ದಾವಣಗೆರೆ: ರಾಜ್ಯದಲ್ಲಿ ಯುವಕರಿಗೆ ವಿದೇಶಗಳಲ್ಲಿ ಉದ್ಯೋಗ ಕೊಡಿಸುವ ನೆಪದಲ್ಲಿ ವಂಚಿಸುವ ನಕಲಿ ಏಜೆಂಟುಗಳ ಹಾವಳಿ ಹೆಚ್ಚಾಗುತ್ತಿದ್ದು, ಈ ಬಗ್ಗೆ ಸಾರ್ವಜನಿಕರು ಜಾಗರೂಕರಾಗಿರಬೇಕು ಅಲ್ಲದೆ ಉದ್ಯೋಗದ ಆಮಿಷ ಒಡ್ಡುವ ಅನಧಿಕೃತ ಕಂಪನಿ ಅಥವಾ ವ್ಯಕ್ತಿಗಳ ವಿರುದ್ಧ ಸ್ಥಳೀಯ ಪೊಲಿಸ್ ಠಾಣೆಗಳಲ್ಲಿ ದೂರು ದಾಖಲಿಸುವಂತೆ ಜಿಲ್ಲಾ ಪೊಲಿಸ್ ವರಿಷ್ಠಾಧಿಕಾರಿ ಎಸ್.ಬಿ. ರಿಷ್ಯಂತ್ ಮನವಿ ಮಾಡಿದ್ದಾರೆ.
ಭಾರತ ಸರ್ಕಾರ ವಿದೇಶಾಂಗ ಸಚಿವಾಲಯದ ಬೆಂಗಳೂರಿನ ಆಫೀಸ್ ಆಫ್ ಪ್ರೊಟೆಕ್ಟರ್ ಆಫ್ ದಿ ಎಮಿಗ್ರೆಂಟ್ಸ್ ಕಚೇರಿ ವತಿಯಿಂದ ಸಾಗರೋತ್ತರ ನೇಮಕಾತಿಗೆ ಸಂಬಂಧಿಸಿದಂತೆ ಅಧಿಕೃತ ನೋಂದಾಯಿತ ಏಜೆಂಟ್ ಕಂಪನಿಗಳ ಪಟ್ಟಿಯನ್ನು ತಯಾರಿಸಿ ಪ್ರಕಟಿಸಿದ್ದು ಸಾರ್ವಜನಿಕರಲ್ಲಿ ಈ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಕಂಪನಿಗಳ ಬಗ್ಗೆ ಮಾಹಿತಿ ನೀಡಲಾಗಿದೆ.
ನೋಂದಾಯಿತ ಸಾಗರೋತ್ತರ ನೇಮಕಾತಿಗೆ ಸಂಬಂಧಿಸಿದ ನೊಂದಾಯಿತ ಕಂಪನಿಗಳನ್ನು ಹೊರತುಪಡಿಸಿ ಯಾವುದಾದರೂ ಅನಧಿಕೃತ ಕಂಪನಿಗಳು ಅಥವಾ ವ್ಯಕ್ತಿಗಳು ಸಾರ್ವಜನಿಕರಿಗೆ ವಿದೇಶಗಳಲ್ಲಿ ಉದ್ಯೋಗ ಕೊಡಿಸುವುದಾಗಿ ಆಸೆ, ಆಮಿಷ ಒಡ್ಡಿದಲ್ಲಿ ಅಂತಹ ಕಂಪನಿಗಳ ಅಥವಾ ವ್ಯಕ್ತಿಗಳ ವಿರುದ್ಧ ಸ್ಥಳೀಯ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಿಸುವಂತೆ ಮನವಿ ಮಾಡಲಾಗಿದೆ. ಅಧಿಕೃತ ಕಂಪನಿಗಳ ವಿವರವನ್ನು www.emigrate.gov.in ವೆಬ್‍ಸೈಟ್ ಮೂಲಕವೂ ಪಡೆಯಬಹುದು.
ಬೆಂಗಳೂರಿನ ಆಫೀಸ್ ಆಫ್ ಪ್ರೊಟೆಕ್ಟರ್ ಆಫ್ ದಿ ಎಮಿಗ್ರೆಂಟ್ಸ್ ಇವರ ವತಿಯಿಂದ ಸಲ್ಲಿಸಿರುವ ಅಧಿಕೃತ ನೊಂದಾಯತ ಏಜೆಂಟ್ ಕಂಪನಿಗಳ ಪಟ್ಟಿ ವಿವರ ಇಂತಿದೆ. ಬೆಂಗಳೂರಿನ ದಿ.ಅಮೀನ್ ಗ್ರೂಪ್, ಜಾಬ್‍ಕ್ರಾಫ್ಟ್, ರೆಹೆಮಾನ್ ಎಂಟರ್ ಪ್ರ್ಯೆಸಸ್, ಸೀಮಾ ಎಂಟರ್ ಪ್ರೈಸಸ್, ಯೂಥಾಲಿಯಾ ಸಲ್ಯೂಷನ್ಸ್ ಪ್ರೈ.ಲಿ., ದುರುಕ್ ಆಪರೇಷನ್ ಪ್ರೈ.ಲಿ., ಬ್ರಾಡ್‍ಫಾರ್ಡ್ ಗ್ಲೋಬಲ್ ಎಂಟರ್‍ಪ್ರೈಸಸ್ ಪ್ರೈ.ಲಿ., ಕೆಎಸ್‍ಯುಡಬ್ಲ್ಯೂಎಸ್‍ಎಸ್‍ಬಿ, ಕೆ.ವಿ.ಟಿ.ಎಸ್.ಡಿ.ಸಿ., ಇಂಟರ್‍ನ್ಯಾಷನಲ್ ಔಟ್‍ಸೋರ್ಸ್ ಕನ್ಸಲ್ಟಿಂಗ್ ಸರ್ವೀಸಸ್, ಡಿ.ಕೆ.ಎನ್. ಅಡ್ವೈಸರಿ. ಆಪರ್ಚುನಿಟಿ ಲ್ಯಾಬ್ಸ್ ಪ್ರೈ.ಲಿ., ಕೆರಿಯರ್ ಝೋನ್ ಸ್ಟ್ಯಾಫಿಂಗ್ ಸಲ್ಯುಷನ್, ಸಿಲ್ವರ್ ಪೀಕ್ ಗ್ಲೋಬಲ್ ಪ್ರೈ.ಲಿ., ವೀಡೆ ಕನ್ಸಲ್ಟೆಂಟ್ಸ್, ಆದರ್ಶ್ ಸಲ್ಯೂಷನ್ಸ್. ಅಮರ ಗ್ಲೋಬಲ್.
ಮಂಗಳೂರಿನ ಕೆರಿಯರ್ಸ್ ಇಂಟರ್‍ನ್ಯಾಷನಲ್, ರಾಯಲ್ ಸೋರ್ಸ್ ಮ್ಯಾನ್‍ಪವರ್ ಸಲ್ಯೂಷನ್ಸ್ ಮೂಡಬಿದರಿ, ಎವರ್‍ಸರ್ವ್ ಕನ್ಸಲ್ಟೆಂಟ್ಸ್ ಪ್ರೈ.ಲಿ., ಬಂಟ್ವಾಳ ತಾ: ಬಿ.ಸಿ. ರೋಡ್‍ನ ರಾಯ್‍ವಿನ್ ರಿಕ್ರೂಯಿಟ್ಸ್, ಮಂಗಳೂರಿನ ಸುಹಾನ ರಾವೆಲ್ಸ್, ಜೆಮಿನಿ ಎಂಟರ್‍ಪ್ರೈಸಸ್, ಎಎಸ್‍ಎಂಎಎಕ್ಸ್ ಕನ್ಸಲ್ಟೆಂಟ್ಸ್, ಹುಬ್ಬಳ್ಳಿಯ ಬುರಖ್ ಕನ್ಸಲ್ಟೆನ್ಸಿ, ಮಂಗಳೂರಿನ ಮಾಸ್ಟರ್ ಸಲ್ಯೂಷನ್ಸ್, ಕೆರಿಯರ್ ಪಾಯಿಂಟ್, ಸ್ಕೈವೇ ರಿಕ್ರೂಯಿಟ್ಸ್, ಎಕ್ಸ್‍ಪ್ರೆಸ್ ಟೂರ್ಸ್ ಅಂಡ್ ಟ್ರಾವೆಲ್ಸ್, ಫ್ಲೈಕಿಂಗ್ ಇಂಟರ್‍ನ್ಯಾಷನಲ್, ಅಲ್ ಫರಿಶ್ ಇಂಟರ್‍ನ್ಯಾಷನಲ್, ಎಂ.ಎ. ಎಂಟರ್‍ಪ್ರೈಸಸ್. ಉಡುಪಿಯ ಮಾಸ್ಟರ್ ಮ್ಯಾನ್‍ಪವರ್ ಸರ್ವೀಸಸ್, 4 ಕಾರ್ನರ್ಸ್ ಮ್ಯಾನ್‍ಪವರ್ ಏಜೆನ್ಸಿ,
ಅಧಿಕೃತ ಏಜೆಂಟರುಗಳ ಶಾಖೆ ವಿವರಗಳು ಇಂತಿವೆ. ಬೆಂಗಳೂರಿನ ಜೆರ್ರಿ ವರ್ಘಿಸ್ ಕನ್ಸಲ್ಟೆಂಟ್ಸ್, ಮಂಗಳೂರಿನ ಇಂಟರ್‍ನ್ಯಾಷನಲ್ ಔಟ್‍ಸೋರ್ಸಿಂಗ್ ಕನ್ಸಲ್ಟಿಂಗ್ ಸರ್ವೀಸಸ್, ರೆಹಮಾನ್ ಎಂಟರ್‍ಪ್ರೈಸಸ್, ಹೆರಾ ಇಂಟರ್‍ನ್ಯಾಷನಲ್ ಟ್ರಾವೆಲ್ ಸರ್ವಿಸಸ್.
ಸಾಗರೋತ್ತರ ನೇಮಕಾತಿಗೆ ಸಂಬಂಧಿಸಿದ ಮೇಲ್ಕಂಡ ನೊಂದಾಯಿತ ಕಂಪನಿಗಳ ಹೊರತುಪಡಿಸಿ ಯಾವುದಾದರೂ ಅನಧಿಕೃತ ಕಂಪನಿಗಳು ಅಥವಾ ವ್ಯಕ್ತಿಗಳು ಸಾರ್ವಜನಿಕರಿಗೆ ವಿದೇಶಗಳಲ್ಲಿ ಉದ್ಯೋಗ ಕೊಡಿಸುವುದಾಗಿ ಆಸೆ,ಆಮಿಷ ಒಡ್ಡಿದಲ್ಲಿ ಅಂತಹ ಕಂಪನಿಗಳ ಅಥವಾ ವ್ಯಕ್ತಿಗಳ ವಿರುದ್ಧ ಸ್ಥಳೀಯ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.