್ದಾರೆ.
ದಾವಣಗೆರೆ: ಮತ್ತೆ 57 ಸಾವಿರ ಗಡಿದಾಟಿದ ಅಡಿಕೆ ದರ | ಇಂದಿನ ಕನಿಷ್ಠ, ಗರಿಷ್ಠ ದರ ಎಷ್ಟಿದೆ..?
ಮದುವೆಗೆ ಒಂದು ವಾರದಿಂದ ಪೂರ್ವ ತಯಾರಿ ನಡೆದಿದ್ದವು. ಕುಟುಂಬ ಸದಸ್ಯರಿಗೆ ವೀಸಾ ವ್ಯವಸ್ಥೆ ಮಾಡಲಾಗಿತ್ತು. ಎಲ್ಲರೂ ಕೂಡಾ ಮದುವೆಯಲ್ಲಿ ಸಂಭ್ರಮದಿಂದ ಭಾಗಿಯಾದರು. ಎರಡೂ ಕುಟುಂಬಸ್ಥರು ಶೇರ್ವಾನಿ, ಸೀರೆ ಧರಿಸಿ ತಯಾರಾಗಿದ್ರು. ಅರ್ಚನೆ, ಶಾಸ್ತ್ರ ಪೂಜೆಗಳು, ಅರುಂಧತಿ ನಕ್ಷತ್ರ ಮತ್ತು ಎಲ್ಲಾ ಸಂಪ್ರದಾಯಿಕ ವಿಧಿಗಳನ್ನು ಪಾಲಿಸಿ ಮದುವೆ ನಡೆದಿದೆ.
ಈ ಮದುವೆಯಲ್ಲಿ ಹಿಂದೂ ಸಂಪ್ರದಾಯದ ಪ್ರಕಾರ ಎಲ್ಲ ವಿಧಿ ವಿಧಾನಗಳು, ಶಾಸ್ತ್ರಗಳು ಹಾಗೂ ಆರಿಶಿಣ, ಧಾರೆ ಶಾಸ್ತ್ರಗಳು ನಿಖರವಾಗಿ ಪಾಲನೆ ಮಾಡಲಾಗಿದೆ. ಕುಟುಂಬಗಳು, ಸ್ನೇಹಿತರು ಮತ್ತು ಸ್ಥಳೀಯರು ಈ ವೈಭವದ ಮದುವೆಗೆ ಸಾಕ್ಷಿಯಾದರು.
ತಂದೆ ನಾಗರಾಜ್ ಅವರು ಸಿವಿಲ್ ಇಂಜಿನಿಯರ್ ಆಗಿದ್ದಾರೆ. 2005 ರಲ್ಲಿ ನ್ಯೂಜಿಲೆಂಡ್‌ಗೆ ತೆರಳಿ ಅಲ್ಲಿ ನೆಲೆಸಿದ್ದರು. ಅಲ್ಲಿ ಪೂಜಾ ಮತ್ತು ಕ್ಯಾಂಬೆಲ್ ನಡುವೆ ಪ್ರೀತಿ ಆರಂಭವಾಯಿತು. ಎರಡೂ ಕುಟುಂಬಗಳ ಜೊತೆಗೂಡಿ, ಹಿಂದೂ ಸಂಪ್ರದಾಯದಂತೆ ನಡೆಯಿತು.
ವರ ಕ್ಯಾಂಬೆಲ್ ವಿಲ್ ವರ್ಥ್ ನ್ಯೂಜಿಲೆಂಡ್‌ನ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದು, ಹಿಂದೂ ಸಂಪ್ರದಾಯದಂತೆ ಮದುವೆಯಾಗಲು ಇಷ್ಟಪಟ್ಟಿದ್ದಾರೆ. ಇದೇ ಕಾರಣಕ್ಕೆ ದಾವಣಗೆರೆಯಲ್ಲಿ ಮದುವೆ ನೆರವೇರಸಲಾಗಿದೆ.
ನ್ಯೂಜಿಲೆಂಡ್‌ನಲ್ಲಿ ಬೆಳೆದಿದ್ದರೂ ಕೂಡ ಕ್ಯಾಂಬೆಲ್ ವಿಲ್ ವರ್ಥ್ ಭಾರತೀಯ ಸಂಪ್ರದಾಯಗಳ ಬಗ್ಗೆ ಅಪಾರ ಗೌರವ ತೋರಿದ್ದರು. ಹಿಂದೂ ಪದ್ಧತಿಯಂತೆ ಪೂಜಾ ನಾಗರಾಜ್ ಮದುವೆ ಆಗಬೇಕು ಎಂದು ಆಸೆ ವ್ಯಕ್ತಪಡಿಸಿದ್ದರು. ಅದೇ ಕಾರಣಕ್ಕೆ ಹಿಂದೂ ಸಂಸ್ಕೃತಿಯಂತೆ ಸಪ್ತಪದಿ ತುಳಿದಿದ್ದಾರೆ.
ವಿವಾಹ ಸಮಾರಂಭದಲ್ಲಿ ಭಾರತೀಯ ಸಂಸ್ಕೃತಿಯ ಸೊಗಡು, ಸಂಪ್ರದಾಯಗಳ ವೈಭವ ಹಾಗೂ ಕುಟುಂಬದ ಆತ್ಮೀಯತೆ ಕಾಣಿಸುತ್ತಿತ್ತು. ವಧು-ವರರು ಖುಷಿ ಖುಷಿಯಾಗಿ ಭಾರತೀಯ ಸಂಪ್ರದಾಯದಂತೆ ವಿವಾಹವಾಗಿ ಹೊಸ ಜೀವನಕ್ಕೆ ಕಾಲಿಟ್ಟರು.



