ದಾವಣಗೆರೆ: ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಅಪರಾಧ ಕೃತ್ಯದಲ್ಲಿ ಭಾಗಿಯಾಗಿ ಶಾಂತಿ, ಸುವ್ಯವಸ್ಥೆಗೆ ಭಂಗ ತಂದಿದ್ದ 22 ಮಂದಿ ರೌಡಿಶೀಟರ್‌ಗಳನ್ನು ಗಡಿಪಾರು ಮಾಡಿದ್ದು,ಈಗಾಗಲೇ 13 ಮಂದಿ ಜಿಲ್ಲೆ ಗಡಿ ತೊರೆದು ಬೇರೆ ಜಿಲ್ಲೆಗಳಿಗೆ ಹೋಗಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠ ಸಿ.ಬಿ.ರಿಷ್ಯಂತ್ ತಿಳಿಸಿದರು.
ಮಾಧ್ಯಮ ಸಂವಾದದಲ್ಲಿ ಮಾತನಾಡಿ ಮಟ್ಕಾ, ಇಸ್ಪೀಟ್, ಹೊಡೆದಾಟ, ಕೊಲೆ, ಕೊಲೆ ಬೆದರಿಕೆ, ಕೊಲೆ ಯತ್ನ ಸೇರಿ ಶಾಂತಿಗೆ ಭಂಗ ಉಂಟು ಮಾಡುವ ಕ್ರಿಮಿ
ನಲ್ ಚಟುವಟಿಕೆಗಳಲ್ಲಿ 22 ಜನರ ಗಡಿಪಾರಿಗೆ ಶಿಫಾರಸ್ಸು ಮಾಡಲಾಗಿತ್ತು ಎಂದರು.
ಗಡಿಪಾರಿಗೆ ಶಿಫಾರಸ್ಸು ಮಾಡಿದ್ದವರ ಪೈಕಿ 13 ಜನ ಗಡಿ ತೊರೆದು, ದೂರದ ಕಲಬುರಗಿ, ಚಾಮರಾಜ ನಗರ ಮತ್ತಿತರೆ ಹೊರ ಜಿಲ್ಲೆಗಳಿಗೆ ಹೋಗಿದ್ದು, ಅಲ್ಲಿನ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ನಿತ್ಯ ಸಹಿ ಮಾಡಬೇಕಾಗುತ್ತದೆ. ಇನ್ನು ಒಂದೆರಡು ದಿನಗಳಲ್ಲಿ ಉಳಿದವರೂ ಜಿಲ್ಲೆಯ ಗಡಿ
ತೊರೆಯಲಿದ್ದಾರೆ. ಒಂದು ವೇಳೆ ಗಡೀಪಾರು ಆದೇಶ ಉಲ್ಲಂಘಿಸಿ, ಜಿಲ್ಲಾ ವ್ಯಾಪ್ತಿಯಲ್ಲೇ ಕಂಡು ಬಂದರೆ ಅ೦ತಹವರನ್ನು ಬಂಧಿಸಿ, ಮುಂದಿನ ಕಾನೂನುಪ್ರಕ್ರಿಯೆಗೆ ಒಳಪಡಿಸುತ್ತೇವೆ ಎಂದು ಎಚ್ಚರಿಸಿದರು.
ಚೆಕ್‌ಪೋಸ್ಟ್‌ನಲ್ಲಿ ಜನ, ರೈತರಿಗೆ ತೊಂದರೆ
ಇಲ್ಲ ಚುನಾವಣಾ ನೀತಿ, ಸಂಹಿತ ಜಾರಿ ಹಿನ್ನೆಲೆಯಲ್ಲಿ ಚೆಕ್ ಪೋಸ್ಟ್‌ಗಳಲ್ಲಿ ಜಿಲ್ಲೆಯ ಸಾಮಾನ್ಯ ಪ್ರಯಾಣಿಕರಿಗೆ, ಮಾರುಕಟ್ಟೆಗೆ ದವಸ ಧಾನ್ಯ ತಂದು ಮಾರಾಟ ಮಾಡುವ ರೈತರಿಗೆ ತೊಂದರೆಯಾಗದಂತೆ
ಕಾರ್ಯನಿರ್ವಹಿಸಲು ಎಲ್ಲಾ ಅಧಿಕಾರಿ, ಸಿಬ್ಬಂದಿಗೆ ಸೂಚಿಸಲಾಗಿದೆ ಎ೦ದು ಹೇಳಿದರು.
ಚುನಾವಣಾ ಅಪರಾಧಗಳ ತಡೆಗೆ ತೀವ್ರ
ನಿಗಾವಹಿಸಲಾಗಿದೆ.ಈಗಾಗಲೇ ಜಿಲ್ಲಾದ್ಯಂತ ಆಯ್ದ ಸ್ಥಳಗಳಲ್ಲಿ ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಿ, ವಾಹನಗಳ ತಪಾಸಣೆ ತೀವ್ರಗೊಳಿಸಲಾಗಿದೆ. ಪ್ರತಿ ಚಲನವಲನಗಳ
ಮೇಲೆ ನಿಗಾ ಇಡಲಾಗಿದೆ. ಪ್ರೈಯಿಂಗ್ ಸ್ಟಾಡ್ ತಂಡ, ಸ್ಥಿರ ಕಣ್ಣಾವಲು ತಂಡ, ಸೆಕ್ಟರ್ ಅಧಿಕಾರಿಗಳನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ ಎಂದು ತಿಳಿಸಿದರು.
ಸಾಮಾಜಿಕ ಜಾಲತಾಣಗಳಲ್ಲಿ ಬಿತ್ತರವಾಗುವ ಜಾಹೀರಾತುಗಳಿಗೆ ಪೂರ್ವಾನುಮತಿ ಅಗತ್ಯ. ಚುನಾವಣಾ ಆಯೋಗ ಸಾಮಾಜಿಕ ಜಾಲತಾಣಗಳ ನಿರ್ವಹಣೆ, ಪ್ರಸಾರ ಕುರಿತಂತೆ ಹೊರಡಿಸಿರುವ ಆದೇಶವನ್ನು ಎಲ್ಲಾ ಮಾಧ್ಯಮಗಳೂ ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದರು.



