ದಾವಣಗೆರೆ: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಹಿರಿಯ ಶಾಸಕರಾಗಿದ್ದ ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದ ತೆರವಾದ ಸ್ಥಾನಕ್ಕೆ ಉಪ ಚುನಾವಣೆಗೆ ಅವರ ಕುಟುಂಬದವರೇ ಅಭ್ಯರ್ಥಿಯಾಗಬೇಕು ಎಂಬ ಚರ್ಚೆ ನಡೆಯುತ್ತಿದೆ. ಈ ಹೊತ್ತಿನಲ್ಲಿ ಅವರ ಪುತ್ರ ಎಸ್.ಎಸ್.ಗಣೇಶ್ ಅವರೇ ಅಭ್ಯರ್ಥಿಯಾಗಲಿ ಎಂದು ಬಿಜೆಪಿಯ ಹಿರಿಯ ನಾಯಕ, ಮಾಜಿ ಸಚಿವ ಎಸ್.ಎ. ರವೀಂದ್ರನಾಥ್ ಹೇಳಿದ್ದಾರೆ.
ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ 6ನೇ ತರಗತಿ ಪ್ರವೇಶಕ್ಕೆ ಅರ್ಜಿ ಆಹ್ವಾನ
ನಾಗನೂರಿನಲ್ಲಿ ನಡೆದ ಶಾಮನೂರು ಶಿವಶಂಕರಪ್ಪ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಅವರು, ಶಾಮನೂರು ಮನೆತನದವರೇ ಅಭ್ಯರ್ಥಿ ಆಗಬೇಕು ಎನ್ನುವುದು ಎಲ್ಲ ಕಡೆ ಚರ್ಚೆ ನಡೆಯುತ್ತಿದೆ. ಮಾಧ್ಯಮದಲ್ಲಿಯೂ ಸಹ ಇದೇ ಚರ್ಚೆ ನಡೆಯುತ್ತಿರುವುದನ್ನು ಗಮನಿಸಿದ್ದೇನೆ. ನಾನು ಸಹ ವೈಯಕ್ತಿಕವಾಗಿ ಎಸ್.ಎಸ್. ಗಣೇಶ್ ಅಭ್ಯರ್ಥಿ ಆಗಲಿ ಎಂದು ಸಲಹೆ ನೀಡುತ್ತೇನೆ. ಕಾಂಗ್ರೆಸ್ ಪಕ್ಷದ ನಿರ್ಧಾರ ಏನು ಇದೆಯೋ ಗೊತ್ತಿಲ್ಲ. ನಮ್ಮ ಪಕ್ಷದಿಂದ ಅಭ್ಯರ್ಥಿ ಇರಲಿದ್ದಾರೆ ಎಂದರು.
ದಾವಣಗೆರೆ: ಅಡಿಕೆಗೆ ಬಂಗಾರದ ಬೆಲೆ- ಬೆಳೆಗಾರರು, ಖೇಣಿದಾರರಿಗೆ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳ ಕಿರಿಕ್
1999 ರಲ್ಲಿಯೇ ಒಮ್ಮೆ ಶಿವಶಂಕರಪ್ಪನವರು ಗಣೇಶ್‌ಗೆ ಸೀಟ್ ಬಿಟ್ಟುಕೊಡಬೇಕಣ್ಣ ಎಂದಿದ್ದರು. ಆಗ ನಾನು ನಾನು ಬಿಟ್ಟುಕೊಡಬಹುದು, ಆದರೆ ಜನ ಬಿಟ್ಟುಕೊಡಬೇಕಲ್ಲಪ್ಪ ಎಂದು ತಮಾಷೆ ಮಾಡಿದ್ದೆ. ಅವರ ಪಕ್ಷದ ಆಂತರಿಕ ನಿರ್ಧಾರ ಏನೇ ಇರಲಿ, ಗಣೇಶ್ ಅವರು ಸ್ಪರ್ಧಿಸುವುದು ಸೂಕ್ತ ಎಂದರು.
ನನಗೆ ಶುಗರ್ ಇಲ್ಲ, ಬಿಪಿ ಇಲ್ಲ. ನಿನಗೆ ಚಿಕ್ಕ ವಯಸ್ಸಿಗೆ ಎಲ್ಲ ಬಂದಿದೆ. ನನ್ನ ತರ ನೀನು ಹೆಲ್ತ್ ಟಿಪ್ಸ್ ಪಾಲಿಸಲ್ಲ, ಸೂಪ್ ಕುಡಿಯಲ್ಲ ಎಂದು ಶಾಮನೂರು ಶಿವಶಂಕರಪ್ಪ ಅವರು ಯಾವಾಗಲೂ ನನ್ನ ಕಾಲೆಳೆಯುತ್ತಿದ್ದರು ಎಂದು ರವೀಂದ್ರನಾಥ್ ನೆನಪಿಸಿಕೊಂಡರು.
ಯಾವುದೇ ವಿಷಯಕ್ಕೂ ಅತಿಯಾಗಿ ಚಿಂತಿಸದೆ, ನಗುತ್ತಾ ತಮಾಷೆ ಮಾಡುತ್ತಲೇ ಅವರು ಆಯಸ್ಸು ವೃದ್ಧಿಸಿಕೊಂಡಿದ್ದರು ಎಂದು ಸ್ಮರಿಸಿದರು.



